ಸಕ್ಕರೆ ಕಾಯಿಲೆ ಇರುವವರು ಎಲ್ಲಾ ಆಯಾಮದಲ್ಲೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸುಮ್ಮನೆ ಹೇಳುವುದಿಲ್ಲ. ಅಪ್ಪಿ ತಪ್ಪಿ ಸ್ವಲ್ಪ ನಿರ್ಲಕ್ಷ ಮಾಡಿದರು ಕೂಡ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ. ದೇಹಕ್ಕೆ ವ್ಯಾಯಾಮ ನೀಡಬೇಕು ಜೊತೆಗೆ ಎಲ್ಲೂ ಸಹ ಬೀಳದಂತೆ ಅಥವಾ ಚರ್ಮದ ಭಾಗಕ್ಕೆ ಯಾವುದೇ ಗಾಯ ಆಗದಂತೆ ಎಚ್ಚರಿಕೆ ವಹಿಸಬೇಕು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಹೌದು, ಗಾಯದ ವಿಚಾರದಲ್ಲಿ ಸಕ್ಕರೆ ಕಾಯಿಲೆ ಇರುವವರು ತುಂಬಾ ಎಚ್ಚರದಿಂದ ಇರಬೇಕು. ಬೇರೆಯವರಿಗೆ ಹೋಲಿಸಿದರೆ ಇವರಿಗೆ ಗಾಯಗಳು ಅಷ್ಟು ಬೇಗನೆ ವಾಸಿಯಾಗುವುದಿಲ್ಲ. ಏಕೆ ಹೀಗೆ? ಈ ಬಗ್ಗೆ ವೈದ್ಯರನ್ನು ಕೇಳಿದರೆ ಅವರು ಏನು ಹೇಳುತ್ತಾರೆ, ನೋಡೋಣ ಬನ್ನಿ.
ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ
ರಕ್ತದಲ್ಲಿ ಯಾವಾಗ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಶೇಖರಣೆಯಾಗುತ್ತದೆ ಆ ಸಂದರ್ಭದಲ್ಲಿ ಕ್ರಮೇಣವಾಗಿ ರೋಗ ನಿರೋಧಕ ಶಕ್ತಿ ಕುಸಿತ ಕಾಣುತ್ತದೆ. ಏಕೆಂದರೆ ಸಕ್ಕರೆ ಅಂಶ ಪ್ರೊಟೀನ್ ಅಂಶಕ್ಕೆ ಸೇರಿಕೊಳ್ಳುವುದರಿಂದ. ಇದರಿಂದ ದೇಹದಲ್ಲಿ ಸರಿಯಾಗಿ ಕೆಲಸ ಮಾಡಬೇಕಾದ ಪ್ರೋಟೀನ್ ತನ್ನ ಕಾರ್ಯ ಚಟುವಟಿಕೆ ಕಡಿಮೆ ಮಾಡುತ್ತದೆ. ಇಡೀ ದೇಹದ ತುಂಬಾ ರಕ್ತ ಸಂಚಾರ ಆಗುವುದರಿಂದ ಮತ್ತು ಇದೇ ರೀತಿಯ ಸಕ್ಕರೆಯುಕ್ತ ಪ್ರೋಟೀನ್ ಸಂಚಾರವಾಗುವುದರಿಂದ ಗಾಯಗಳು ಉಂಟಾದ ಭಾಗದಲ್ಲಿ ಅದನ್ನು ವಾಸಿ ಮಾಡುವ ಆರೋಗ್ಯಕರ ಪ್ರೊಟೀನ್ ರಕ್ತದಲ್ಲಿ ಇರುವುದಿಲ್ಲ. ಹೀಗಾಗಿ ಗಾಯ ಬೇಗ ವಾಸಿ ಆಗುವುದಿಲ್ಲ.
ವಾಸಿಯಾಗಲು ಹೆಚ್ಚು ಸಮಯ ಬೇಕೇ ಬೇಕು
ಯಾರಿಗೆ ಮಧುಮೇಹ ಕಂಟ್ರೋಲ್ ನಲ್ಲಿ ಇರುವುದಿಲ್ಲ, ಅಂತಹವರಿಗೆ ದೇಹದಲ್ಲಿ ರಕ್ತ ಸ್ವಲ್ಪ ಗಟ್ಟಿಯಾಗಿರುತ್ತದೆ. ಈ ಸಂದರ್ಭದಲ್ಲಿ ಸರಾಗವಾದ ರಕ್ತ ಸಂಚಾರ ರಕ್ತನಾಳಗಳಲ್ಲಿ ಇರುವುದಿಲ್ಲ. ಹಾಗಾಗಿ ಗಾಯ ಆದಂತಹ ಜಾಗಕ್ಕೆ ಬಿಳಿ ರಕ್ತ ಕಣಗಳು ನಿರಂತರವಾಗಿ ಬಹಳ ಬೇಗನೆ ಬಂದು ತಲುಪಲು ಸಾಧ್ಯವಾಗುವುದಿಲ್ಲ. ಇದು ಗಾಯ ವಾಸಿ ಆಗಲು ಸಮಯ ತೆಗೆದುಕೊಳ್ಳುತ್ತದೆ.
ಸದೃಢವಾದ ಬ್ಯಾಕ್ಟೀರಿಯಾ ಸಹ ಕಾರಣ
ಬ್ಲಡ್ ಶುಗರ್ ಲೆವೆಲ್ ಹೆಚ್ಚಾದರೆ ಅದರಿಂದ ಬ್ಯಾಕ್ಟೀರಿಯಾ ಪ್ರಭಾವ ರಕ್ತದಲ್ಲಿ ಬಲವಾಗುತ್ತದೆ. ಮೊದಲೇ ದುರ್ಬಲ ರೋಗ ನಿರೋಧಕ ಶಕ್ತಿ ಇರುವುದರಿಂದ ಗಾಯ ಉಂಟಾದ ಜಾಗದಲ್ಲಿ ಇರುವಂತಹ ಬ್ಯಾಕ್ಟೀರಿಯಾ ಉಪಟಳ ಹೆಚ್ಚಾಗುತ್ತದೆ. ಇದರಿಂದ ಗಾಯ ವಾಸಿಯಾಗುವುದು ನಿಧಾನವಾಗುತ್ತದೆ ಅಥವಾ ಕೆಲವೊಮ್ಮೆ ಜಾಸ್ತಿ ಆಗುತ್ತದೆ.
ದೇಹದ ರಕ್ಷಣಾತ್ಮಕ ವ್ಯವಸ್ಥೆ ಕುಸಿಯುತ್ತದೆ
ಯಾವಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಮಿತಿಮೀರಿ ಹೋಗುತ್ತದೆ ಆಗ ಅದು ನಮ್ಮ ದೇಹದಲ್ಲಿ ಡೈ ಕಾರ್ಬೋನಿಲ್ ಆಗಿ ಬ್ರೇಕ್ ಡೌನ್ ಆಗುತ್ತದೆ. ಇದು ನಮ್ಮ ರಕ್ಷಣಾತ್ಮಕ ವ್ಯವಸ್ಥೆಯನ್ನು ಕ್ರಮೇಣವಾಗಿ ತಗ್ಗಿಸುತ್ತದೆ. ಇದರಿಂದ ಬೇರೆ ಬಗೆಯ ಕಾಯಿಲೆಗಳನ್ನು ಉಂಟುಮಾಡುವ ಸೋಂಕು ಕ್ರಿಮಿಗಳಿಗೆ ಅನುಕೂಲವಾಗುತ್ತದೆ. ಇದರಿಂದಲೂ ಸಹ ಗಾಯ ವಾಸಿಯಾಗುವುದು ನಿಧಾನವಾಗುತ್ತದೆ.