ವಿಜಯಪುರ: ಯಡಿಯೂರಪ್ಪ ತನ್ನ ಮಗನ ಭವಿಷ್ಯಕ್ಕಾಗಿ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತನ್ನ ಮಗನ ಭವಿಷ್ಯಕ್ಕಾಗಿ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ.
ಮನೆಯಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡ್ರೆ ಏನದರ ಸೂಚನೆ: ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!
ಮಗನನ್ನ ಅಧ್ಯಕ್ಷ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೇಲೆ ಹಲವು ಕೇಸ್ ಇವೆ. ಇ.ಡಿ ವಿಚಾರಣೆಗೂ ಹಾಜರಾಗಿದ್ದಾರೆ. ಇಂದಿಲ್ಲ ನಾಳೆ ಜೈಲಿಗೆ ಹೋಗ್ತಾರೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸಲೀಂ, ಮುಶ್ರಫ್ರಂತಹವರನ್ನ ತಂದ್ರೆ ನಮ್ಮ ಮೇಲೆ ಕೇಸ್ ಆಗ್ತಾವೆ. ಮೊನ್ನೆ ವಿಜಯಪುರದಲ್ಲಿ ನನ್ನ ಮೇಲೆ ಕೇಸ್ ಹಾಕಿಸಿದ್ರು. ಸಲೀಂ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಯತ್ನಾಳ್ ಮೇಲೆ ಎಷ್ಟು ಕೇಸ್ ಆಗಿವೆ ಎಂದು ಮಾಹಿತಿ ಪಡೆದಿದ್ದಾರೆ.
ರಾಜ್ಯದಲ್ಲಿ ಸೂಲಿಬೆಲೆ, ಪ್ರತಾಪ್ ಸಿಂಹ, ಮುತಾಲಿಕ್ ಟಾರ್ಗೆಟ್ ಆಗಿದ್ದಾರೆ ಎಂದು ದೂರಿದರು. ಮತ್ತೆ ಬಿಜೆಪಿ ಭಿನ್ನಮತೀಯರ ಸಭೆ ಆಗಲಿದೆ. ನಮ್ಮ ಟೀಂ ದೊಡ್ಡದಿದೆ. ತಟಸ್ಥ ಟೀಂ ಸಹ ವಿಜಯೇಂದ್ರ ವಿರುದ್ಧ ಇದೆ. ವಾರದಲ್ಲಿ ಬೆಳಗಾವಿಯಲ್ಲಿ ಸೇರ್ತಿದ್ದೇವೆ. ಅತೃಪ್ತ ಬಣದಿಂದ ಮತ್ತೊಂದು ಸಭೆ ಎಂದು ತಿಳಿಸಿದರು.