ವಿಜಯನಗರ: ಇತ್ತಿಚಿನ ದಿನಗಳಲ್ಲಿ ಸಾರಿಗೆ ಬಸ್ʼಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಇದೀಗ ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ಮಹಿಳೆಯರೇ ತಳ್ಳಿದ ಘಟನೆ ನಡೆದಿದೆ. ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಸ್ಸಿನಲ್ಲಿ ಮಹಿಳೆಯರು ಬಂದಿದ್ದರು.
ಬಿಯರ್ ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ? ಎಣ್ಣೆ ಪ್ರಿಯರು ನೋಡಲೇಬೇಕಾದ ಸ್ಟೋರಿ!
ಕಾರ್ಯಕ್ರಮ ಮುಗಿದ ಬಳಿಕ ತಮ್ಮೂರಿಗೆ ತೆರಳುವ ಬಸ್ಸು ಹತ್ತಿದ್ದಾರೆ. ಆದರೆ ಚಾಲಕ ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಬಸ್ಸು ಚಾಲನೆ ಆಗಿಲ್ಲ. ಕೊನೆಗೆ ಬಸ್ಸಿನಿಂದ ಇಳಿದ ಮಹಿಳೆಯರು ಹಿಂದಿನಿಂದ ತಳ್ಳಿದ್ದಾರೆ. ಮಹಿಳೆಯರು ಬಸ್ಸು ತಳ್ಳುತ್ತಿರುವ ವಿಡಿಯೋ ಫುಲ್ ವೈರಲ್ ವೈರಲ್ ಆಗಿದೆ.