ಬೆಳಗಾವಿ:- ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಗಂಡನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.2 ರವರೆಗೂ ಭಾರೀ ಮಳೆ: ಇಲ್ಲೆಲ್ಲಾ ರೆಡ್ ಅಲರ್ಟ್ ಘೋಷಣೆ!
33 ವರ್ಷದ ಸುನೀಲ್ ಮೂಲಿಮನಿ ಮೃತ ಗಂಡ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಹೆಂಡತಿ ಕಾರಣ ಅಂತ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸದ್ಯ ಉದ್ಯಮಬಾಗ ಠಾಣೆಯಲ್ಲಿ 108 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.
ನಾಲ್ಕು ವರ್ಷದ ಹಿಂದೆ ಪೂಜಾ ಎಂಬುವವರನ್ನು ಸುನೀಲ್ ಮದುವೆಯಾಗಿದ್ದರು. ಮೂರು ವರ್ಷದ ಮಗು ಕೂಡ ಇದೆ. ‘ನನ್ನ ಸಾವಿಗೆ ನನ್ನ ಪತ್ನಿಯೇ ಕಾರಣ’ ಎಂದು ಸುನೀಲ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಿದೆ.