ಬೆಂಗಳೂರು: ಬೆಂಗಳೂರಿನಲ್ಲಿ ಡಿಆರ್‌ಡಿಓ ವಿಂಗ್ ಕಮಾಂಡರ್ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್ ಮೊದಲು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವುದನ್ನು ಬಹಿರಂಗಪಡಿಸಿವೆ, ಆರಂಭಿಕ ವರದಿಗಳಿಗೆ ವಿರುದ್ಧವಾಗಿದೆ.
ಇದೀಗ ಟೆಕ್ಕಿ ವಿಕಾಸ್ ಕುಮಾರ್ ನೀಡಿದ ದೂರಿನ ಹಾಗೂ ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧವೇ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್ಐಆರ್ನಲ್ಲಿ ನೇರವಾಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ.
ನೀವು ಯಾವಾಗಲೂ ಯಂಗ್ ಆಗಿ ಕಾಣಿಸ್ಬೇಕಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ದೂರುದಾರರಾದ ವಿಕಾಸ ಕುಮಾರ್ ದಿನಾಂಕ 21 ರಂದು ಬೆಳಿಗ್ಗೆ, ಸುಮಾರು 6-20 ರ ಸಮಯದಲ್ಲಿ ತನ್ನ ಸ್ನೇಹಿತನ ಬೈಕ್ ವಾಪಸ್ಸು ನೀಡುವ ಸಂಬಂಧ ಅವರ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಮರೂನ್ ಕಲರ್ ಮಾರುತಿ ಸುಜುಕಿ ಎರ್ಟಿಗಾ ಕಾರ್ನಲ್ಲಿ ಬಂದ ವ್ಯಕ್ತಿ ದ್ವಿ ಚಕ್ರ ವಾಹನಕ್ಕೆ ಟಚ್ ಮಾಡಿದ್ದಾರೆ. ನಂತರ ದೂರುದಾರರ ಬೈಕ್ಗೆ ತಮ್ಮ ಕಾರನ್ನು ಅಡ್ಡ ಹಾಕಿ ತಡೆದು ನಿಲ್ಲಿಸಿ ತಮ್ಮ ಕಾರಿಗೆ ಏಕೆ ಟಚ್ ಮಾಡಿರುತ್ತೀಯಾ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ದೂರುದಾರರು, ಕಾರಿನಲ್ಲಿದ್ದ ವ್ಯಕ್ತಿಗೆ ನೀವೇ ನನ್ನ ಬೈಕ್ಗೆ ಟಚ್ ಮಾಡಿದ್ದೀರಿ ಎಂದು ತಿಳಿಸಿದ್ದಾರೆ. ಅಷ್ಟರಲ್ಲಿ, ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ಬಂದು ಬೈಕ್ ಅನ್ನು ಮತ್ತು ದೂರುದಾರರನ್ನು ತಳ್ಳಿ, ಕೆಳಗೆ ಬೀಳಿಸಿದ್ದಾರೆ. ಜತೆಗೆ, ನಾನು ಏರ್ಪೋರ್ಸ್ನಲ್ಲಿ ಇರುವವರು. ನನ್ನ ಜೊತೆ ಆಟ ಆಡಬೇಡ ಎಂದು ಧಮಕಿ ಹಾಕಿ ಹೊಡೆದಿದ್ದಾರೆ.
ಈ ವೇಳೆ, ದೂರುದಾರರು ಸ್ನೇಹಿತನಿಗೆ ಕರೆ ಮಾಡಲು ಪೋನ್ ತೆಗೆದುಕೊಂಡಾಗ ಕೈಯನ್ನು ಕಚ್ಚಿ ಮೊಬೈಲ್ ಪೋನ್ ಅನ್ನು ಕಿತ್ತುಕೊಂಡು ಬಿಸಾಕಿ ಒಡೆದು ಹಾಕಿದ್ದಲ್ಲದೆ, ಬೈಕ್ ಕೀ ಅನ್ನು ಕಿತ್ತುಕೊಂಡು ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಯಿಸುವ ಉದ್ದೇಶದಿಂದ ಹಿಂಬದಿಯಿಂದ ಕುತ್ತಿಗೆಯನ್ನು ಹಿಡಿದುಕೊಂಡು ಕತ್ತನ್ನು ಹಿಸುಕಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.