ಭಾರತದ ವಿರುದ್ಧ ಬೇಹುಗಾರಿಕೆ ಮಾಡುತ್ತಿರುವ ಆರೋಪದಡಿ ಅರೆಸ್ಟ್ ಆಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಹರಿಯಾಣದ ಹಿಸಾರ್‌ನಲ್ಲಿರುವ ಸ್ಥಳೀಯ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಜ್ಯೋತಿ ಬಗ್ಗೆ ಹೊಸ ಸಂಗತಿ ಬೆಳಕಿಗೆ?
ಜ್ಯೋತಿ ಮಲ್ಹೋತ್ರಾ ಬಗ್ಗೆ ದಿನಕ್ಕೊಂದು ಹೊಸ ಹೊಸ ಸಂಗತಿಗಳು ಹೊರಬೀಳುತ್ತಿವೆ. ಪಾಕಿಸ್ತಾನದಲ್ಲೊ ಗನ್ ಮ್ಯಾನ್ ಗಳ ಸಹಾಯದಿಂದ ಬ್ಲಾಗ್ ಮಾಡಿರುವ ಜ್ಯೋತಿ ವಿಡಿಯೋ ವೈರಲ್ ಆಗುತ್ತಿದೆ. ಹೇಳಿಕೇಳಿ ಪಾಕಿಸ್ತಾನದಲ್ಲಿ ಭಾರತೀಯರಿಗೆ ರಕ್ಷಣೆ ಕಡಿಮೆ ಇದೆ. ಹೀಗಿರುವಾಗ ಜಾಲಿಯಾಗಿ ಪಾಕ್ ಸುತ್ತಿ ಮಲ್ಹೋತ್ರಾ ವಿಡಿಯೋ ಮಾಡಿದ್ದೇಗೆ? ಪ್ರಶ್ನೆಗಳು ಹುಟ್ಟಿಕೊಂಡಿದೆ. ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೇ 17ರಂದು ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಾರು ಈ ಜ್ಯೋತಿ?
ಹರಿಯಾಣದ ಹಿಸಾರ್‌ನಲ್ಲಿ ವಾಸಿಸುತ್ತಿದ್ದ ಮತ್ತು ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಕೆಲಸ ಮಾಡುತ್ತಿದ್ದ ಅಲಿ ಹಸನ್ ಜೊತೆ ಆಕೆ ನಿರಂತರ ಸಂಪರ್ಕದಲ್ಲಿದ್ದರು.‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಭಾರತದಲ್ಲಿ ಬ್ಲ್ಯಾಕೌಟ್ ಹೇರಿದ ಬಗ್ಗೆ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ವಿವರಗಳನ್ನು ಸೋರಿಕೆ ಮಾಡಿರುವ ವಿಷಯ ಹೊರಬಿದ್ದಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯುತ್ತಿರುವಾಗ ಆಕೆ ಡ್ಯಾನಿಶ್ ಜೊತೆ ಸಂಪರ್ಕದಲ್ಲಿದ್ದರು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ ಜ್ಯೋತಿ ಅವರು ಡ್ಯಾನಿಶ್ ಜೊತೆಗಿನ ತಮ್ಮ ಚಾಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ.