ಅನೇಕ ಜನರು ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಚಪಾತಿಗಳನ್ನು ಸೇವಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಮನೆಯಲ್ಲಿ ತಯಾರಿಸಿದ ಚಪಾತಿ ಬೆರಳುಗಳಿಂದ ಹರಿದುಕೊಂಡು ತಿನ್ನುವಷ್ಟು ತುಂಬಾ ಮೃದುವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ.
Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು
ಆದ್ರೆ, ನೀವು ಎಷ್ಟೇ ಪ್ರಯತ್ನಿಸಿದರೂ ಚಪಾತಿಗಳು ಯಾವಾಗಲೂ ಗಟ್ಟಿಯಾಗಿ ಬರುತ್ತವೆ. ಚಪಾತಿ ಹಿಟ್ಟನ್ನು ಬೆರೆಸುವುದರಿಂದ ಹಿಡಿದು ಚಪಾತಿ ಬೇಯಿಸುವವರೆಗೆ ಕೆಲವು ಟಿಪ್ಸ್ ಪಾಲಿಸಿದರೆ ಅವುಗಳನ್ನು ತುಂಬಾ ಮೃದುವಾಗಿ ತಯಾರಿಸಬಹುದು ಎಂದು ಅಡುಗೆ ತಜ್ಞರು ತಿಳಿಸುತ್ತಾರೆ.
ಸಾಮಾನ್ಯವಾಗಿ ಬೆಳಗ್ಗೆ ಹೊತ್ತು ಬ್ರೇಕ್ಫಾಸ್ಟ್ಗೆ ಇಡ್ಲಿ, ದೋಸೆಯಂತಹ ಪದಾರ್ಥ ತಿನ್ನೋದು ಕಾಮನ್. ಆದ್ರೆ ಕೆಲವೊಮ್ಮೆ ಚೇಂಜ್ ಬೇಕು ಅಂತ ಜನ ಚಪಾತಿ ತಿನ್ನುತ್ತಾರೆ. ಚಪಾತಿ ಅನೇಕ ಮಂದಿಯ ನೆಚ್ಚಿನ ಆಹಾರವಾಗಿದೆ. ಅದರಲ್ಲೂ ಮಧುಮೇಹಿಗಳು ಚಪಾತಿ ತಿನ್ನುವುದರಿಂದ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ವಿಶೇಷವೆಂದರೆ ಚಪಾತಿ ಪ್ರತಿಯೊಬ್ಬರ ಸಂಪೂರ್ಣ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಒಂದಷ್ಟು ಜನರಿಗೆ ದಿನದ ಮೂರು ಹೊತ್ತು ಸಹ ಚಪಾತಿ ಬೇಕೇ ಬೇಕು. ಹೀಗೆ ಚಪಾತಿ ಒಂದಷ್ಟು ಮನೆಗಳಲ್ಲಿ ರೆಗ್ಯೂಲರ್ ಆಹಾರವಾಗಿದೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅನೇಕ ಮಮದಿ ಚಪಾತಿಯನ್ನು ತಮ್ಮ ಪ್ರಧಾನ ಆಹಾರವಾಗಿ ಸೇವಿಸುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಚಪಾತಿ ಎಂಬುದು ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುವ ಜನಪ್ರಿಯ ಆಹಾರವಾಗಿದೆ. ಇದನ್ನು ಹೆಚ್ಚಾಗಿ ಉತ್ತರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಜನ ಸೇವಿಸುತ್ತಾರೆ.
ಚಪಾತಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದು ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದರೆ ಅನೇಕ ಮಂದಿ ಮಾಡುವ ಚಪಾತಿ ತುಂಬಾ ಗಟ್ಟಿಯಾಗಿ ಅಪ್ಪಳದಂತೆ ಆಗುತ್ತದೆ
ಎಷ್ಟೇ ಪ್ರಯತ್ನಿಸಿದರೂ ಚಪಾತಿಯನ್ನು ಮೃದುವಾಗಿ ಮತ್ತು ಟೇಸ್ಟಿಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆ ಮಂದಿಯೆಲ್ಲರಿಂದ ಬೈಗುಳ ಎದುರಿಸಬೇಕಾಗುತ್ತದೆ. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಚಪಾತಿ ಮೃದುವಾಗಿರಬೇಕೆಂದು ಬಯಸುವುದಾದರೆ, ನಾವಿಂದು ತಿಳಿಸುವ ಟ್ರಿಕ್ ಬಳಸಿಕೊಂಡು ಚಪಾತಿ ಹಿಟ್ಟನ್ನು ಕಲಿಸಿ. ಇದರಿಂದ ಚಪಾತಿ ಹಿಟ್ಟನ್ನು ತುಂಬಾ ಮೃದು ಮತ್ತು ರುಚಿಕರವಾಗಿಸಬಹುದು. ಹಾಗಾದ್ರೆ ಚಪಾತಿ ಹಿಟ್ಟನ್ನು ಮೃದುಗೊಳಿಸೋಕೆ ಏನು ಮಾಡಬೇಕು ಎಂದು ನೋಡೋಣ ಬನ್ನಿ
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಮೊದಲು ಚಪಾತಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಹಿಟ್ಟನ್ನು ಬೆರೆಸಿದ ನಂತರ ಅದನ್ನು ಹತ್ತಿ ಬಟ್ಟೆಯಿಂದ ಮುಚ್ಚಿ ಅರ್ಧ ಗಂಟೆ ಬಿಡಿ.
ಹೀಗೆ ಮಾಡುವುದರಿಂದ ಕಲಿಸಿಟ್ಟಿರುವ ಹಿಟ್ಟಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಮತ್ತು ಅದರಲ್ಲಿ ಯೀಸ್ಟ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ತಯಾರಿಸಿದ ಚಪಾತಿ ತುಂಬಾ ಮೃದು ಮತ್ತು ಹಗುರವಾಗಿರುತ್ತದೆ. ಅಲ್ಲದೇ, ಈ ಹಿಟ್ಟಿಗೆ ಬ್ಲ್ಯಾಕ್ ಸಾಲ್ಟ್ ಬಳಸುವುದು ತುಂಬಾ ಒಳ್ಳೆಯದು. ಏಕೆಂದರೆ ಬ್ಲ್ಯಾಕ್ ಸಾಲ್ಟ್ ಅದನ್ನು ಸ್ಥಿತಿಸ್ಥಾಪಕವಾಗಿರಿಸುವುದರೊಂದಿಗೆ ನಮ್ಮನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಆದ್ದರಿಂದ ಇಂದಿನಿಂದ ಚಪಾತಿ ಮಾಡುವಾಗ ನೀವು ಈ ತಂತ್ರವನ್ನು ಬಳಸಿ, ಇದರಿಂದ ನಿಮಗೆ ಮೃದುವಾದ ಮತ್ತು ರುಚಿಕರವಾದ ಚಪಾತಿ ಸಿಗುತ್ತದೆ