Close Menu
Ain Live News
    Facebook X (Twitter) Instagram YouTube
    Saturday, June 28
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Cervical Cancer: ಮಹಿಳೆಯರೇ.. ಲೈಂಗಿಕ ಕ್ರಿಯೆ ವೇಳೆ ಎಚ್ಚರ: ಸ್ವಲ್ಪ ನಿರ್ಲಕ್ಷಿಸಿದ್ರೂ ಬರಬಹುದು ಗರ್ಭಕಂಠದ ಕ್ಯಾನ್ಸರ್..!

    By Author AINApril 2, 2025
    Share
    Facebook Twitter LinkedIn Pinterest Email
    Demo

    ಗರ್ಭಕಂಠದ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಮಹಿಳೆಯರ ಗರ್ಭಾಶಯದಲ್ಲಿರುವ ಗರ್ಭಕಂಠದ (ಗರ್ಭಕೋಶದ ಗರ್ಭಾಶಯದ) ಜೀವಕೋಶಗಳಲ್ಲಿ ವೇಗವಾಗಿ ಬೆಳೆಯಲು ಆರಂಭಿಸುತ್ತದೆ. ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳನ್ನು ಗುರುತಿಸುವುದು ಕೂಡ ಕಷ್ಟಕರ.

    ಮಹಿಳೆಯರ ಗರ್ಭಕೋಶದ ಕಂಠದ ಭಾಗದಲ್ಲಿ ಈ ಕ್ಯಾನ್ಸರ್‌ ಬೆಳೆಯುತ್ತದೆ. ಸಾಮಾನ್ಯವಾದ ರೋಗ ನಿರೋಧಕ ವ್ಯವಸ್ಥೆ ಹೊಂದಿರುವ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್‌ ಬೆಳವಣಿಗೆಯಾಗಲು 15ರಿಂದ 20 ವರ್ಷ ಬೇಕಾಗುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ದುರ್ಬಲ ಆಗಿರುವ ಮಹಿಳೆಯರಲ್ಲಿ 5ರಿಂದ 10 ವರ್ಷಗಳಲ್ಲಿ ಕ್ಯಾನ್ಸರ್‌ ಬೆಳೆಯುತ್ತದೆ.

    ಒಂದು ಕಪ್ ಫ್ರೆಂಚ್ ಫ್ರೈಸ್ 25 ಸಿಗರೇಟ್ ಸೇದುವುದಕ್ಕೆ ಸಮಾನ: ನಿಮ್ಮ ಹೃದಯಕ್ಕೆ ಎಷ್ಟು ಅಪಾಯವನ್ನುಂಟು ಮಾಡುತ್ತೆ ಗೊತ್ತಾ..?

    ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವವರಿಗೆ ಮಾತ್ರ ಈ ಕ್ಯಾನ್ಸರ್​ ಆರಂಭಿಕ ಹಂತದಲ್ಲೇ ಗೊತ್ತಾಗುತ್ತದೆ. ಇದು ಮೊದಲು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಹೀಗಾಗಿ, ಬಹುತೇಕ ರೋಗಿಗಳಿಗೆ ತಮಗೆ ಕ್ಯಾನ್ಸರ್ ಬಂದಿದೆ ಎಂದು ಗೊತ್ತಾಗುವಷ್ಟರಲ್ಲಿ ಆ ಕ್ಯಾನ್ಸರ್ ಕೋಶಗಳು ತೀವ್ರವಾಗಿ ಹರಡಿರುತ್ತದೆ. ಇಂತಹ ಸಂದರ್ಭದಲ್ಲಿ ಬದುಕುವ ಸಾಧ್ಯತೆ ಬಹಳ ಕಡಿಮೆ. ಈ ಗರ್ಭಕಂಠದ ಕ್ಯಾನ್ಸರ್​ಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ಪ್ರಮುಖವಾದ ಕಾರಣವಾಗಿದೆ.

    ಗರ್ಭಕಂಠದ ಕ್ಯಾನ್ಸರ್ ಎಂಬುದು ಗರ್ಭಕಂಠದಲ್ಲಿ ಪ್ರಾರಂಭವಾಗುವ ಜೀವಕೋಶಗಳ ಬೆಳವಣಿಗೆಯಾಗಿದೆ. ಗರ್ಭಕಂಠವೆಂಬುದು ಗರ್ಭಾಶಯದ ಕೆಳಗಿನ ಭಾಗವಾಗಿದ್ದು ಅದು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಹೆಚ್​ಪಿವಿ (HPV) ಎಂದು ಕರೆಯಲ್ಪಡುವ ಹ್ಯೂಮನ್ ಪ್ಯಾಪಿಲೋಮವೈರಸ್‌ನ ವಿವಿಧ ತಳಿಗಳು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ ಉಂಟಾಗಲು ಮುಖ್ಯವಾದ ಪಾತ್ರ ವಹಿಸುತ್ತವೆ. ಈ HPV ಲೈಂಗಿಕ ಸಂಪರ್ಕದ ಮೂಲಕ ಹಾದುಹೋಗುವ ಸಾಮಾನ್ಯ ಸೋಂಕು.

    ಬಹುತೇಕ ಗರ್ಭಕಂಠದ ಕ್ಯಾನ್ಸರ್​ HPV ಸೋಂಕಿನಿಂದ ಉಂಟಾಗುತ್ತವೆ. HPV ಲೈಂಗಿಕ ಸಂಪರ್ಕದ ಮೂಲಕ ಹರಡುವ ಒಂದು ವೈರಸ್. ಹೆಚ್ಚಿನ ಜನರಿಗೆ ಈ ವೈರಸ್ ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಇದು ತನ್ನಷ್ಟಕ್ಕೆ ತಾನೇ ದೇಹದಿಂದ ಹೊರಹೋಗುತ್ತದೆ. ಆದರೆ, ಕೆಲವರಿಗೆ ಮಾತ್ರ ಈ ವೈರಸ್ ಕ್ಯಾನ್ಸರ್​ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. HPV ಸೋಂಕು ಕೆಲವೊಮ್ಮೆ ಗರ್ಭಕಂಠದ ಕೋಶಗಳನ್ನು ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುತ್ತದೆ. ನಿಯಮಿತವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಮೂಲಕ ನೀವು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಬಹುದು.

    ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ:

    ಲೈಂಗಿಕವಾಗಿ ಸಕ್ರಿಯರಾಗಿರುವವರು ಕೆಲವೊಂದು ಲಕ್ಷಣಗಳು ಗೋಚರಿಸಿದರೆ ಆದಷ್ಟು ಬೇಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಂಭೋಗದ ನಂತರ, ಪಿರಿಯಡ್ಸ್​ ಮುಗಿದ ನಂತರ ಅಥವಾ ಋತುಬಂಧದ ನಂತರ ಯೋನಿಯಲ್ಲಿ ರಕ್ತಸ್ರಾವ ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಮುಟ್ಟಿನ ಸಮಯದಲ್ಲಿ ವಿಪರೀತ ಮತ್ತು ದೀರ್ಘಕಾಲದವರೆಗೆ ರಕ್ತಸ್ರಾವ ಆಗುವುದು. ಯೋನಿಯಲ್ಲಿ ಕೆಟ್ಟ ವಾಸನೆ ಬರುವುದು, ಸಂಭೋಗದ ಸಮಯದಲ್ಲಿ ಬಹಳ ನೋವು ಉಂಟಾಗುವುದು ಗರ್ಭಕಂಠದ ಕ್ಯಾನ್ಸರ್​ನ ಲಕ್ಷಣಗಳಾಗಿವೆ.

    200 ಸಂಬಂಧಿತ ವೈರಸ್‌ಗಳ ಗುಂಪಾಗಿರುವ HPV ಕೆಲವು ಕಡಿಮೆ ಅಪಾಯಕಾರಿ ಮತ್ತು ಹೆಚ್ಚಿನ ಅಪಾಯಕಾರಿ ವೈರಸ್‌ಗಳನ್ನು ಹೊಂದಿರುತ್ತದೆ. ಹಾಗಂತ ಎಲ್ಲಾ ಅಪಾಯಕಾರಿ ವೈರಸ್‌ಗಳು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ. ಹೆಚ್ಚು ಪ್ರಚಲಿತದಲ್ಲಿರುವ HPV 16 ಮತ್ತು HPV 18ನಿಂದ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ವೈರಸ್‌ಗಳು ಲೈಂಗಿಕ ಸಂಪರ್ಕದ ಮೂಲಕ ಹರಡುತ್ತವೆ.

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಲೈಂಗಿಕವಾಗಿ ಸಕ್ರಿಯವಾಗಿರುವ ಬಹುತೇಕ ಎಲ್ಲಾ ಜನರು HPV ಸೋಂಕಿಗೆ ಒಳಗಾಗಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಈ ಸೋಂಕು ಉಂಟಾಗುತ್ತದೆ. ಆದರೆ, ಹಲವರಿಗೆ ಇದು ಯಾವುದೇ ಅಪಾಯ ಮಾಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ರೋಗನಿರೋಧಕ ಶಕ್ತಿಯು ದೇಹದಿಂದ HPV ಅನ್ನು ಹೊರಹಾಕುತ್ತದೆ. ಹೆಚ್ಚಿನ ಅಪಾಯದ HPVಯೊಂದಿಗಿನ ನಿರಂತರ ಸೋಂಕು ಅಸಹಜ ಕೋಶಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗುತ್ತದೆ. ಅದು ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ.

    ವೈದ್ಯರ ಪ್ರಕಾರ, ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದರೆ ನೀವು HPV ವೈರಸ್‌ಗೆ ಒಳಗಾಗುವ ಅಪಾಯವಿದೆ. HPV ಲೈಂಗಿಕವಾಗಿ ಹರಡುತ್ತದೆ. ಒಂದುವೇಳೆ ನೀವು ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಕ್ರಿಯೆ ನಡೆಸುವವರಾದರೆ ನೀವು ಗರ್ಭಕಂಠದ ಕ್ಯಾನ್ಸರ್ ಅನ್ನು ಹೊಂದುವ ಅಪಾಯವನ್ನು ಹೊಂದಿರುತ್ತೀರಿ. ಲೈಂಗಿಕವಾಗಿ ಸಕ್ರಿಯವಾಗಿರುವುದು ನಿಮಗೆ ಅಪಾಯವನ್ನುಂಟುಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆಯನ್ನು ತೆಗೆದುಕೊಳ್ಳುವುದರಿಂದ ಕಾಲಾನಂತರದಲ್ಲಿ, ನೀವು ಈ ಅಪಾಯದಿಂದ ಶೇ. 95ರಷ್ಟು ಪ್ರಮಾಣದಲ್ಲಿ ಪಾರಾಗಬಹುದು.

    ಲೈಂಗಿಕವಾಗಿ ಸಕ್ರಿಯವಾಗಿರುವ ಪುರುಷರು ಮತ್ತು ಮಹಿಳೆಯರಿಬ್ಬರೂ ನಿಯಮಿತ ತಪಾಸಣೆ, ವ್ಯಾಕ್ಸಿನೇಷನ್‌ಗಳನ್ನು ಹಾಕಿಸಿಕೊಳ್ಳಬೇಕು. ಗರ್ಭಕಂಠದ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡಲು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ.

     

    Demo
    Share. Facebook Twitter LinkedIn Email WhatsApp

    Related Posts

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    ಮುಖ್ಯಮಂತ್ರಿ ಆಸೆ ಇಟ್ಟುಕೊಂಡವರು ಸಿಎಂ ಬದಲಾವಣೆಯ ಊಹಾಪೋಹ ಹಬ್ಬಿಸುತ್ತಿದ್ದಾರೆ: ಯತೀಂದ್ರ!

    June 28, 2025

    ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

    June 28, 2025

    ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ!

    June 28, 2025

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    June 28, 2025

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    June 28, 2025

    ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ: ಈ ಲೀಸ್ಟ್ ನೋಡಿದ್ರೆ ನಿಮ್ಮ ಎದೆಬಡಿತ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ..!

    June 28, 2025

    Power Cut: ನಾಳೆ ಬೆಂಗಳೂರಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ನೋಡಿ?

    June 28, 2025

    ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ, ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ: ಸಿಎಂ ಸೂಚನೆ

    June 28, 2025

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಮಹೋತ್ಸವ ಪೂರ್ವಭಾವಿ ಸಭೆ.!

    June 28, 2025

    ಮಾಜಿ ಮೇಯರ್ ಹತ್ಯೆ ಪ್ರಕರಣ: ಮೋಸ್ಟ್ ವಾಂಟೆಡ್ ರೌಡಿಶೀಟರ್ ರಿಲೀಸ್!

    June 28, 2025

    ಕೋಡಿಮಠದ ಸ್ವಾಮೀಜಿ ಬಳಿ ಚಿನ್ನಾಭರಣ ಕಳವು: 7 ವರ್ಷಗಳ ಬಳಿಕ ಆರೋಪಿ ಅರೆಸ್ಟ್..!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.