ಚಾಮರಾಜನಗರ : ರೈತನ ಜಮೀನಿನಲ್ಲಿ ಅಕ್ರಮ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವನ್ನಪ್ಪಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಆಲತ್ತೂರು ಗ್ರಾಮದ ರೈತರ ರಾಜೇಶ್ ಎಂಬುವವರ ಸರ್ವೇನಂಬರ್ 155 ರಲ್ಲಿ ಘಟನೆ ನಡೆದಿದೆ. ರೈತ ರಾಜೇಶ್ ತಮ್ಮ ಜಮೀನಿನಲ್ಲಿ ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಅಳವಡಿಸಿದ್ದು, ಈ ತಂತಿ ತುಳಿದು ಸುಮಾರು 40 ವರ್ಷ ವಯಸ್ಸಿನ ಕಾಡಾನೆ ಸಾವು
ಮಹಾಲಿಂಗಪುರ ಪಟ್ಟಣದಲ್ಲಿ ಜೆಸಿಬಿ ಘರ್ಜನೆ ; 30 ಕುಟುಂಬಗಳು ವಾಸವಿದ್ದ ಶೆಡ್‌ಗಳ ತೆರವು
ಸ್ಥಳಕ್ಕೆ ಓಂಕಾರ ಅರಣ್ಯ ವಲಯದ ಆರ್.ಎಫ.ಓ ಸತೀಶ್ ಹಾಗೂ ಸಿಬ್ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳ ಪರಿಶೀಲನೆ ನಂತರ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.