ಚಾಮರಾಜನಗರ:- ಕಾಡಾನೆ ಆನೆ ದಾಳಿ ನಡೆಸಿದ ಪರಿಣಾಮ ರೈತ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಕೊರಮನಕತ್ತರಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಕೊರಮನಕತ್ತರಿ ನಂಜಪ್ಪ (60) ಎಂದು ಗುರುತಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರವನ್ಯಧಾಮ ವ್ಯಾಪ್ತಿಯ ಪಿಜಿಪಾಳ್ಯ ಬೀಟ್ ಸಮೀಪದ ತೋಟದಮನೆಯಲ್ಲಿ ವಾಸ ಇರುವ ಈತ ಒಕ್ಕಣೆ ಮಾಡಲಾಗಿದ್ದ ಅರಿಶಿಣವನ್ನು ರಾತ್ರಿ ವೇಳೆ ಕಾವಲು ಕಾಯುತ್ತಿದ್ದತಹ ಸಂದರ್ಭದಲ್ಲಿ ಆನೆ ದಾಳಿ ಮಾಡಿದ್ದು ಇದರ ಪರಿಣಾಮ ಸ್ಥಳದಲ್ಲೇ ಆತ ಮೃತಪಟ್ಟಿದ್ದಾರೆ.
ಮಾಹಿತಿ ಅರಿತುಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ,ಪೊಲೀಸರು ಮುಂದಿನ ಕ್ರಮಕ್ಕೆ ಕೈಗೊಂಡಿದ್ದಾರೆ.