ಬೆಂಗಳೂರು:- ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಯಲಹಂಕದ ಮಿನಿ ವಿಧಾನಸೌಧದ ಬಳಿ ಲೋಕಾರ್ಪಣೆ ಮಾಡಿದರು.
Accident: ಆಟೋಗೆ KSRTC ಬಸ್ ಡಿಕ್ಕಿ: ಇಬ್ಬರು ದುರ್ಮರಣ, ಸಾವು ಬದುಕಿನಲ್ಲಿ ಇಬ್ಬರು ಮಕ್ಕಳು!
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮುಖ್ಯಮಂತ್ರಿಯವರನ್ನು ಶಾಲು ಹೊದಿಸಿ ಸನ್ಮಾನಿಸಿದರಲ್ಲದೆ ಖಡ್ಗವೊಂದನ್ನು ನೀಡಿ ಗೌರವಿಸಿದರು. ವೇದಿಕೆ ಮೇಲಿದ್ದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೂ ವಿಶ್ವನಾಥ್ ಅವರು ಖಡ್ಗ ನೀಡಿ ಸನ್ಮಾನಿಸಿದರು.
ವೇದಿಕೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವರಾದ ಕೃಷ್ಣಬೈರೇಗೌಡ, ಹೆಚ್ ಸಿ ಮಹದೇವಪ್ಪ, ಬೈರತಿ ಸುರೇಶ್ ಸಾಥ್ ಕೊಟ್ಟಿದ್ದಾರೆ. ಇದೆ ವೇಳೆ ಸಿಎಂ ಸಂವಿಧಾನದ ಪೀಠಿಕೆ ಬೋಧಿಸಿದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.