ಚಂಡೀಗಢ: ಕೋಟಿ ಮೌಲ್ಯದ ಹೆರಾಯಿನ್ ಜೊತೆಗೆ ಪಂಜಾಬ್‌ನ ಮಹಿಳಾ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದು, ಜಿಲ್ಲಾ ನ್ಯಾಯಾಲಯವು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಸುಮಾರು 2 ಕೋಟಿ ಮೌಲ್ಯದ 17.71 ಮಿ.ಗ್ರಾಂ ಹೆರಾಯಿನ್ ಜೊತೆಗೆ ಮಹಿಳಾ ಕಾನ್‌ಸ್ಟೇಬಲ್ ಅಮನ್‌ದೀಪ್ ಕೌರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಂಧನದ ಬೆನ್ನಲ್ಲೇ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದ್ದು, ಆಕೆಯ ಚರ-ಸ್ಥಿರಾಸ್ತಿಗಳ ಬಗ್ಗೆ ತನಿಖೆ ನಡೆಸಲಾಗಿದ್ದು, ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹ ಮಾಡಿರೋದು ಬೆಳಕಿಗೆ ಬಂದಿದೆ.
ಭಾರೀ ಸ್ಫೋಟ: ಗ್ಯಾಸ್ ಪೈಪ್ ಲೈನ್‌ನಿಂದ ಕಿಲೋಮೀಟರ್ʼಗಳವರೆಗೆ ಹಾರಿದ ಬೆಂಕಿ!
ಈ ಹಿಂದೆ ಪೊಲೀಸರು ಕಾನ್‌ಸ್ಟೇಬಲ್ ಮೇಲೆ ಡೋಪ್ ಪರೀಕ್ಷೆ ನಡೆಸಿದ್ದರು. ಆದರೆ ಅದು ನೆಗೆಟಿವ್ ಬಂದಿತ್ತು ಎನ್ನಲಾಗಿದೆ. ಗೌಪ್ಯ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ತಂಡವು ಲಾಡ್ಲಿ ಧಿ ಚೌಕ್ ಬಳಿಯ ಮೇಲ್ಸೇತುವೆಯ ಕೆಳಗೆ ಚೆಕ್‌ಪಾಯಿಂಟ್ ಅನ್ನು ಸ್ಥಾಪಿಸಿತು. ಈ ವೇಳೆ, ಅಮನ್‌ದೀಪ್ ಕಾರನ್ನು ನಿಲ್ಲಿಸಿ ತಪಾಸಣೆಗೆ ಒಳಪಡಿಸಲಾಯಿತು. ಅದರಲ್ಲಿ 17.71 ಮಿ.ಗ್ರಾಂ ಹೆರಾಯಿನ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.