ಬೆಂಗಳೂರು: ಛಲವಾದಿಯವರೇ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ರಾಜೀನಾಮೆ ಕೊಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದಾಖಲೆ ತೋರಿಸಿದ್ರೆ ನನಗೆ ಮತ್ತು ಎಐಸಿಸಿ ಅಧ್ಯಕ್ಷರಿಗೆ ಒಂದು ಲಕ್ಷ ಬಹುಮಾನ ಕೊಡುತ್ತೇನೆ ಅಂದಿದ್ದರು. ನಮಗೆ ಬೇಡ, ಪಂಚಾಯತ್ ರಾಜ್ ಕಮಿಷನರ್ಗೆ ಕೊಡಿ. 48 ಗಂಟೆಯೊಳಗೆ ಬಿಲ್ ಕಳಿಸುತ್ತೇನೆ.
ಆ ಹಣದಿಂದ ಅರಿವು ಕೇಂದ್ರಕ್ಕೆ ಪುಸ್ತಕ ತೆಗೆದುಕೊಳ್ಳುತ್ತೇನೆ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ. ಛಲವಾದಿಯವರೇ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ರಾಜೀನಾಮೆ ಕೊಡಿ. ಈ ಎರಡು ಕೆಲಸ 24 ಗಂಟೆಯೊಳಗೆ ಮಾಡಿ. ಮಾತು ತಪ್ಪಿದ್ರೆ ಇನ್ಮೇಲೆ ನಿಮ್ಮ ಹೇಳಿಕೆಗೆ ರಿಯಾಕ್ಟ್ ಮಡೋದೇ ತಪ್ಪು ಎಂದು ವಾಗ್ದಾಳಿ ನಡೆಸಿದರು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಇಬ್ಬರೂ ಡಬಲ್ ಇಂಜಿನ್ ಸುಳ್ಳುಗಾರರು ಅಂತ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ನವರು ಪ್ರೂವ್ ಮಾಡುವಂತೆಯೂ ಹೇಳಿದ್ದಾರೆ. ಅಂಬೇಡ್ಕರ್ ಅವರನ್ನು ಸಾವರ್ಕರ್ ಸೋಲಿಸಿದ್ದು ನಿಜವೇ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ ಅವರು ಹೇಳಿದ್ದಾರೆ” ಎಂದು ಸಚಿವ ಖರ್ಗೆ ಹೇಳಿದರು.