ವಿಶ್ವದ ಅತ್ಯಂತ ದುಬಾರಿ ಮಸಾಲೆ ಕೇಸರಿಗೆ ಈಗ ಬಂಗಾರದಂತಹ ಬೆಲೆ ಬಂದಿದೆ. ಅದಕ್ಕೆ ಕಾರಣ ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿ. ಕಾಶ್ಮೀರದಲ್ಲಿ ಬೆಳೆಯುವ ಕೇಸರಿ ಉನ್ನತ ದರ್ಜೆಯದ್ದು ಎಂಬ ಖ್ಯಾತಿ ಪಡೆದಿದೆ. ಅಲ್ಲದೇ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಕೇಸರಿ ರಫ್ತಾಗುತ್ತಿತ್ತು. ಆದರೀಗ ಅಟ್ಟಾರಿ ವಾಘಾ ಗಡಿ ಬಂದ್ ಆಗಿರುವುದರಿಂದ ಕೇಸರಿ ದುಬಾರಿಯಾಗಿದೆಯಂತೆ.
ಭಾರತವು ಪ್ರತಿ ವರ್ಷ ಅಂದಾಜು 55 ಟನ್ ಕೇಸರಿಯನ್ನು ಬಳಸಲಾಗುತ್ತದೆ. ಸದ್ಯ ಬೇಡಿಕೆ ಹೆಚ್ಚಿರುವುದರಿಂದ ಕೇಸರಿ ದುಬಾರಿಯಾಗಿದೆ. ಕೇಸರಿ ಪ್ರತಿ ಕಿಲೋಗ್ರಾಂಗೆ ₹4.5 ಲಕ್ಷದಿಂದ ₹5 ಲಕ್ಷಕ್ಕೆ ಏರಿದೆ. ಇದು 50 ಗ್ರಾಂ ಚಿನ್ನದ ಬೆಲೆಗೆ ಬಹುತೇಕ ಸಮಾನವಾಗಿದೆ. ಪಹಲ್ಗಾಮ್ ದಾಳಿಗೂ ಮೊದಲು 1.2 ಲಕ್ಷದಿಂದ 2.38 ಲಕ್ಷವಿದ್ದ ಕೇಸರಿ ಬೆಲೆ ಈಗ 5 ಲಕ್ಷಕ್ಕೆ ಏರಿಯಾಗಿದೆ.
ಕೇಸರಿ ಎಂದರೇನು?
ಕೇಸರಿ ಅಥವಾ ಕೇಸರ್, ಕ್ರೋಕಸ್ ಸಟೈವಸ್ ಎಂಬ ಹೂವಿನಿಂದ ಬರುತ್ತದೆ. ಈ ಹೂವಿನ ಮೂರು ಕೆಂಪು ಎಳೆಗಳನ್ನು ಕೈಯಿಂದ ತೆಗೆಯಲಾಗುತ್ತದೆ. ಒಂದು ಕೆಜಿ ಕೇಸರಿಗೆ ಸುಮಾರು 1.5 ಲಕ್ಷ ಹೂವುಗಳು ಬೇಕು.
ಕೇಸರಿಯ ಪ್ರಯೋಗ?
ಕೇಸರಿಯು ಕ್ಯಾರೊಟಿನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಚರ್ಮವನ್ನು UV ಕಿರಣಗಳು ಮತ್ತು ಪರಿಸರದ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ.