ಕಲುಬುರಗಿ: ಬಾಂಬ್ಗಳನ್ನು ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ ಅಂತ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ನಗರಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನುಮತಿ ನೀಡಿದರೆ ತಾನು ಈಗಲೂ ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಲು ಸಿದ್ಧ,
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ತಾನು ತಯಾರು ಎಂದು ಮತ್ತೊಮ್ಮೆ ಹೇಳಿದರು. ನಾಗರಿಕರನ್ನು ಯುದ್ಧಕ್ಕೆ ಕಳಿಸಲ್ಲ ಎಂಬ ಅಂಶ ಪ್ರಾಯಶಃ ಸಚಿವರಿಗೆ ಗೊತ್ತಿದ್ದಂತಿಲ್ಲ.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಪಾಕಿಸ್ತಾನಕ್ಕೆ ಯಾವುದೇ ಸಾಮರ್ಥ್ಯ ಇಲ್ಲ, ಅದೊಂದು ಖಾಲಿ ಡಬ್ಬ ಮತ್ತು ಠುಸ್ ಪಟಾಕಿ ಎಂಬ ಉಪಮೆಗಳನ್ನು ಬಳಸುವ ಜಮೀರ್ ಅಹ್ಮದ್ ಭಾರತ ಮನಸ್ಸು ಮಾಡಿದರೆ ಕೇವಲ ಎರಡು ದಿನಗಳಲ್ಲಿ ಪಾಕಿಸ್ತಾನ ನಿರ್ನಾಮವಾಗುತ್ತದೆ ಎಂದರು.