Close Menu
Ain Live News
    Facebook X (Twitter) Instagram YouTube
    Saturday, June 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೊಹ್ಲಿಗೆ ನೀವು ಎಚ್ಚರಿಕೆ ನೀಡಬೇಕಿತ್ತು: ಅಂಪೈರ್ ವಿರುದ್ಧ ಗರಂ ಆದ ಗವಾಸ್ಕರ್!

    By AIN AuthorJune 4, 2025
    Share
    Facebook Twitter LinkedIn Pinterest Email
    Demo

    ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್ ಗರಂ ಆಗಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆದ್ದು ಬೀಗಿದೆ.

    IPL 2025: RCB ಐಪಿಎಲ್ ಟ್ರೋಫಿ ಗೆಲ್ಲಲು ಈ ಲಕ್ಕಿ ಕ್ರಿಕೆಟರ್ ಕಾರಣ!?

    ಇನ್ನೂ ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರಿಗೆ ಎಚ್ಚರಿಕೆ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್‌ ಗವಾಸ್ಕರ್ ಅವರು ಅಂಪೈರ್‌ಗಳನ್ನು ಟೀಕಿಸಿದ್ದಾರೆ. ವಿರಾಟ್‌ ಕೊಹ್ಲಿ ಹೆಚ್ಚು ಬೌಂಡರಿ, ಸಿಕ್ಸ್‌ ಹೊಡೆಯಲು ಹೋಗದೇ ವಿಕೆಟ್‌ ಉಳಿಸುವ ಮೂಲಕ ಸಿಂಗಲ್‌, ಡಬಲ್‌ ರನ್‌ ಓಡುತ್ತಿದ್ದರು. 12ನೇ ಓವರ್‌ನಲ್ಲಿ ಚಹಲ್‌ ಎಸೆದ ಎಸೆತವನ್ನು ಕೊಹ್ಲಿ ಲಾಂಗ್‌ ಅನ್‌ ಕಡೆಗೆ ತಳ್ಳಿದರು. ಕೊಹ್ಲಿ ಮತ್ತು ಲಿವಿಂಗ್‌ಸ್ಟೋನ್ ಎರಡು ರನ್‌ ಓಡಿದರು. ರನ್‌ ಓಡುವಾಗ ಕೊಹ್ಲಿ ಪಿಚ್‌ ಮೇಲೆ ನೇರವಾಗಿ ಓಡಿದ್ದರು.

    ಈ ವಿಚಾರವನ್ನು ಪ್ರಸ್ತಾಪ ಮಾಡಿದ ಗವಸ್ಕಾರ್‌, ಕೊಹ್ಲಿ ವಿಕೆಟ್‌ಗಳ ಮಧ್ಯೆ ವೇಗವಾಗಿ ಓಡುತ್ತಾರೆ. ಚೆಂಡನ್ನು ಹೊಡೆದ ತಕ್ಷಣವೇ ಇದರಲ್ಲಿ 2 ರನ್‌ ಬರುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದರು. ಮತ್ತೆ ತಮ್ಮ ವಿವರಣೆಯನ್ನು ಮುಂದುವರಿಸಿ, ಯಾವೊಬ್ಬ ಅಂಪೈರ್‌ ಕೊಹ್ಲಿಗೆ ಏನು ಹೇಳುವುದಿಲ್ಲ. ಅವರು ಮತ್ತೆ ಪಿಚ್‌ ಮೇಲೆ ನೇರವಾಗಿ ಓಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತೆ ಬ್ಯಾಟಿಂಗ್‌ ಮಾಡಬೇಕಿದೆ ಎಂದು ಎಂದು ಹೇಳುವ ಮೂಲಕ ಎಚ್ಚರಿಕೆ ನೀಡದ ಅಂಪೈರ್‌ಗಳನ್ನು ಟೀಕಿಸಿದರು.

    ಕ್ರಿಕೆಟ್‌ನಲ್ಲಿ ರನ್‌ ಓಡುವಾಗ ಬ್ಯಾಟರ್‌ಗಳು ಪಿಚ್‌ ಮೇಲೆ ಓಡುವಂತಿಲ್ಲ. ಪಿಚ್‌ ಮೇಲೆ ಓಡಿದ್ದರೆ ಅದು ಹಾಳಾಗಿ ಬೌಲಿಂಗ್‌ಗೆ ಸಮಸ್ಯೆ ಆಗುತ್ತದೆ ಎನ್ನುವುದು ಗವಾಸ್ಕರ್ ವಾದ.

    Demo
    Share. Facebook Twitter LinkedIn Email WhatsApp

    Related Posts

    RCB ಖರೀದಿಸಲು ಅದೊಂದೇ ಕಾರಣ.. ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ!

    June 6, 2025

    ಆರ್ ಸಿಬಿಗೆ ಮತ್ತೆ ಆಘಾತ: ಬೆಂಗಳೂರಿನಲ್ಲಿ ಮತ್ತೊಂದು FIR ದಾಖಲು!

    June 6, 2025

    ನೂಕು ನುಗ್ಗಲಿಗೆ ಕೊಹ್ಲಿ ಕಾರಣ: ಬೆಂಗಳೂರಿನಲ್ಲಿ ವಿರಾಟ್ ವಿರುದ್ಧ ದೂರು ದಾಖಲು!

    June 6, 2025

    Chinnaswamy Stampede: KSCA ವಿರುದ್ಧ ಬಲವಂತದ ಕ್ರಮ ಬೇಡ – ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

    June 6, 2025

    ಬೆಂಗಳೂರಿನ ಕಾಲ್ತುಳಿತ ಪ್ರಕರಣ: ಭಾರೀ ಟ್ರೆಂಡಿಂಗ್ ನಲ್ಲಿದೆ #ArrestKohli..!

    June 6, 2025

    RCB Victory Parade Stampede: ನಿಖಿಲ್ ಸೋಸಲೆ ಯಾರು?.. ಅವರಿಗೂ RCBಗೂ ಏನು ಸಂಬಂಧ?

    June 6, 2025

    RCB Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: RCB ವಿರುದ್ಧ ಪ್ರಕರಣ ದಾಖಲು!

    June 6, 2025

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಸೈಲೆಂಟಾಗಿ ಎಸ್ಕೇಪ್ ಆಗುತ್ತಿದ್ದ RCB ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಅರೆಸ್ಟ್!

    June 6, 2025

    ಕಾಲ್ತುಳಿತ ಕೇಸ್: ಕಮಿಷನರ್ ದಯಾನಂದ್ ಸಸ್ಪೆಂಡ್.. ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷ; ಯಾರ್ಯಾರು, ಏನಂದ್ರು?

    June 6, 2025

    I Stand with B Dayanand: ಸೋಷಿಯಲ್ ಮೀಡಿಯಾದಲ್ಲಿ ದಯಾನಂದ್ ಗೆ ಭಾರೀ ಬೆಂಬಲ.. ಹಲವು ಪೋಸ್ಟ್ ಗಳು ವೈರಲ್!

    June 6, 2025

    ಕಾಲ್ತುಳಿತ ಕೇಸ್: ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ ದಾಖಲಾಯ್ತು FIR!

    June 5, 2025

    Stampede: ಕಾಲ್ತುಳಿತದಲ್ಲಿ 11 ಜನರ ಸಾವು: ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ RCB!

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.