ಹಾಸನ:- ತಾಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಗುಂಪೊಂದು ಮಹಿಳೆ ಮೇಲೆ ದಾಳಿ ಮಾಡಿದ್ದು, ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರತಿನಿತ್ಯ ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಗೊತ್ತಾ!?
45 ವರ್ಷದ ಚಂದ್ರಮ್ಮ ಕಾಡಾನೆ ದಾಳಿಗೆ ಮೃತಪಟ್ಟ ಮಹಿಳೆ. ಚಂದ್ರಮ್ಮ ಶುಕ್ರವಾರ ಬೆಳಗ್ಗೆ ಡಾ.ಕರುಣ್ ಎಂಬುವವರ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಒಟ್ಟು ಹನ್ನೆರಡು ಮಂದಿ ಮಹಿಳೆಯರು ತೋಟಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಐದು ಕಾಡಾನೆಗಳು ದಾಳಿ ಮಾಡಿವೆ.
ಈ ವೇಳೆ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದು ಚಂದ್ರಮ್ಮ ಕಾಡಾನೆ ಬಳಿ ಸಿಲುಕಿಕೊಂಡಿದ್ದರು. ಚಂದ್ರಮ್ಮನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ ಕಾಲಿನಿಂದ ತುಳಿದು ಭೀಕರವಾಗಿ ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.