ಚಿಕ್ಕೋಡಿ : ಮೇಕೆ, ಎಮ್ಮ, ಹಸು, ಹೊಂತ, ದೂಬಾರಿ ಹಣಕ್ಕೆ ಮಾರಾಟವಾದನ್ನ ನೋಡಿರಬಹುದು ಕೇಳಿರಬಹುದು ಆದರೆ ಇಲ್ಲಿ ಒಂದು ಕೋಣ ಎಷ್ಟು ಹಣಕ್ಕೆ ಮಾರಾಟವಾಗಿದೆ ಗೊತ್ತಾ, ಈ ಕೋಣ ಮಾರಾಟವಾದ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತಿರಾ ದಾಖಲೆ ಮೊತ್ತಕ್ಕೆ ಕೋಣ ಮಾರಾಟವಾಗಿದೆ.
ಬಿಜೆಪಿಯಿಂದ ಉಚ್ಚಾಟನೆ ಬೆನ್ನಲ್ಲೇ ಪುರಂದರ ದಾಸರ ಹಾಡು ನೆನೆದ ಯತ್ನಾಳ್!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರು ಸಾಕಿದ್ದ ಕೋಣ ಬರೋಬ್ಬರಿ 1 ಲಕ್ಷ 15 ಸಾವಿರ ರೂಪಾಯಿಗಳಿಗೆ ಎರಡು ವರ್ಷದ ಕೋಣ ಮಾರಾಟವಾಗಿದೆ. ಅಂದಾಜು 8.50 ಕ್ವಿಂಟಾಲ್ ತೂಕ ಹೊಂದಿರುವ ಕೋಣ. ಸಂತಾನೋತ್ಪತ್ತಿ ಕಾರ್ಯಕ್ಕೆ ಹೆಸರುವಾಸಿಯಾಗಿರುವ ಕೋಣಕ್ಕೆ ದಿನನಿತ್ಯ 200 ರಿಂದ 400 ರೂ ವ್ಯಯಿಸುತ್ತಿದ್ದ ಕೋಣದ ಮಾಲೀಕ ರಾಯಪ್ಪ ಮಾರಲು ಆಸಕ್ತಿ ಇಲ್ಲ ಆದರೆ, ಮೇವಿನ ಕೊರತೆಯಿಂದ 1,15,000 ಮೊತ್ತಕ್ಕೆ ಕೋಣವನ್ನ ಬಾಗಲಕೋಟ ಜಿಲ್ಲೆಯ ರಬಕವಿ ಪಟ್ಟಣದ ಜಾನವಾರಗಳ ವ್ಯಾಪರಸ್ಥ 1 ಲಕ್ಷ 15 ಸಾವಿರ ರೂಪಾಯಿ ದಾಖಲೆ ಮೊತ್ತಕ್ಕೆ ರಾಯಪ್ಪಾ ಮಾರಾಟ ಮಾಡಿದ್ದಾರೆ.