ಮುಂಬೈ:- ಪತ್ನಿಯಿಂದ ಪತಿಯ ವಾಟ್ಸಪ್ ಹ್ಯಾಕ್ ಮಾಡಿದ್ದು, ಪರ ಸ್ತ್ರೀಯರೊಂದಿಗೆ ರಾಸಲೀಲೆ ನೋಡಿ ಶಾಕ್ ಆಗಿದ್ದಾರೆ.
ಕೃಷಿ ಹೊಂಡದಲ್ಲಿ ಈಜಲು ಹೋಗಿ ಅವಘಡ: ನೀರಲ್ಲಿ ಮುಳುಗಿ ಇಬ್ಬರು ಸ್ನೇಹಿತರು!
ಪತಿ ಅಬ್ದುಲ್ ಶರೀಖ್ ಖುರೇಷಿಯ ರಾಸಲೀಲೆಗಳನ್ನು ನೋಡಿ ಶಾಕ್ ಆದ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆತ ಈಗ ಅರೆಸ್ಟ್ ಆಗಿದ್ದಾನೆ. ಅಶ್ಲೀಲ ಚಟುವಟಿಕೆಗಳಿಗೆ ಗಂಡನ ನಿರಂತರ ಬೇಡಿಕೆಗಳಿಂದ ಬೇಸತ್ತ ಪತ್ನಿ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಆದರೆ ಸುಪ್ರೀಂ ಕೋರ್ಟ್ನ ಗೈಡ್‌ಲೈನ್ಸ್ ಪ್ರಕಾರ ಆತನನ್ನು ಬಂಧಿಸಲಾಗಲಿಲ್ಲ. ಈ ಹಿನ್ನೆಲೆ ದಾಖಲೆಗಳಿಗಾಗಿ ಪತ್ನಿ ಆತನ ವಾಟ್ಸಪ್ ಹ್ಯಾಕ್ ಮಾಡಿದ್ದಾಳೆ. ಆತನ ಚಾಟ್ ಹಿಸ್ಟರಿಯನ್ನು ಪರಿಶೀಲಿಸಿದ ವೇಳೆ ಪತಿಯ ಕಾಮಪುರಾಣಗಳು ಒಂದೊಂದಾಗಿ ಹೊರಬಿದ್ದಿದೆ
ಅಬ್ದುಲ್ ಶಾರಿಕ್ ಖುರೇಷಿ ತನಗೆ ಮದುವೆಯಾಗಿ 3 ವರ್ಷದ ಮಗಳಿರುವ ವಿಷಯವನ್ನು ಮರೆಮಾಚಿ, ಅನೇಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಸಾಧಿಸಿ, ಖಾಸಗಿ ಕ್ಷಣಗಳ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಕೂಡ ಮಾಡುತ್ತಿದ್ದ ಎಂಬುವುದು ತಿಳಿದು ಬಂದಿದೆ.
ಈ ಸಂಬಂಧ ದೂರು ದಾಖಲಿಸಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.