Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿನ್ನೆ ರಾಗಾ..ಇಂದು ಖರ್ಗೆ ಭೇಟಿ: ಸಿದ್ದರಾಮಯ್ಯಗೆ ಹೈಕಮಾಂಡ್‌ ಹೇಳಿದ್ದೇನು ?

    By Author AINApril 4, 2025
    Share
    Facebook Twitter LinkedIn Pinterest Email
    Demo

    ನವದೆಹಲಿ: ಮೂರು ದಿನಗಳಿಂದ ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ನಾಯಕರ ಭೇಟಿ ಮಾಡುತ್ತಿದ್ದಾರೆ.

    ನಿನ್ನೆಯಷ್ಟೇ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ, ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್‌ ಹಂಗಾಮ, ಖಾಲಿ ಇರುವ ವಿಶಧಾನಪರಿಷತ್‌ ಸ್ಥಾನಗಳಿಗೆ ನಾಮನಿರ್ದೇಶನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೈಕಮಾಂಡ್ ಜತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

    ಅದರಲ್ಲೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್‌ ೫ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಗಾಧಿ ಮೇಲೆ ಕಣ್ಣಿಟ್ಟಿರುವ ಹಲವು ನಾಯಕರು ಡಿಕೆಶಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

    ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ

    ಮತ್ತೊಂದೆಡೆ, ಅಸಮರ್ಥ ಸಚಿವರಿಗೆ ಕೊಕ್‌ ನೀಡಿ, ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕರಿಗೆ ಅವಕಾಶ ನೀಡುವ ಬಗ್ಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಸದ್ಯಕ್ಕೆ ಸಂಪುಟ ವಿಸ್ತರಣೆಯಾಗಲೀ, ಪುನಾರಚನೆಯಾಗಲಿ ಮಾಡೋದು ಬೇಡ ಎಂಬ ಸಂದೇಶವನ್ನು ಹೈಕಮಾಂಡ್‌ ನೀಡಿದೆ ಎನ್ನಲಾಗಿದೆ.

    ಸಿಎಂ, ಕೆಪಿಸಿಸಿ ಸ್ಥಾನ ಬದಲಾವಣೆ ಇಲ್ಲ ?

    ರಾಜ್ಯ ಕಾಂಗ್ರೆಸ್‌ ನಲ್ಲಿ ಪವರ್‌ ಶೇರಿಂಗ್‌ ಬೆಂಕಿ ಆಗಾಗ ಹೊತ್ತಿಕೊಳ್ಳುತ್ತಲೇ ಇರುತ್ತದೆ. ಹೀಗಾಗಿ ಹಲವು ತಿಂಗಳ ಬಳಿಕ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನದ ಬದಲಾವಣೆಯಾಗಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ ಶಿವಕುಮಾರ್‌ ಬದಲಾವಣೆಯಾಗಲಿ ಬೇಡ. ಸದ್ಯಕ್ಕೆ ಸಂಪುಟ ವಿಸ್ತರಣೆಯೆಂಬ ಜೇನಗೂಡಿಗೆ ಕೈಹಾಕೋದು

    ಬೇಡ ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ನಾಯಕರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸದ್ಯಕ್ಕೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್‌ ಸೇಫ್‌ ಎನ್ನಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    UPI ಬಳಕೆದಾರರಿಗೆ ಗಮನಿಸಿ: ಜುಲೈ 15 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

    June 27, 2025

    Friday Tips: ಶುಕ್ರವಾರ ಈ ಒಂದು ಕೆಲಸ ಮಾಡಿದ್ರೆ ಸಾಕು ಬೇಡ ಬೇಡ ಎಂದರೂ ಹಣ ಬರುತ್ತೆ.!

    June 27, 2025

    ಹಲಸಿನಹಣ್ಣು ಕದಿಯಲು ಬಂದು ಕಳ್ಳನ ಪೇಚಾಟ: ಮರದಲ್ಲಿ ನೇತಾಡಿದ ವ್ಯಕ್ತಿ.. ಅಷ್ಟಕ್ಕೂ ಆಗಿದ್ದೇನು?

    June 26, 2025

    ಹುಲಿಗಳ ಸಾವು ಕೇಸ್: ಇದು ಅತ್ಯಂತ ಆಘಾತಕಾರಿ ವಿಷಯ – ಆರ್ ಅಶೋಕ್!

    June 26, 2025

    ಹುಲಿಗಳ ಸಾವು ಪ್ರಕರಣ: ಅಧಿಕಾರಿಗಳ ಅಮಾನತಿಗೆ ಪರಿಸರ-ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ!

    June 26, 2025

    ನಿಮ್ಮ ಮನೆಯಲ್ಲಿಯೂ ಹಲ್ಲಿ, ಜಿರಳೆ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ!

    June 26, 2025

    ಬೆಂಗಳೂರಿಗೆ ಭೇಟಿ ಕೊಟ್ಟ ಭರವಸೆ ಸಮಿತಿಯ ಬಿಹಾರ ನಿಯೋಗ: TA ಶರವಣ ನೇತೃತ್ವದಲ್ಲಿ ಸಭೆ!

    June 26, 2025

    ಹೇಮಾವತಿ ಲಿಂಕ್ ಕೆನಾಲ್ ಸಭೆ ಮುಂದೂಡಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

    June 26, 2025

    Shubhanshu Shukla: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲಾ..!

    June 26, 2025

    Supreme Court: ಆರೋಪಿಗೆ ಜಾಮೀನು: ಬಿಡುಗಡೆ ಮಾಡದ ಸರ್ಕಾರಕ್ಕೆ ‘ಸುಪ್ರೀಂ’ ದಂಡ

    June 26, 2025

    ಮೊದಲು ಸುರೇಶ್ ಬಾಬು ಮನೆಯ ದೋಸೆ ತವಾದ ತೂತು ಮುಚ್ಚಿಕೊಳ್ಳಲಿ: ಡಿ.ಕೆ ಶಿವಕುಮಾರ್ ಟಾಂಗ್

    June 26, 2025

    ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿ ವಿಚಾರ: ಬಿ.ವೈ. ವಿಜಯೇಂದ್ರ ಹೇಳಿದ್ದೇನು..?

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.