ಗದಗ:- ಮಹದಾಯಿ ವಿಚಾರದಲ್ಲಿ ಕೆಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್ನ ಓಲೈಕೆ ರಾಜಕೀಯ ಕಾರಣ: CT ರವಿ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕು ಜೋಶಿಯವರಿಗೆ ಇಲ್ಲ. ಫಾರೆಸ್ಟ್, ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಗೆ ಸಭೆ ಮಾಡಿ ಈ ವಿಷಯ ತೆಗೆದುಕೊಳ್ಳೋದಿಲ್ಲ. ಸಭೆ ಮುಂದೆ ಹಾಕ್ತಾ ಇದ್ದೀರಿ, ಆರು ತಿಂಗಳಾದ್ರೂ ಸಭೆ ಮಾಡಿಲ್ಲ ನೀವು. ನಿಮ್ಮ ಮಂತ್ರಿಮಂಡಲದ ಮಂತ್ರಿಯೊಬ್ಬರೂ ಸಭೆ ಮಾಡೋದು ಅಗತ್ಯ ಇರೋದಿಲ್ಲಾ?, ಅವರಿಗೆ ಒತ್ತಾಯ ಮಾಡೋದಿಲ್ಲ ನೀವು.. ಅಷ್ಟೇ ಯಾಕೆ ಪ್ರಧಾನ ಮಂತ್ರಿಗೆ ಹೇಳೊದಿಲ್ಲ. ಕೃಷ್ಣಾ ವಿಚಾರದಲ್ಲಿ 15 ವರ್ಷ ಆಯ್ತು ನೋಟಿಫಿಕೇಶನ್ ಯಾಕೆ ಮಾಡಿಲ್ಲ.
ಕೆಯುಡಬ್ಲೂಡಿಟಿ ಟೂ ಬ್ರಿಜೇಶ್ ಕುಮಾರ್ ವರದಿ ಯಾಕೆ ನೀವು ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಮೊನ್ನೆ ಪಾರ್ಲಿಮೆಂಟ್ ನಲ್ಲಿ ಬೊಮ್ಮಾಯಿ ಹೇಳಿದ್ರಲ್ಲ ಏನು ಉತ್ತರ ನಿಮ್ಮದು. ಉತ್ತರ ಕರ್ನಾಟಕದ ಜನ 15 ವರ್ಷದಿಂದ ನೋವನ್ನ ಸಹಿಸುತ್ತಾ ಕೂತಿದ್ದಾರೆ. ಪ್ರತೀ ಸಂದರ್ಭದಲ್ಲೂ ಏನಾದ್ರೊಂದು ನೆಪ ಹೇಳ್ತೀರಿ. ಹೋದ ತಕ್ಷಣ ಮಹದಾಯಿಗೆ ಕ್ಲಿಯರೆನ್ಸ್ ಕೊಡಿಸ್ತೀವಿ ಅಂತಾ ಹೇಳಿದ್ರಿ.ನಿಮ್ಮ ಪ್ರಧಾನಮಂತ್ರಿ ಮೋದಿ ಹೇಳಿದ್ರು, ಅಮಿತ್ ಶಾ ಹೇಳಿದ್ರು, ಯಡಿಯೂರಪ್ಪನವರು ಪತ್ರ ತೋರಿಸಿ ಹೋದ್ರು. ನೀವು ಬಂದಾಗೊಮ್ಮೆ ಹೇಳ್ತೀರಿ, ನಿಮ್ಮ ಮಾತು ಎಲ್ಲಿದೆ, ವಚನ ಭ್ರಷ್ಟರಾಗಿದ್ದೀರಿ. ಮಹದಾಯಿ ವಿಚಾರ ತೆಗೆಯಲು ನಿಮಗೆ ನೈತಿಕ ಹಕ್ಕು ಇಲ್ಲ. ಕೃಷ್ಣ ವಿಚಾರದಲ್ಲಿ ಕರ್ನಾಟಕಕ್ಕೆ ಮಾಡ್ತಿರೋ ಅನ್ಯಾಯಕ್ಕೆ ನೀವು ಬೆಲೆ ತೆತ್ತಬೇಕಾಗತ್ತೆ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತ-ಪಾಕಿಸ್ತಾನ ಯುಧ್ಧ ಅನಿವಾರ್ಯ:
ಪಹಲ್ಗಾಮ್ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾರತ ಪಾಕಿಸ್ತಾನ ಯುಧ್ಧ ಅನಿವಾರ್ಯ, ಭಾರತ ಅದಕ್ಕಾಗಿ ಸಿಧ್ಧತೆ ಮಾಡಿಕೊಳ್ತಿದೆ, ನಾವೆಲ್ಲಾ ಸನ್ನಧ್ಧರಾಗಿದ್ದೇವೆ ಎಂದರು. ಭಾರತದ ಮೇಲೆ ಬಂದರೆ, ನಮ್ಮ ದೇಶದ ಮೇಲೆ ಕೆಂಗಣ್ಣು ತೆಗೆದರೆ ನಾವು ಅದನ್ನ ಸಹಿಸೋದಿಲ್ಲ. ಪಾಕಿಸ್ತಾನದವರಿಗೆ ತಕ್ಕ ಶಾಸ್ತಿ ಮಾಡ್ತೇವೆ, ಸಿಧ್ಧತೆಗಳನ್ನ ಮಾಡಿಕೊಳ್ತಾ ಇದ್ದೇವೆ. ದೇಶ ಒಂದಾಗಿದೆ, ಒಕ್ಕಟ್ಟಿನಿಂದ ಪಾಕಿಸ್ತಾನಕ್ಕೆ ಬುದ್ದಿ ಕಲಿಸೋಣ. ಜಗತ್ತಿನಲ್ಲಿ ಶಿಸ್ತು, ಸೌಹಾರ್ಧ ಇರೋವಂತಹ ಇನ್ನೊಂದು ದೇಶ ಇಲ್ಲ. ಇಂದಿರಾ ಗಾಂಧಿ ಬಾಂಗ್ಲಾ ದೇಶ ಪ್ರತ್ಯೇಕಗೊಳಿಸಿದ ಸಂದರ್ಭ, ವಾಜಪೇಯಿ ಇದ್ದಂತಹ ಕಾಲದಲ್ಲಿ ಇದ್ದ ವಾತಾವರಣ ಸೃಷ್ಟಿ ಆಗತ್ತೆ. ಯುಧ್ಧ ಪ್ರಾರಂಭ ಅಗಲಿ ಆಗದೇ ಇರಲಿ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ದೇಶದ ಒಂದು ಧ್ವನಿಯಾಗಿ ಮಾತಾಡ್ತಿದ್ದೇವೆ. ದೇಶದ ಪ್ರಶ್ನೆ ಬಂದಾಗ 140 ಕೋಟಿ ಜನ ನಾವು ಒಂದಾಗಿದ್ದೇವೆ. ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸ್ತೇವೆ. ಜಗತ್ತಿನಲ್ಲಿ ಭಾರತದಂತಹ ಒಕ್ಕಟ್ಟಾದ ರಾಷ್ಟ್ರ ಇನ್ನೊಂದಿಲ್ಲ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡೋ ಕಾಲ ಈಗ ಸನ್ನಿಧ್ಧವಾಗಿದೆ ಎಂದರು.