ದೀರ್ಘಕಾಲದವರೆಗೆ ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನದ ಸಮಸ್ಯೆ ಉಲ್ಬಣಗೊಳಿಸಬಹುದು. ಹೌದು ಇದರ ಬಗ್ಗೆ ನೀವು ಎಚ್ಚರ ವಹಿಸಲೇಬೇಕು. ಇಲ್ಲಿದೆ ಆ ಕುರಿತು ಹೆಚ್ಚಿನ ಮಾಹಿತಿ. ಅವುಗಳನ್ನು ತಿಳಿದುಕೊಳ್ಳಿ.
ಹೆಣದ ಮೇಲೂ Business: ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್- ಸ್ಮಶಾನದಲ್ಲೂ ಬ್ರೋಕರ್ಗಳ ಹಾವಳಿ!
ಲ್ಯಾಪ್ ಟಾಪ್ ನಿರುಪದ್ರವಿಯಾದರೂ ಅದು ವೈಯರ್ ಲೆಸ್ ಇಂಟರ್ನೆಟ್ ಸಿಗ್ನಲ್ ಮತ್ತು ರೇಡಿಯೇಟ್ ಇಎಂಎಫ್ ಗಳನ್ನು ಸ್ವೀಕರಿಸುತ್ತದೆ. ಇದನ್ನು ಬಳಕೆ ಮಾಡುವುದರಿಂದ ಪುರುಷರ ವೀರ್ಯದ ಗಣತಿ ಮೇಲೆ ಮತ್ತು ಮಹಿಳೆಯರಲ್ಲಿ ಅಂಡೋತ್ಪತ್ತಿ ಉತ್ಪಾದನೆ ಮೇಲೆ ಪರಿಣಾಮವಾಗಲಿದೆ.
ವಿಕಿರಣದಿಂದ ವೀರ್ಯದ ಅಂಗಾಂಶಗಳಲ್ಲಿನ ಡಿಎನ್ ಎಗೆ ಲ್ಯಾಪ್ ಟಾಪ್ ನಿಂದಾಗಿ ಹಾನಿ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಇದು ಪುರುಷರಲ್ಲಿ ಫಲವತ್ತತೆ ಮೇಲೆ ಪರಿಣಾಮ ಬೀರುವುದು ಎಂದು ಇನ್ನೊಂದು ಅಧ್ಯಯನವು ಹೇಳಿದೆ. ವೈಯರ್ ಲೆಸ್ ಇಂಟರ್ ನೆಟ್ ನ್ನು ಬಳಕೆ ಮಾಡುವ ಪರಿಣಾಮಕಾಗಿ ಅದು ನೇರವಾಗಿ ಪುರುಷರ ಸಂತಾನೋತ್ಪತ್ತಿ ಅಂಗಾಂಗದ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗಿದೆ. ಅದರಲ್ಲೂ ಇಂದಿನ ದಿನಗಳಲ್ಲಿ ಲ್ಯಾಪ್ ಟಾಪ್ ನ್ನು ವೈಯರ್ ಲೆಸ್ ಇಂಟರ್ನೆಟ್ ಗೆ ಕನೆಕ್ಟ್ ಮಾಡುವುದೇ ಹೆಚ್ಚು
ಲ್ಯಾಪ್ ಟಾಪ್ ನ್ನು ತೊಡೆಯಲ್ಲಿ ಇಟ್ಟುಕೊಂಡು ಹೆಚ್ಚು ಸಮಯ ಕೆಲಸ ಮಾಡಿದರೆ, ಅದು ಬಿಸಿಯೇರುವುದು ಮತ್ತು ಇದರ ಬಿಸಿಯಿಂದಾಗಿ ಚರ್ಮಕ್ಕೆ ಹಾನಿ ಆಗುವುದು ಮತ್ತು ಇದು ಚರ್ಮದ ಕ್ಯಾನ್ಸರ್ ಗೆ ಕೂಡ ಕಾರಣವಾಗಬಲ್ಲದು ಎಮದು ಸ್ವಿಟ್ಜರ್ಲೆಂಟ್ ನ ಡಾ. ಆಂಡ್ರೆಸ್ ಅರ್ನಾಲ್ಡ್ ಮತ್ತು ಪೀಟರ್ ಐಟಿನ್ ತಿಳಿಸಿದರು. ಲ್ಯಾಪ್ ಟಾಪ್ ನಿಂದಾಗಿ ಚರ್ಮಕ್ಕೆ ಹಾನಿಯಾಗುವ ಪರಿಣಾಮವಾಗಿ ಅಂತಹ ಜನರು ಹೆಚ್ಚಾಗಿ ಚರ್ಮದ ಕ್ಯಾನ್ಸರ್ ಗೆ ಗುರಿಯಾಗುವರು. ಇದು ಸಂತಾನೋತ್ಪತ್ತಿ ಅಂಗಾಂಗಗಳಿಗೆ ಹತ್ತಿರವಾಗಿ ಇರುವ ಪರಿಣಾಮವಾಗಿ ಅದರಿಂದ ವೃಷಣ ಮತ್ತು ಗರ್ಭಕೋಶದ ಕ್ಯಾನ್ಸರ್ ಕೂಡ ಬರಬಹುದು.
ಲ್ಯಾಪ್ ಟಾಪ್ ನ್ನು ತೊಡೆ ಮೇಲೆ ಇಟ್ಟು ಕೆಲಸ ಮಾಡುವ ವೇಳೆ ತುಂಬಾ ಬಗ್ಗಿ ಅದರ ಸ್ಕ್ರೀನ್ ನೋಡಬೇಕಾಗುತ್ತದೆ. ಇದರಿಂದ ಕುತ್ತಿಗೆ ಮತ್ತು ಬೆನ್ನು ನೋವು ಬರುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದಕ್ಕಾಗಿ ಲ್ಯಾಪ್ ಟಾಪ್ ಟೇಬಲ್ ನ ಮೇಲೆ ಅದನ್ನು ಇಟ್ಟು ಕೆಲಸ ಮಾಡಿದರೆ ಉತ್ತಮ. ವಿಶ್ರಾಂತಿ ಪಡೆಯುತ್ತಿರುವಾಗ ಅಥವಾ ಹಾಸಿಗೆಯಲ್ಲಿ ಮಲಗಿದ್ದ ವೇಳೆ ಕೂಡ ಲ್ಯಾಪ್ ಟಾಪ್ ನಿಮ್ಮ ತೊಡೆಯ ಮೇಲೆ ಇರಬಹುದು. ಆದರೆ ಇದರ ನೀಲಿ ಬೆಳಕಿನಿಂದಾಘಿ ನಿದ್ರೆಯ ಮೇಲೆ ಪರಿಣಾಮ ಬೀರುವುದು. ನಿದ್ರೆಗೆ ನೆರವಾಗುವಂತಹ ಮೆಲಟೊನಿನ್ ಬಿಡುಗಡೆಗೆ ಇದು ತೊಂದರೆ ನೀಡುವುದು. ನಿದ್ರಾಹೀನತೆಯ ಸಮಸ್ಯೆಯು ಕಾಡುತ್ತಲಿದ್ದರೆ, ಆಗ ಲ್ಯಾಪ್ ಟಾಪ್ ನ್ನು ಬದಿಗಿಟ್ಟು ಒಂದು ಪುಸ್ತಕ ಕೈಗಿಟ್ಟುಕೊಂಡು ಓದಿಕೊಳ್ಳಿ
ದೀರ್ಘಕಾಲ ತನಕ ಲ್ಯಾಪ್ ಟಾಪ್ ಬಳಕೆ ಮಾಡಿದರೆ ಅದರಿಂದ ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆಯು ಕಾಡುವುದು. ಇದು ಅಂಡಾಣುಗಳ ಉತ್ಪತ್ತಿ ಕಡಿಮೆ ಮಾಡುವುದು ಮತ್ತು ಗರ್ಭಧರಿಸಲು ಇದರಿಂದ ಸಮಸ್ಯೆಯಾಗಬಹುದು.
ನೀವು ಗರ್ಭಿಣಿಯಾಗಿದ್ದು, ಲ್ಯಾಪ್ ಟಾಪ್ ಬಳಕೆ ಮಾಡುತ್ತಲಿದ್ದರೆ, ಆಗ ನೀವು ಹೊಟ್ಟೆಯ ಮೇಲೆ ಲ್ಯಾಪ್ ಟಾಪ್ ನ್ನು ಇಟ್ಟುಕೊಂಡು ಕೆಲಸ ಮಾಡಬಹುದು. ಆದರೆ ಇದು ಭ್ರೂಣದಲ್ಲಿನ ಮಗುವಿನ ಮೇಲೆ ಕೂಡ ಪರಿಣಾಮ ಬೀರುವುದು. ಇಂತಹ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಸಮಸ್ಯೆಗಳೂ ಕಾಡುವುದು
ಲ್ಯಾಪ್ ಟಾಪ್ ನ್ನು ತೊಡೆಯ ಮೇಲಿಟ್ಟುಕೊಂಡು ಹೆಚ್ಚು ಕಾಲ ಬಳಸಿದರೆ ಅದರಿಂದ ಲ್ಯಾಪ್ ಟಾಪ್ ಬಿಸಿ ಆಗುವುದು ಮತ್ತು ಇದರಿಂದಾಗಿ ಚರ್ಮವು ಸುಟ್ಟು ಹೋಗಬಹುದು. ಲ್ಯಾಪ್ ಟಾಪ್ ನ ಅಡಿಭಾಗದಲ್ಲಿ ಇರುವಂತಹ ಚರ್ಮವು ಕಪ್ಪಾಗಿ ನೆರಿಗೆ ಮೂಡಬಹುದು.
ಕೆಲವು ಸಂದರ್ಭದಲ್ಲಿ ಅತಿಯಾದ ಬಿಸಿಯಿಂದಾಗಿ ಇದು ಸುಟ್ಟು, ಕೆಲವು ದಿನಗಳ ಬಳಿಕ ಎದ್ದು ಬರಬಹುದು. ಇದಕ್ಕಾಗಿ ಲ್ಯಾಪ್ ಟಾಪ್ ನ್ನು ತೊಡೆಯ ಮೇಲಿಟ್ಟು ಕೆಲಸ ಮಾಡಬೇಡಿ.