ದಾವಣಗೆರೆ: ಯತ್ನಾಳ್ ಪಕ್ಷದಿಂದ ಉಚ್ಚಾಟನೆಯಾದ್ರಿಂದ ಅವರು ಅರೆ ಹುಚ್ಚರಾಗಿದ್ದಾರೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಗೆ ಪಕ್ಷದಿಂದ ಉಚ್ಚಾಟನೆಯಾದರೂ ಬುದ್ದಿ ಬಂದಿಲ್ಲ. ಅವರ ಪಕ್ಷದಿಂದ ಉಚ್ಚಾಟನೆಯಾದ್ರಿಂದ ಅವರು ಅರೆ ಹುಚ್ಚರಾಗಿದ್ದಾರೆ. ಯಡಿಯೂರಪ್ಪ ಪಾದದ ಧೂಳಿಗೂ ಯತ್ನಾಳ್ ಸಮನಲ್ಲ. ಅವರ ಹಣೆಯಲ್ಲಿ ಬರೆದಿಲ್ಲ ಯಡಿಯೂರಪ್ಪ ಅವರನ್ನ ಜೈಲಿಗೆ ಕಳಿಸೋಕೆ ಎಂದರು.
ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದ್ರೆ ಸಾಕು ಸಂಪೂರ್ಣ ನಾರ್ಮಲ್ ಆಗುತ್ತೆ ಶುಗರ್ ಲೆವಲ್.!
ಯತ್ನಾಳ್ ಹುಚ್ಚಾಬಟ್ಟೆ ಮಾತನಾಡಿ ಪಕ್ಷದಿಂದ ಉಚ್ಚಾಟನೆಯಾಗಿದ್ದು ಎಂದ ಅವರು, ಯತ್ನಾಳ್ ಬಿಜಾಪುರದಲ್ಲಿ ಪ್ರಭಾವಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡ ಕೆಲಸ ಮಾಡಿದ್ದಾನೆ. ಬಿಜಾಪುರ ಸಿಟಿಯಲ್ಲಿ ಲೊಕಸಭಾ ಚುನಾವಣೆಯಲ್ಲಿ ಎಷ್ಟು ಲೀಡ್ ಕೊಟ್ಟಿದ್ದಾನೆ ಅನ್ನೋದು ಬೇಕಲ್ಲ, ಯತ್ನಾಳ್ ಗೆ ಕೆಲವು ಸೂತ್ರದಾರರು ಬೇರೆಯವರು ಇದ್ದಾರೆ. ಅವರ ಮಾತು ಕೇಳಿ ಬಲಿ ಪಶು ಆಗ್ತಾರೆ ಅಂತ ಹೇಳಿದ್ದೆ ಬಲಿ ಪಶು ಆಗಿದ್ದಾರೆ ಎಂದರು.