ತಾಯಂದಿರ ದಿನವು ನಿಮ್ಮನ್ನು ಬೆಳೆಸಿದ ಮತ್ತು ಇಂದು ನೀವು ಯಾರಾಗಿದ್ದೀರೋ ಆ ವ್ಯಕ್ತಿಯನ್ನು ರೂಪಿಸಿದ ವ್ಯಕ್ತಿಯನ್ನು ಆಚರಿಸುವ ದಿನವಾಗಿದೆ. ಮಗುವಿನ ಜೀವನದಲ್ಲಿ ತಾಯಿಯ ಪ್ರೀತಿ ಮತ್ತು ಪಾತ್ರವು ನಿಸ್ಸಂದೇಹವಾಗಿ ಅತ್ಯಂತ ಮುಖ್ಯವಾಗಿದೆ. ಮಗುವಿನ ಪಾತ್ರ ಮತ್ತು ಮೌಲ್ಯಗಳ ವಿಷಯಕ್ಕೆ ಬಂದಾಗ ತಾಯಿಯೇ ಮೊದಲ ಗುರು.
ತಾಯಿ ತನ್ನ ಪ್ರೀತಿ, ಪೋಷಣೆ ಮತ್ತು ಬೋಧನೆಗಳ ಮೂಲಕ ಮಗುವಿನ ಭವಿಷ್ಯದ ಅಡಿಪಾಯ ಹಾಕುತ್ತಾಳೆ. ತಾಯಂದಿರ ಪಾತ್ರವು ಎಷ್ಟು ವರ್ಷಗಳು ಕಳೆದರೂ ಎಂದಿಗೂ ಬದಲಾಗುವುದಿಲ್ಲ ಮತ್ತು ಅವರು ಶಕ್ತಿಯ ಆಧಾರಸ್ತಂಭವಾಗಿ ಉಳಿಯುತ್ತಾರೆ ಮತ್ತು ತಮ್ಮ ಮಕ್ಕಳಿಗಾಗಿ 24×7 ಕೆಲಸ ಮಾಡುವ ಅಪ್ರತಿಮ ವೀರರಾಗಿ ಮುಂದುವರಿಯುತ್ತಾರೆ.
ಹೀಗಾಗಿ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಿ ಅಮ್ಮನ ಮನಸ್ಸನ್ನು ಗೆಲ್ಲಿ.
ಅಮ್ಮಂದಿರ ದಿನಕ್ಕೆ ಶುಭಾಶಯಗಳು ಇಲ್ಲಿದೆ:
- ಅಮ್ಮ… ನೀವೇ ನನ್ನ ಜಗತ್ತು. ನಿಮ್ಮ ವಾತ್ಸಲ್ಯವೇ ನನ್ನ ಬದುಕಿನ ಶಕ್ತಿ… ನಿನ್ನ ಪ್ರೀತಿ ಕಾಳಜಿಗೆ ಸರಿಸಾಟಿ ಯಾರಿಲ್ಲ, ಅಮ್ಮಂದಿರ ದಿನದ ಶುಭಾಶಯಗಳು
- ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯಿರುವುದಿಲ್ಲ, ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ. ನನ್ನ ಬದುಕಿನ ಮಾರ್ಗದರ್ಶಿಗೆ ತಾಯಂದಿರ ದಿನದ ಶುಭಾಶಯಗಳು
- ಉಸಿರು ನೀಡಿದ ದೇವತೆ ನೀನು … ನನ್ನ ಬದುಕಿನ ಮಾರ್ಗದರ್ಶಿ ನೀನು… ನೀನಿಲ್ಲದೆ ಜಗವೇ ಇಲ್ಲ… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
- ದೇವರು ನನಗೆ ನೀಡಿದ ಶ್ರೇಷ್ಠ ಸಂಪತ್ತು ನೀವು… ಅಮ್ಮ ಐ ಲವ್ ಯು…
- ಅಮ್ಮ…. ಸದಾ ಕಾಲ ನನಗೆ ಮಾರ್ಗದರ್ಶನ ನೀಡಿದಿರಿ, ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿದ್ದಿರಿ… ಅಮ್ಮ… ನಾನು ನಿಮಗೆ ಸದಾ ಋಣಿ… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
- ಮಮತೆಯೇ ಮೂರ್ತಿ ಬದುಕಿಗೆ ಸ್ಫೂರ್ತಿ. ಕಣ್ಣಿಗೆ ಕಾಣುವ ದೇವರಿಗೆ ತಾಯಂದಿರ ದಿನದ ಶುಭಾಶಯಗಳು
- ಅಮ್ಮ ನಿಮ್ಮ ಪ್ರೀತಿ ನೋವನ್ನು ಮರೆಸುತ್ತದೆ. ನಿಮ್ಮ ಮಾತುಗಳು ಬದುಕಿಗೆ ಚೈತನ್ಯ ತುಂಬುತ್ತದೆ. ಅಮ್ಮ ತಾಯಂದಿರ ದಿನದ ಶುಭಾಶಯಗಳು.
- ಮನೆಯೇ ಮೊದಲ ಪಾಠ ಶಾಲೆ, ಅಮ್ಮ ತಾನೇ ಮೊದಲ ಗುರು… ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ.