ಕಲಬುರಗಿ:- ಮದ್ವೆ ಮಾಡ್ಕೊ ಅಂತ ಪೀಡಿಸಿದ್ದಕ್ಕೆ ಮಹಿಳೆ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಮನೆ ಬಿಟ್ಟು ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್ ಫಸ್ಟ್ ರಿಯಾಕ್ಷನ್.. ವೈರಲ್ ಆಡಿಯೋದಲ್ಲಿ ಏನಿದೆ?
ಕಲಬುರಗಿಯ ಕಿಣ್ಣಿ ಸಡಕ್ ಗ್ರಾಮದ ಬಳಿ ಏಪ್ರಿಲ್ 6 ರಂದು ನಡೆದಿದ್ದ ಈ ಕೊಲೆ ಪ್ರಕರಣದ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ.
ಹೆಬ್ಬಾಳ ನಿವಾಸಿ ಆರತಿ ಕೊಲೆಗೈದಿದ್ದ ಪ್ರಿಯಕರ ಶಿವಾನಂದ ಬಂದಿತ ಆರೋಪಿ. ಈತ ವಿವಾಹಿತೆ ಆರತಿ ಜೊತೆ ಅಕ್ರಮ ಸಂಭಂಧ ಹೊಂದಿದ್ದ. ಅಲ್ಲದೇ ಮದ್ವೆಗೆ ಒತ್ತಾಯಿಸಿದ ಹಿನ್ನಲೆ ಕೊಲೆ ಮಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಕೊಲೆಗೂ ಮುನ್ನ ಆರೋಪಿಯು ಗಾಣಗಾಪುರ ದರ್ಶನ ಮಾಡಿಸಿದ್ದ ಎಂದು ತಿಳಿದು ಬಂದಿದೆ
ಕಮಲಾಪುರ ಪೋಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿತ್ತು . ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕಾಲುಂಗರ ಸುಳಿವು ಕೊಟ್ಟಿತ್ತು. ಅದರಂತೆ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ.