ವಿಜಯಪುರ: ಬಾಂಬ್ ಕಟ್ಟಿಕೊಂಡು ಪಾಕ್ ಗಡಿಗೆ ಹೋಗ್ತೀನಿ ಎಂದ ಸಚಿವ ಜಮೀರ್ ಅಹ್ಮದ್‌ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದರು.
ವಿಜಯಪುರದ ಲಕ್ಷ್ಮೀ ನರಸಿಂಹ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮೀರ್ ಶಾಂತವಾಗಿದ್ದರೇ ಸಾಕು. ನೀವೆನೂ ಮಾಡೋದು ಬೇಡ, ಸುಮ್ಮನಿದ್ದರೆ ಸಾಕು. ಮಿಲಿಟರಿಯನ್ನ ನಂಬಿ ಸುಮ್ಮನಿರಿ ಸಾಕು. ನಿಮ್ಮ ಭಾಷಣ ಬೇಡ, ನೀವು ಹೋಗೋದು ಬೇಡ ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ಜಮೀರ್ ಶಾಂತವಾಗಿರೋದೆ ದೇಶಕ್ಕೆ ಮಾಡೋ ದೊಡ್ಡ ಸೇವೆ ಎಂದು ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನದ ಎದುರು ಯುದ್ಧಕ್ಕೆ ಹೋಗಲು ಸಿದ್ದ ; ಸಚಿವ ಜಮೀರ್ ಅಹಮ್ಮದ್ ಖಾನ್
ಇನ್ನೂ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಹಾಡುಹಗಲೇ ಈ ಪರಿಯಾಗಿ ಹೊಡೆದು ಕೊಲ್ಲುತ್ತಾರೆ. ಆ ಪರಿಯಾಗಿ ಹೊಡೆದು ಕೊಲ್ಲುತ್ತಾರೆ. ಇದು ನಿಮ್ಮ (ರಾಜ್ಯ ಸರ್ಕಾರ) ಇಂಟೆಲಿಜೆನ್ಸ್ ವೈಫಲ್ಯ ಅಲ್ವೆ. ಮೊದಲಿಗೆ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಮತ್ತೆ ಅವನನ್ನು ಆರೋಪಿ ಮಾಡಿದ್ರು. ಕಾಂಗ್ರೆಸ್ ಸರ್ಕಾರ ಬೇಕಂತೆ ಆರೋಪಿ ಮಾಡಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಖಂಡಿಸುತ್ತೇನೆ. 26 ಜನರ ಸಾವಾದ್ರು ಅಷ್ಟೇ ಒಬ್ಬರ ಸಾವಾದ್ರು ಅಷ್ಟೇ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.