ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ತಲುಪಿದೆ. ಎರಡೂ ದೇಶಗಳ ಮಧ್ಯೆ ದೊಡ್ಡ ಮೊಟ್ಟದಲ್ಲಿ ಘರ್ಷಣೆ ಆಗ್ತಿದ್ದು, ದೊಡ್ಡ ಅಪಾಯದ ಸೂಚನೆ ಸಿಗ್ತಿದೆ. ಇದರ ನಡುವೆ ವಿವಿಧ ವಿಮಾನಯಾನ ಸಂಸ್ಥೆಗಳು ದೆಹಲಿ ವಿಮಾನ ನಿಲ್ದಾಣದಲ್ಲಿಸುಮಾರು 138 ವಿಮಾನಗಳನ್ನು ರದ್ದುಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಒಟ್ಟು 66 ದೇಶೀಯ ನಿರ್ಗಮನಗಳು ಮತ್ತು 63 ಆಗಮನ ವಿಮಾನಗಳು, ಹಾಗೆಯೇ 5 ಅಂತರರಾಷ್ಟ್ರೀಯ ನಿರ್ಗಮನಗಳು ಮತ್ತು 4 ಆಗಮನ ವಿಮಾನಗಳ ಹಾರಾಟವನ್ನು ಭದ್ರತಾ ದೃಷ್ಟಿಯಿಂದ ರದ್ದು ಮಾಡಲಾಗಿದೆ.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ವಾಯುಪ್ರದೇಶದ ಪರಿಸ್ಥಿತಿ ಮತ್ತು ಹೆಚ್ಚಿದ ಭದ್ರತಾ ಕ್ರಮಗಳಿಂದಾಗಿ, ಕೆಲವು ವಿಮಾನಗಳ ವೇಳಾಪಟ್ಟಿ ಮತ್ತು ಭದ್ರತಾ ಪ್ರಕ್ರಿಯೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಡಿಐಎಎಲ್ ಎಕ್ಸ್ ಮೂಲಕ ತಿಳಿಸಿದೆ.
ಭದ್ರತಾ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಮಯಕ್ಕೆ ಸಿದ್ಧರಾಗಿರಬೇಕು ಮತ್ತು ಸುಗಮ ಪ್ರಕ್ರಿಯೆಗಾಗಿ ವಿಮಾನಯಾನ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಪ್ರಯಾಣಿಕರಿಗೆ ಸಲಹೆ ನೀಡಿದೆ. ಏ. 22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ಮಂದಿ ಮೃತಪಟ್ಟಿದ್ದರು.
ಈ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕ್ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಮುಂಜಾಗ್ರತೆ ಕ್ರಮವಾಗಿ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ 27 ಏರ್‌ಪೋರ್ಟ್‌ಗಳಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.