ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಇನ್ನು ಮುಂದೆ ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಡೇರಿಲ್ ಮಿಚೆಲ್ ಹೇಳಿದರು.
ನಾವು ಹೊರಟ 20 ನಿಮಿಷಗಳ ಬಳಿಕ ವಿಮಾನ ನಿಲ್ದಾಣದ ಬಳಿಯೇ ಕ್ಷಿಪಣಿ ಅಪ್ಪಳಿಸಿದ ವಿಷಯ ದುಬೈಗೆ ಇಳಿದ ನಂತರ ತಿಳಿಯಿತು. ನಮ್ಮ ಕುಟುಂಬ ನಿದ್ದೆಯಿಲ್ಲದೇ ಹಲವು ರಾತ್ರಿಗಳನ್ನು ಕಳೆದಿದೆ ಎಂದು ಹೇಳಿದರು.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ಇಂಗ್ಲೆಂಡ್ ಆಟಗಾರ ಟಾಮ್ ಕರ್ರನ್ ಬಗ್ಗೆ ಮಾತನಾಡಿದ ರಿಷಾದ್, ಅವರು ವಿಮಾನ ನಿಲ್ದಾಣಕ್ಕೆ ಹೋದಾಗ ನಿಲ್ದಾಣ ಮುಚ್ಚಲ್ಪಟ್ಟಿದೆ ಎಂದು ತಿಳಿಸಲಾಯಿತು. ವಿಮಾನ ಮುಚ್ಚಿದ ವಿಚಾರ ತಿಳಿದು ಅವರು ಚಿಕ್ಕ ಮಗುವಿನಂತೆ ಅಳಲು ಪ್ರಾರಂಭಿಸಿದರು. ಅವರನ್ನು ಮೂವರಿಂದ ಸಮಾಧಾನ ಮಾಡಲಾಯಿತು ಎಂದು ತಿಳಿಸಿದರು.
ಉಳಿದ ಪಂದ್ಯಗಳನ್ನು ಕರಾಚಿಯಲ್ಲಿ ಆಡಲು ಪಿಸಿಬಿ ಮುಂದಾಗಿತ್ತು. ಈ ನಿಟ್ಟಿನಲ್ಲಿ ವಿದೇಶಿ ಆಟಗಾರರನ್ನು ಮನವೊಲಿಸುವ ಕೆಲಸ ನಡೆಸುತ್ತಿತ್ತು. ಆದರೆ ಹಿಂದಿನ ದಿನ ಇಲ್ಲಿ ಎರಡು ಡ್ರೋನ್ ದಾಳಿ ನಡೆದಿರುವ ವಿಚಾರವನ್ನು ಮರೆ ಮಾಡಿದ್ದರು. ಮರು ದಿನ ಡ್ರೋನ್ ದಾಳಿ ನಡೆದ ವಿಚಾರ ಗೊತ್ತಾಯಿತು ಎಂದು ರಿಷದ್ ನುಡಿದರು.