ವಿಜಯನಗರ : ಬಸ್ಸಿನಲ್ಲಿ ಎರಡು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದ್ದು, ಮಹಿಳೆಯ ಚೀರಾಟ ಕೇಳಿ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಬಳಿ ಚನ್ನಾಪುರ ಬಳಿ ಘಟನೆ ನಡೆದಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಹೆಸರಿನ ಖಾಸಗಿ ಬಸ್ ನ ಚಾಲಕ ಕೊಟ್ಟೂರು ತಾಲೂಕಿನ ಅಲಬೂರ ನಿವಾಸಿ ಪ್ರಕಾಶ ಮಡಿವಾಳರ (42), ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿಗಳಾದ ಕಂಡಕ್ಟರ್ ರಾಜಶೇಖರ್ (40) ಬಸ್ ಎಜೆಂಟ್ ಸುರೇಶ್ (46) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಎರಡು – ಮೂರು ದಿನದ ದಿಂದೆ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಬೆಳಗಾವಿಯಿಂದ ಉಚ್ಚಂಗಿದುರ್ಗದ ಉಚ್ಚಂಗೆಮ್ಮನ ಜಾತ್ರೆಗೆ ಬಂದಿದ್ದರು. ಉಚ್ಚಂಗೆಮ್ಮನ ಜಾತ್ರೆಗೆ ಮುಗಿಸಿ ವಾಪಸ್ ತೆರಳುವಾಗ ತಡರಾತ್ರಿ ಆಗಿದೆ. ಮಹಿಳೆ ರಾತ್ರಿ ವೇಳೆಯೇ ಬಸ್ಸಿಗಾಗಿ ಮಹಿಳೆ ಕಾಯುತ್ತಿದ್ದಳು. ಈ ವೇಳೆ ಬನಶಂಕರಿ ಹೆಸರಿನ ಬಸ್ ಬಂದಿತ್ತು. ಮಹಿಳೆ ಬಸ್ ಹತ್ತಿದ ವೇಳೆ ಹತ್ತಾರು ಜನರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರೆಲ್ಲ ಮುಂದಿನ ಸ್ಟಾಪ್ ಗೆ ಇಳಿದರು. ಎರಡು ಸಣ್ಣ ಮಕ್ಕಳೊಂದಿಗೆ ಒಬ್ಬಂಟಿ ಮಹಿಳೆ ಇರುವುದನ್ನ ಗಮನಿಸಿದ ಮೂರು ಜನ ಆರೋಪಿಗಳು, ರೂಟ್ ಬದಲಿಸಿ, ಉಚ್ಚಂಗಿದುರ್ಗದಿಂದ ದಾವಣಗೆರೆ ಕಡೆಗೆ ಬರುವ ಬದಲು ಚನ್ನಾಪುರ ಕರೆದು ಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಬಸ್ ನ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಮಾಡ್ತಿರುವ ವೇಳೆ ಮಹಿಳೆಯ ಚೀರಾಟ ಕೇಳಿ ದಾರಿಯಲ್ಲಿ ಹೋಗುತ್ತಿರುವ ಜನರು ಮಹಿಳೆಯನ್ನ ರಕ್ಷಿಸಿದ್ದಾರೆ. ಸದ್ಯ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ಜೈಲಿಗೆ ಕಟ್ಟಿದ್ದಾರೆ.