ಕ್ಯಾಲಿಫೋರ್ನಿಯಾ: ಲಾಸ್ ಏಂಜಲೀಸ್‌ನ ಉತ್ತರಕ್ಕೆ ಕಡಿದಾದ ಪರ್ವತಗಳಲ್ಲಿ ಕಳೆದ ಕೆಲ ದಿನಗಳಿಂದ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚು ಮುಂದುವರೆದಿದೆ. ಗಂಟೆ ಗಂಟೆಗೂ ವೇಗವಾಗಿ ಕಾಡ್ಗಿಚ್ಚು ವ್ಯಾಪಿಸುತ್ತಿದ್ದು ಇದುವರೆಗೂ 50,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಆದೇಶವನ್ನು ನೀಡಲಾಗಿದೆ.
ಹ್ಯೂಸ್ ಬೆಂಕಿಯು ಬೆಳಗಿನ ಜಾವದಲ್ಲಿ ಆವರಿಸಿದ್ದು ಆರು ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳಲ್ಲಿ (39 ಚದರ ಕಿಲೋಮೀಟರ್) ಮರಗಳು ಮತ್ತು ಪೊದೆಗಳು ಬೆಂಕಿಗೆ ಆಹುತಿಯಾಗಿದೆ. . ಭೂಮಿ ಮತ್ತು ವಾಯುವಿನ ಮೇಲೆ ಕಾಡ್ಗಿಚ್ಚು ಪ್ರಭಾವ ತೀವ್ರ ಕಾಡುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ ಗಾಳಿಯು ವೇಗವಾಗಿರಲಿಲ್ಲ, ಇದು ಅಗ್ನಿಶಾಮಕ ವಿಮಾನಗಳು ಹತ್ತಾರು ಸಾವಿರ ಗ್ಯಾಲನ್‌ಗಳಷ್ಟು ಅಗ್ನಿಶಾಮಕ ನಿರೋಧಕವನ್ನು ಸುರಿಯಲು ಅವಕಾಶ ಮಾಡಿಕೊಟ್ಟಿತು. ಇಂದು ನಾವು ಇರುವ ಪರಿಸ್ಥಿತಿಯು 16 ದಿನಗಳ ಹಿಂದೆ ನಾವು ಇದ್ದ ಪರಿಸ್ಥಿತಿಗಿಂತ ಬಹಳ ಭಿನ್ನವಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಅಗ್ನಿಶಾಮಕ ಮುಖ್ಯಸ್ಥ ಆಂಥೋನಿ ಮರ್ರೋನ್ ಹೇಳಿದ್ದಾರೆ.