ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ವರ್ಲ್ಡ್ ಸ್ಟಾರ್. ಟಾಕ್ಸಿಕ್ ಮೂಲಕ ಪ್ಯಾನ್ ವರ್ಲ್ಡ್‌ಗೆ ಗುರಿ ಇಟ್ಟಿರುವ ರಾಕಿಭಾಯ್ ಕನ್ನಡ ಪ್ರೇಮ ಮರೆತಿಲ್ಲ. ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಅಂತಾ ಕನ್ನಡಪ್ರೀತಿ ತೋರಿಸಿದ್ದಾರೆ. ಯಶ್ ಲಂಕಾಧಿಪತಿ ರಾವಾಣಾಸುರಾಗಿ ಗಹಗಹಿಸಿರುವ ರಾಮಾಯಾಣ ಸಿನಿಮಾದ ಮೊದಲ ಭಾಗದ ಟೀಸರ್ ನಿನ್ನೆ ಅನಾವರಣಗೊಂಡಿದೆ. ಯಶ್ ಹೊಸ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎನ್ನುತ್ತಿದ್ದಾರೆ. ರಾಮಾಯಣದಲ್ಲಿ ನಟಿಸಿರುವ ಪ್ರಮುಖ ನಟರು ಸಿನಿಮಾದಲ್ಲಿ ಸಹಿಹಾಕಿದ್ದಾರೆ. ಅದರಂತೆ ಕೆಜಿಎಫ್ ಕಿಂಗ್ ಕೂಡ ತಮ್ಮ ಹಸ್ತಕ್ಷರವನ್ನು ಮುದ್ರಿಸಿದ್ದಾರೆ. ಯಶ್ ಸಿಹಿ ಸಹಿ ನೋಡಿ ಫ್ಯಾನ್ಸ್ ಸಲಾಂ ಎನ್ನುತ್ತಿದ್ದಾರೆ.
ರಾಮಾಯಣದಲ್ಲಿ ಯಶ್ ರಾವಣನಾಗಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳಿದ್ದಾರೆ. ಯಶ್ ಹೊರತುಪಡಿಸಿ ಚಿತ್ರದ ಎಲ್ಲರೂ ಇಂಗ್ಲೀಷ್ ಭಾಷೆಯಲ್ಲಿ ಸಹಿ ಹಾಕಿದ್ದಾರೆ. ಆದ್ರೆ ಯಶ್ ಮಾತ್ರ ಕನ್ನಡದಲ್ಲೇ ಸಹಿ ಮಾಡಿದ್ದಾರೆ. ಅಣ್ತಮ್ಮಾ ಕನ್ನಡದಲ್ಲಿ ಸಹಿ ಮಾಡಿರುವ ಚಿತ್ರಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನಟನ ಕನ್ನಡ ಪ್ರೇಮವನ್ನು ಕೊಂಡಾಡುತ್ತಿದ್ದಾರೆ.
ಸದ್ಯ ಯಶ್ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ ಮೊದಲ ಭಾಗದ ಶೂಟಿಂಗ್ ಮುಗಿಸಿಕೊಂಡು ಫ್ಯಾಮಿಲಿ ಜೊತೆ ಫಾರಿನ್‌ಗೆ ಹಾರಿದ್ದಾರೆ. ರಾಧಿಕಾ ಪಂಡಿತ್ ಜೊತೆಗಿನ ಕ್ಯೂಟ್ ಫೋಟೋವನ್ನು ಯಶ್ ಹಂಚಿಕೊಂಡಿದ್ದಾರೆ.
ಯಶ್ 👑 – The Name, The Legacy, The Vibe! 💛♥️🤩
Signed in Kannada, written in History.#Ramayana will never be the same again. 🔥#ಯಶ್ #YashBOSS #RockingStarYash #RamayanaMovie#Ramayana pic.twitter.com/wFJnIUWacl— NextGem.eth/Sol☔💛 (@NextGemXYZ) July 3, 2025