Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಆಷಾಢದಲ್ಲೂ ಗಗನಕ್ಕೇರಿದ ಬಣ್ಣ ಬಣ್ಣದ “ಹೂ” ಗಳ ಬೆಲೆ! ಬೇಸಿಗೆಯ ನೀರಿನ ಕೊರತೆಯಿಂದ ಬೆಳೆ ಪ್ರಮಾಣದಲ್ಲಿ‌ ಕುಂಠಿತ

    By AIN AuthorJuly 21, 2024
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಆಷಾಡದಲ್ಲೂ ಹೂ ಬೆಳೆಗಾರರಿಗೆ ಡಬಲ್ ಶಾಕ್ ಎದುರಾಗಿದೆ. ಮಾರುಕಟ್ಟೆಯಲ್ಲಿರುವ ಬೆಲೆ ರೈತನ ಕೈಸೇರುತ್ತಿಲ್ಲ. ಒಂದು ಕಡೆ ಈ ಬಾರಿ ಬೇಸಿಗೆಯಲ್ಲಿ ಆದ ನೀರಿನ ಅಭಾವ, ಇನ್ನೊಂದೆಡೆ  ಮಳೆಯ ಅವಾಂತರದಿಂದಾಗಿ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದೆ. ಹೂ ಬೆಳೆಗಾರರಿಗೆ ನಷ್ಟವಾಗುವ ಪರಿಸ್ಥಿತಿ ಇದ್ದರೂ ಮಾರುಕಟ್ಟೆಯಲ್ಲಿ ಮಾತ್ರ ಹೂಗಳ ದರ ಏರಿಕೆಯಲ್ಲಿದೆ. ಸದ್ಯ ಗ್ರಾಹಕನಿಗೆ ಕೈಸೇರುವ ಹೂಗಳ ದರ ಹಾಗೂ ರೈತನಿಗೆ ಸಿಗುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.. ಇದರ ಬಗ್ಗೆ ಮತ್ತಷ್ಟು ಡೀಟೇಲ್ಸ್ ಇಲ್ಲಿದೆ ನೋಡಿ..

    Guru Purnima: ಇಂದು ʼʼಗುರು ಪೂರ್ಣಿಮೆʼʼ: ಈ ದಿನದ ಮಹತ್ವ, ಇತಿಹಾಸ ಇಲ್ಲಿದೆ ನೋಡಿ..!

    ಹೌದು, ಆಷಾಢದಲ್ಲಿ ಸಾಮಾನ್ಯವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಹೂಗಳು ಸಿಗುತ್ತಿತ್ತು . ಈ ಸಂಧರ್ಭದಲ್ಲಿ ಶುಭಸಮಾರಂಭಗಳು ಕಡಿಮೆ ಹಿನ್ನೆಲೆ ಹೂಗಳು ಬೇಡಿಕೆ ಕಳೆದುಕೊಳ್ಳುತ್ತಿತ್ತು. ಇದರಿಂದ ಹೂಗಳ ಬೆಲೆ ಗಣನೀಯ ಇಳಿಕೆ ಕಾಣುತ್ತಿತ್ತು. ಆದರೆ ಈ ಬಾರಿ ಚಿತ್ರಣ ಬದಲಾಗಿದ್ದು, ಮಾರುಕಟ್ಟೆಯಲ್ಲಿ ಆಷಾಢದಲ್ಲೂ ಹೂಗಳ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಹೂ ದುಬಾರಿ ಹೂ ಬೆಳೆಗಾರರಿಗೆ ನಷ್ಟವಾಗುವ ಪರಿಸ್ಥಿತಿ ಇದ್ದರೂ ಮಾರುಕಟ್ಟೆಯಲ್ಲಿ ಮಾತ್ರ ಹೂಗಳು ದರ ಕಾಯ್ದುಕೊಳ್ಳುತ್ತಿದೆ. ರೈತರಿಗೆ ಬೆಲೆ ಸಿಗದಿದ್ದರೂ ಮಧ್ಯವರ್ತಿಗಳಿಗೆ, ಲಾಭವಾಗುವಂತಹ ದರ ಮಾರುಕಟ್ಟೆಯಲ್ಲಿ ನಿಗದಿಯಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ

    • ಗುಲಾಬಿ- 80-100
    • ಸೇವಂತಿಗೆ- 300,
    • ಸುಗಂಧ ರಾಜ 40-50,
    • ಕಾಕಡ 400-500
    • ಮಲ್ಲಿಗೆ 300,
    • ಕನಕಾಂಬರ 600-800 ರೂ.

    ಇದೆ ಇದಲ್ಲದೆ ಬಹುತೇಕ ಎಲ್ಲಾ ಹೂಗಳ ದರ ಹೆಚ್ಚಳದಲ್ಲಿಯೇ ಮಾರಾಟವಾಗುತ್ತಿದೆ. ಇನ್ನು ಜಿಲ್ಲೆಯಾದ್ಯಂತ ಆಷಾಢದ ಹಿನ್ನೆಲೆ ಶುಭ ಸಮಾರಂಭಗಳ ಆಯೋಜನೆಯಿಲ್ಲ. ಇದರಿಂದ ಕೆಲ ರೈತರು ಮುಂದೆ ಬರುವ ವರಮಹಾಲಕ್ಷ್ಮಿ ಹಬ್ಬ, ಗಣೇಶ ಹಬ್ಬಗಳಿಗೆ ಫಸಲು ಬರುವಂತೆ ಹೂ ಬೆಳೆಯುತ್ತಿದ್ದಾರೆ. ಇದರಿಂದ ಸದ್ಯ ಹೂಗಳ ಕೊರತೆ ಉಂಟಾಗಬಹುದು. ಇದರಿಂದ ಬೇಡಿಕೆ ಕೂಡ ಹೆಚ್ಚಲಿದ್ದು  ಮುಂದಿನ ದಿನಗಳಲ್ಲಿ ಹೂವಿನ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ..

    ಮಾರುಕಟ್ಟೆಯಲ್ಲಿ ಹೂಗಳಿಗೆ ಉತ್ತಮ ದರವಿದೆ. ಆದರೆ ನಮಗೆ ಮಾತ್ರ ಕಡಿಮೆ ದರ ಕೈಸೇರುತ್ತಿದೆ. ಹಾಕಿದ ಬಂಡಾವಳ ಕೈಸೇರಲೂ ಕಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ ಒಟ್ಟಾರೆಯಾಗಿ, ಈಗಾಗಲೇ ಪೆಟ್ರೋಲ್ ಡೀಸೆಲ್, ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಕ್ಕೆ,ಆಷಾಢದಲ್ಲಿ ಹೂ ಗಳ ಬೆಲೆ ಕಡಿಮೆ ಇರುತ್ತೆ ಎಂದು ಕೊಂಡಿದ್ರು, ಇದೀಗ ಹೂ ಬೆಲೆ ಏರಿಕೆಯಿಂದ ಜನರ ನಿರೀಕ್ಷೆ ಹುಸಿಯಾಗಿದ್ದು, ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ದುಷ್ಕರ್ಮಿಗಳಿಂದ ಭೀಕರ ಹತ್ಯೆಯಾಗಿದ್ದ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ!

    June 8, 2025

    ಬಿಎಂಟಿಸಿ ಬಸ್ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು!

    June 8, 2025

    ಸೂಟ್​ಕೇಸ್​ನಲ್ಲಿ ಬಾಲಕಿ ಶವ ಪತ್ತೆ ಕೇಸ್: ಪ್ರಕರಣ ಬೇಧಿಸಿದ ಪೊಲೀಸರಿಗೆ ಅಚ್ಚರಿ ಮಾಹಿತಿ ರಿವೀಲ್!

    June 8, 2025

    ಕಾಲ್ತುಳಿತ ದುರಂತ ಕೇಸ್: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು!

    June 8, 2025

    ಕಾಲ್ತುಳಿತ ಕೇಸ್: RCB ಅಭಿಮಾನಿಗಳಿಂದ ಪರಸರಕ್ಕೂ ಹಾನಿ.. ದೂರು ದಾಖಲು!

    June 8, 2025

    ಕಾಲ್ತುಳಿತ ಕೇಸ್: ಇದೊಂದು ಬೇವರ್ಸಿ ಸರ್ಕಾರ- ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಆರ್ ಅಶೋಕ್!

    June 8, 2025

    ಬೆಂಗಳೂರಿನಲ್ಲಿ ನಕಲಿ ಸಿಗರೇಟ್ ಮಾರಾಟ: ಕೇರಳ ಮೂಲದ ಇಬ್ಬರು ಅರೆಸ್ಟ್!

    June 8, 2025

    ಕರ್ನಾಟಕದಲ್ಲಿ ನಾಳೆಯಿಂದ ಮುಂಗಾರು ಚುರುಕು: 5 ದಿನ ವ್ಯಾಪಕ ಮಳೆ ಸಾಧ್ಯತೆ!

    June 8, 2025

    ಬಸ್ ರಷ್ ಇದ್ರೂ ಬಸ್ ಹತ್ತೋ ಮಹಿಳೆಯರೇ ಈ ಸುದ್ದಿ ನೋಡಲೇಬೇಕು! ಇಂಥವರು ಇದ್ದಾರೆ ಹುಷಾರ್!

    June 8, 2025

    ಕಾಲ್ತುಳಿತ ಕೇಸ್: ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹೆಚ್ಚಿಸಿದ ರಾಜ್ಯ ಸರ್ಕಾರ!

    June 7, 2025

    ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.11ರ ಬಳಿಕ ಜೋರು ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ಹೈ ಅಲರ್ಟ್!

    June 7, 2025

    ಚಿನ್ನಸ್ವಾಮಿ ದುರಂತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಗೋವಿಂದ ಕಾರಜೋಳ!

    June 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.