ಬೆಂಗಳೂರು: ನಿಮ್ಮ ಹೊಸ ನಾಮಕರಣದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ನಿರ್ಧಾರವನ್ನು ಖಂಡಿಸಿ, ರಿಯಲ್ ಎಸ್ಟೇಟ್ ಯೋಜನೆಯ ಕರಪತ್ರದಂತೆ ಮರು ನಾಮಕರಣ ಮಾಡಲಾಗುತ್ತಿದೆ ಎಂದು ಗುಡುಗಿದ್ದಾರೆ.
ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದು ಅಭಿವೃದ್ಧಿಯಲ್ಲ, ಅದು ಒಂದು ಫಲಕ ಬದಲಾವಣೆ ಮಾತ್ರ. ಐತಿಹಾಸಿಕವಾಗಿ ಆಳವಾದ ಬೇರುಗಳು ಮತ್ತು ಇತಿಹಾಸ ಹೊಂದಿರುವ ಜಿಲ್ಲೆಯನ್ನು ರಿಯಲ್ ಎಸ್ಟೇಟ್ ಯೋಜನೆಯ ಕರಪತ್ರದಂತೆ ಮರುನಾಮಕರಣ ಮಾಡಲಾಗುತ್ತಿದೆ ಕಿಡಿಕಾರಿದ್ದಾರೆ.
ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ
ಊರ ಹೆಸರು ಮರುನಾಮಕರಣವು ಬೆಳವಣಿಗೆಗೆ ಮಾಂತ್ರಿಕ ದಂಡವಾಗಿದ್ದರೆ, ಕನಕಪುರವನ್ನು ಕೌಲಲಾಂಪುರ್ ಎಂದು ಮರುನಾಮಕರಣ ಮಾಡಿ ಈಗ ಅಂತರರಾಷ್ಟ್ರೀಯ ನಗರವಾಗಿ ಪರಿವರ್ತಿಸಬಹುದಿತ್ತು. ಆದರೆ ದುಃಖಕರವೆಂದರೆ, ನಿಮ್ಮ ಹೊಸ ನಾಮಕರಣದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 2 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದಲ್ಲಿ ಒಂದೇ ಒಂದು ಅಭಿವೃದ್ಧಿ ಯೋಜನೆಯೂ ಆರಂಭಗೊಂಡಿಲ್ಲ. ನೀವು ರಾಜಕೀಯ ಹೋರ್ಡಿಂಗ್ಸ್‌ಗಳನ್ನೇ ಮೂಲ ಸೌಕರ್ಯ ಅಂದುಕೊಂಡಂತಿದೆ. ಇದೇ ರೀತಿ ಮುಂದುವರೆದರೆ, ಮಾನ್ಯ ಡಿ.ಕೆ ಶಿವಕುಮಾರ್ ಅವರು ತಮ್ಮನ್ನು ಡಿ.ಕೆ ಸಿಎಂ ಕುಮಾರ್ ಎಂದು ಮರುನಾಮಕರಣ ಮಾಡಬಹುದು. ಏಕೆಂದರೆ ನಾಯಕತ್ವ ಇಲ್ಲದಿದ್ದಾಗ, ಬ್ರ‍್ಯಾಂಡಿಂಗ್ ಮಾತ್ರ ಪ್ರಣಾಳಿಕೆಯಾಗುತ್ತದೆ ಎಂದು ಟೀಕಿಸಿದ್ದಾರೆ.