ಬೆಂಗಳೂರು:- ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೂಡಸಂದ್ರ ಬಳಿ ಜರುಗಿದೆ. ಆಂದ್ರಪ್ರದೇಶ ಮೂಲದ ನಂದಿನಿ(23) ಮೃತ ಯುವತಿ.
ಬೆಳ್ಳಂ ಬೆಳಗ್ಗೆ ಭ್ರಷ್ಟರ ಬೇಟೆಯಾಡಿದ ‘ಲೋಕಾಯುಕ್ತ’: ಒಟ್ಟು 34.90 ಕೋಟಿ ಮೌಲ್ಯದ ಆಸ್ತಿ ಪತ್ತೆ!
ಸ್ನೇಹಿತರ ಜೊತೆ ಕಟ್ಟಡದ ಮೇಲೆ ತೆರಳಿದ್ದ ವೇಳೆ ಆಯತಪ್ಪಿ ಯುವತಿ ಬಿದ್ದು ಸಾವನ್ನಪ್ಪಿದ್ದಾರೆ. ನಿನ್ನೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಘಟನೆ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಹೇಳಿದ್ದೇನು?
ಲಿಫ್ಟ್ ಗೆ ಮೀಸಲಿಟ್ಟ ಜಾಗದಲ್ಲಿ 13ನೇ ಪ್ಲೋರ್ ನಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದ ಬಳಿ ಸ್ನೇಹಿತರು ಹೋಗಿದ್ದರು. ಹುಡುಗಿ ಹಾಗೂ ಹುಡುಗರ ಜೊತೆ ಪಾರ್ಟಿ ಮಾಡಲು ಹೋಗಿದ್ರು. ವೇಳೆ ಲವ್ ವಿಚಾರಕ್ಕೆ ಮಾತುಕತೆ ಆಗಿ ಗಲಾಟೆ ಆಗಿದೆ.
ಈ ವೇಳೆ ಸ್ಯಾಡ್ ರೀಲ್ಸ್ ಮಾಡಲು ಯುವತಿ ಹೋಗಿದ್ದಾಳೆ. ರೀಲ್ಸ್ ಮಾಡ್ತಾ ಮಾಡ್ತಾ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಯುವತಿ ಶಾಪಿಂಗ್ ಮಾರ್ಟ್ ವೊಂದರಲ್ಲಿ ಕೆಲ್ಸ ಮಾಡ್ತಿದ್ದಳು ಎನ್ನಲಾಗಿದೆ. ಘಟನೆ ಬಳಿಕ ಜೊತೆಗಿದ್ದ ಯುವಕರು ಪರಾರಿ ಆಗಿದ್ದಾರೆ.
ಇವರು ಮೂಲತಃ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.