Close Menu
Ain Live News
    Facebook X (Twitter) Instagram YouTube
    Saturday, June 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಾನಸಿಕ, ದೈಹಿಕ ಸದೃಢತೆ, ಸುಸ್ಥಿತಿ, ಮನೋಲ್ಲಾಸಕ್ಕೆ ಯೋಗ ಸಹಕಾರಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್!

    By AIN AuthorJune 21, 2025
    Share
    Facebook Twitter LinkedIn Pinterest Email
    Demo

    ಚಾಮರಾಜನಗರ: ಪ್ರತಿಯೊಬ್ಬರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಯೋಗ ಸಹಕಾರಿಯಾಗಿದ್ದು, ದೇಹ, ಮನಸ್ಸಿನ ಸದೃಢತೆ ಹಾಗೂ ಸುಸ್ಥಿತಿ ಮತ್ತು ಮನೋಲ್ಲಾಸಕ್ಕೆ ಯೋಗ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

    19 ವರ್ಷದ ಯುವಕ ಪಾರ್ಕ್ ನಲ್ಲಿ ನೇಣಿಗೆ ಶರಣು: ಸೂಸೈಡ್ ಗೆ ಕಾರಣ!?

    ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿಂದು ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಹಾಗೂ ಯೋಗನಿರತ ಸಂಘಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಇಂದಿನ ಸ್ಪರ್ಧಾತ್ಮಕ ಒತ್ತಡದ ಪರಿಸ್ಥಿತಿಯಲ್ಲಿ 30-40ನೇ ವಯಸ್ಸಿಗೆ ಸಾಕಷ್ಟು ಯುವಕ, ಯುವತಿಯರು ಹೃದಯಾಘಾತಕ್ಕೀಡಾಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಹಾಗಾಗಿ ದೈನಂದಿನ ಎಷ್ಟೇ ಒತ್ತಡವಿರಲಿ, ಯೋಗವನ್ನು ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ದಿನನಿತ್ಯ ಯೋಗ ಮಾಡುವುದರಿಂದ ಧ್ಯಾನ, ದೈಹಿಕ ವ್ಯಾಯಾಮ, ಸುಸ್ಥಿರ ಆರೋಗ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಕಾಯಾ, ವಾಚಾ, ಮನಸ ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಕರೆ ನೀಡಿದರು.

    ಯೋಗ ಮಾಡಲು ಹೆಚ್ಚಿಗೆ ಹಣ ಖರ್ಚಾಗುವುದಿಲ್ಲ. ಒಂದು ಮ್ಯಾಟ್ ಅಥವಾ ಶಾಲು ಇದ್ದರೆ ಸಾಕು. ಮನೆ ಅಥವಾ ಶಾಲೆಯ ಪ್ರಶಾಂತ ವಾತಾವರಣದಲ್ಲಿ ಯೋಗ ಮಾಡಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನಮ್ಮ ಆರೋಗ್ಯ, ನಮ್ಮ ಕುಟುಂಬದವರ ಹಾಗೂ ಸಮುದಾಯದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುವಂತೆ ಇತರರಿಗೆ ತಿಳಿಹೇಳಬೇಕು ಎಂದರು. ನಾವು ಆರೋಗ್ಯವಾಗಿದ್ದರೇ ದೇಶದ ಆರೋಗ್ಯ ಉತ್ತಮವಾಗಿರಲಿದೆ. ಚಾಮರಾಜನಗರವನ್ನು ಈಗ ಹಸಿರು ಚಾಮರಾಜನಗರ, ಚೆಲುವ ಚಾಮರಾಜನಗರ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಚಾಮರಾಜನಗರವನ್ನಾಗಿ ಮಾಡಲು ದಿನನಿತ್ಯ ಯೋಗ ಮಾಡುತ್ತೇವೆಂದು ಎಲ್ಲರೂ ಇಂದೇ ಪಣ ತೋಡೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಪಿ. ಸತೀಶ್ ಕುಮಾರ್, ಇತರರು ಕಾರ್ಯಕ್ರಮದಲ್ಲಿ ಇದ್ದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೇರಿದಂತೆ ಇತರೆ ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಸ್ವತಹ ಪಾಲ್ಗೊಂಡು ಇತರರಲ್ಲಿ ಉತ್ಸಾಹ ತುಂಬಿದರು. ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡಾ. ಮಧು ಭರತ್ ಅವರು ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಯೋಗ ಪ್ರಾತ್ಯೇಕ್ಷಿಕೆಯನ್ನು ಪ್ರಸ್ತುತಪಡಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಕೆ.ಎನ್.ರಾಜಣ್ಣರ 75ನೇ ವರ್ಷದ ಅಭಿನಂದನಾ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆ ಸಾವು: ಏನಾಯ್ತು?

    June 21, 2025

    Kodi Mutt Swamiji: ರಾಜ್ಯ ಸರ್ಕಾರದ ಬಗ್ಗೆ ಮತ್ತೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ

    June 21, 2025

    ಕಾಂಗ್ರೆಸ್ ಈ ದೇಶದಲ್ಲಿ ಇದೇ ಎಂದುಕೊಳ್ಳಲು ಅಸಹ್ಯವಾಗುತ್ತೆ: ಸಚಿವ ವಿ.ಸೋಮಣ್ಣ ಕಿಡಿ

    June 21, 2025

    ಕಾವೇರಿ ನದಿಯಲ್ಲಿ ನಾಪತ್ತೆಯಾಗಿದ್ದ ಮಾಜಿ ಸೈನಿಕ ಗಿರೀಶ್ ಮೃತದೇಹ ಪತ್ತೆ..!

    June 21, 2025

    ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿ ರೈತ ಸಾವು..!

    June 21, 2025

    ಮನೆ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ: 267 ಗ್ರಾಂ ಚಿನ್ನ, 470 ಗ್ರಾಂ ಬೆಳ್ಳಿ ವಶಕ್ಕೆ!

    June 21, 2025

    ನಮ್ಮ ಪಕ್ಷ ಭ್ರಷ್ಟಾಚಾರ ರಹಿತವಾದ ಪಕ್ಷವಾಗಿದ್ದು, ನಮ್ಮಲ್ಲಿ ಝೀರೋ ಭ್ರಷ್ಟಾಚಾರವಿದೆ : ಈಶ್ವರ್ ಖಂಡ್ರೆ

    June 21, 2025

    ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಅಧಿಕಾರಿಗಳ ಎಡವಟ್ಟು: ಕೈ ಕೊಟ್ಟ ಲೈವ್ ಸ್ಟ್ರೀಮಿಂಗ್, ವಿ. ಸೋಮಣ್ಣ ಗರಂ!

    June 21, 2025

    ಮಳೆ ಅವಾಂತರ: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ; ಬೆಂಗಳೂರು – ಮುರುಡೇಶ್ವರ ಟ್ರೈನ್ ಸ್ಥಗಿತ!

    June 21, 2025

    International Yoga Day: ನೃಪತುಂಗ ಬೆಟ್ಟದಲ್ಲಿ ಯೋಗ ಆಚರಣೆ!

    June 21, 2025

    ಧಾರವಾಡ: ಹಣ ತೋರಿಸಿ ಬಳಿಕ ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ವಂಚನೆ- ದೂರು ದಾಖಲು!

    June 21, 2025

    ಸುಡುವ ಸಾಂಬಾರು ಬಿದ್ದು ಆಸ್ಪತ್ರೆ ಸೇರಿದ್ದ ಮಗು ಚಿಕಿತ್ಸೆ ಫಲಿಸದೇ ಸಾವು!

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.