Close Menu
Ain Live News
    Facebook X (Twitter) Instagram YouTube
    Friday, May 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ನೀವು ಕೂಡ ಟೈಪ್​-ಸಿ ಚಾರ್ಜರ್​ ಬಳಸ್ತೀರಾ!? ಹಾಗಿದ್ರೆ ಈ ಮಿಸ್ಟೇಕ್ ಮಾಡ್ಬೇಡಿ, ಫೋನ್ ಬ್ಲಾಸ್ಟ್ ಆಗತ್ತೆ!

    By AIN AuthorMarch 26, 2025
    Share
    Facebook Twitter LinkedIn Pinterest Email
    Demo

    ಇತ್ತೀಚಿನ ವರ್ಷಗಳಲ್ಲಿ ಯಾವುದನ್ನಾದರೂ ಬಿಡಬಹುದು ಆದರೆ ಮೊಬೈಲ್ ಫೋನ್ ಗಳನ್ನು ಬಿಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ, ನಮ್ಮ ಜೀವನವನ್ನು ಸುಲಭ, ವೇಗ ಮತ್ತು ಅನುಕೂಲಕರವಾಗಿಸಿದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು, ಪ್ರಪಂಚದ ಮಾಹಿತಿ ಪಡೆಯಲು ಅಥವಾ ಯಾವುದೇ ಕೆಲಸವನ್ನು ತಕ್ಷಣ ಪೂರ್ಣಗೊಳಿಸಲು, ದೈನಂದಿನ ಅಗತ್ಯಗಳನ್ನು ಪೂರೈಸಲು ಅತ್ಯಂತ ಸಹಕಾರಿಯಾಗಿದೆ. ಇದರ ಮೂಲಕ ಇಂಟರ್ನೆಟ್ ಜೊತೆಗೆ ಅನೇಕ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಮಗೆ ಅಗತ್ಯವಿರುವ ಮಾಹಿತಿಯನ್ನು ನಾವು ಎಲ್ಲಿಯಾದರೂ, ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ವಸ್ತುವಾಗಿರಲಿ ಅವುಗಳಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ.

    ನೀರಿಗಾಗಿ ಪರದಾಡುತ್ತಿರುವ ಜನರು: ಅಷ್ಟಕ್ಕೂ ಇದು ಎಲ್ಲಿ ಅಂತೀರಾ…? ಈ ಸ್ಟೋರಿ ನೋಡಿ

    ಸ್ಮಾರ್ಟ್​​ಫೋನ್​ಗಳಿಗೆ ಚಾರ್ಜರ್​ ಬೇಕೆ ಬೇಕು. ಆದರೆ ಚಾರ್ಜ್​ ಹಾಕುವುದಕ್ಕೂ ಕೆಲವ ನಿಯಮಗಳಿಗೆ. ಬೇರೆ ಬೇರೆ ಚಾರ್ಜರ್​ಗಳು ಇದ್ದಾವೆ. ಹಾಗಾಗಿ ನೀವು ಬಳಸುವ ಚಾರ್ಜರ್​ ಕೂಡ ನಿಮ್ಮ ಮೊಬೈಲ್​ ಬಾಳಿಕೆಗೆ ಸಂಬಧಿಸಿರುತ್ತದೆ

    ಮೊದಲೆಲ್ಲಾ ಬೇರೆ ಬೇರೆ ಫೋನ್​ಗಳಿಗೆ ಬೇರೆ ಬೇರೆ ರೀತಿಯ ಚಾರ್ಜರ್​ ಕೇಬಲ್​ ಬರ್ತಿತ್ತು. ಆದ್ರೆ ಈಗ ಬಹುತೇಕ ಎಲ್ಲಾ ಮೊಬೈಲ್​ಗಳಿಗೆ ಯುಸಿಬಿ ಟೈಪಿ-ಸಿ ಚಾರ್ಜರ್​​ಗಳನ್ನು ಬಳಸಲಾಗುತ್ತಿದೆ. ಆದ್ರೆ ಈಗ ಟೈಪ್​- ಸಿ ಚಾರ್ಜರ್​ಗಳು ನಿಮ್ಮ ಮೊಬೈಲ್​ಗೆ ಎಷ್ಟು ಸೇಫ್​ ಎಂಬ ಪ್ರಶ್ನೆ ಮೂಡಿದೆ. ​​ಆದರೂ ಈಗೆಲ್ಲಾ ಟೈಪ್ ಸಿ ಚಾರ್ಜರ್ ನಿಮ್ಮ ಮೊಬೈಲ್ ಫೋನ್‌ಗೆ ಒಂದು ರೀತಿ ‘ಹೀರೋ’ ಆಗಿರಬಹುದು. ಟೈಪ್​ ಸಿ ಚಾರ್ಜರ್​ ಮೊಬೈಲ್​ಗಳ ಸಂಖ್ಯೆ ಕ್ರಮೇಣ ಏರಿಕೆಯಾಗಿದೆ.

    ಇತ್ತೀಚಿನ ದಿನಗಳಲ್ಲಿ, ಆಂಡ್ರಾಯ್ಡ್‌ನಿಂದ ಐಫೋನ್‌ವರೆಗೆ ಬಹುತೇಕ ಎಲ್ಲಾ ಫೋನ್‌ಗಳಲ್ಲಿ ಯುಎಸ್‌ಬಿ ಟೈಪ್ ಸಿ ಚಾರ್ಜರ್‌ಗಳನ್ನು ಬಳಸಲಾಗುತ್ತಿದೆ. ಆದರೆ ನೀವು ಈ ಚಾರ್ಜರ್​ ಬಳಸುವಾಗ ಸ್ವಲ್ಪ ಹುಷಾರಾಗಿರಬೇಕು. ಇಲ್ಲವಾದ್ರೆ ನಿಮ್ಮ ಮೊಬೈಲ್​ ಹೀಟ್​​ ಆಗಿ ಬ್ಲಾಸ್ಟ್​​ ಆಗಬಹುದು.

    ನೀವು ನಿಮ್ಮ ಫೋನ್‌ ಖರೀದಿಸುವಾಗ ಅದರೊಂದಿಗೆ ಬಂದ ಮೂಲ ಚಾರ್ಜರ್ ಅನ್ನೇ ಬಳಸಬೇಕು. ಒಂದು ವೇಳೆ ಅದು ಹಾನಿಗೊಳಗಾಗಿ ನೀವು ಮಾರುಕಟ್ಟೆಗೆ ಹೋಗಿ ಅಗ್ಗದ ಟೈಪ್-ಸಿ ಚಾರ್ಜರ್ ಖರೀದಿಸಿದರೆ, ನಿಮ್ಮ ಈ ಸಣ್ಣ ನಿರ್ಲಕ್ಷ್ಯವು ನಿಮಗೆ ದೊಡ್ಡ ಹಾನಿಯನ್ನುಂಟುಮಾಡಬಹುದು. ಫೋನ್ ಅಗ್ಗದ ಚಾರ್ಜರ್‌ನೊಂದಿಗೆ ಚಾರ್ಜ್ ಆಗುತ್ತದೆ, ಆದರೆ ನೀವು ಕ್ರಮೇಣ ಅದರ ಅನಾನುಕೂಲಗಳನ್ನು ಅರ್ಥಮಾಡಿಕೊಳ್ಳುತ್ತೀರಿ.

    ಈ ಅಗ್ಗದ ಚಾರ್ಜರ್‌ನೊಂದಿಗೆ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿದಾಗ, ಈ ಚಾರ್ಜರ್ ಫೋನ್‌ಗೆ ಹೆಚ್ಚಿನ ವೋಲ್ಟೇಜ್ ಅನ್ನು ಒದಗಿಸುತ್ತದೆ. ಫಾಸ್ಟ್​ ಚಾರ್ಜಿಂಗ್​ ಆದರೂ ಕೂಡ ಇದು ನಿಮ್ಮ ಮೊಬೈಲ್ ಫೋನ್‌ನ ಬ್ಯಾಟರಿಯನ್ನು ಮಾತ್ರವಲ್ಲದೆ ಫೋನ್‌ನ ಮದರ್‌ಬೋರ್ಡ್ ಅನ್ನು ಸಹ ಹಾನಿಗೊಳಿಸುತ್ತದೆ.

    ಟೈಪ್-ಸಿ ಚಾರ್ಜರ್‌ಗಳು ನಿಮ್ಮ ಫೋನ್ ಅನ್ನು ಅತೀ ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದ್ದರಿಂದ ಕೆಲವರು ಬ್ಯಾಟರಿ ಕಡಿಮೆಯಾದಾಗ ತಮ್ಮ ಫೋನ್‌ಗಳನ್ನು ಪದೇ ಪದೇ ಚಾರ್ಜ್‌ನಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ. ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ಫೋನ್ ಬಿಸಿಯಾಗುವುದಲ್ಲದೆ, ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ಇದು ಸಂಭವಿಸಿದಲ್ಲಿ, ಫೋನ್ ಕೂಡ ಸ್ಫೋಟಗೊಳ್ಳಬಹುದು

    ಚಾರ್ಜಿಂಗ್ ಪವರ್ ಪ್ರತಿ ಫೋನ್‌ಗೆ ಬದಲಾಗುತ್ತದೆ, ಉದಾಹರಣೆಗೆ ಕೆಲವು ಫೋನ್‌ಗಳು 18 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ ಮತ್ತು ಕೆಲವು ಫೋನ್‌ಗಳು 120 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮೊಬೈಲ್​ನನ್ನು ತಪ್ಪಾದ ಚಾರ್ಜರ್‌ನಲ್ಲಿ ಚಾರ್ಜ್ ಮಾಡುವುದರಿಂದ ಹ್ಯಾಂಡ್‌ಸೆಟ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಇದು ಅತೀ ವೇಗದ ಚಾರ್ಜ್​ ಕೆಪಾಸಿಟಿ ತಡೆಯಲಾದೇ ಓವರ್​ ಹೀಟ್​​ ಆಗಿ ಮೊಬೈಲ್​ ಬ್ಲಾಸ್ಟ್​​ ಆಗುವ ಸಾಧ್ಯತೆಯೂ ಇದೆ.

    ಮೊಬೈಲ್‌ಗೆ ಟೈಪ್-ಸಿ ಚಾರ್ಜರ್​ನ ಹಾನಿಯನ್ನು ತಪ್ಪಿಸುವುದು ಹೇಗೆ?: ನೀವು ನಿಮ್ಮ ಸ್ಮಾರ್ಟ್​​ಫೋನ್​ಗೆ ಹೆಚ್ಚಿನ ಮನ್ನಣೆ ಕೊಡುತ್ತೀರಿ. ಮತ್ತು ನಿಮ್ಮ ಫೋನ್ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಬಯಸಿದರೆ, ಚಾರ್ಜಿಂಗ್​ ಸಂದರ್ಭದಲ್ಲಿ ಯಾವಾಗಲೂ ಫೋನ್​ ಖರೀದಿಸುವಾಗ ನೀಡಿದ ಮೂಲ ಚಾರ್ಜರ್ ಮತ್ತು ಕೇಬಲ್ ಅನ್ನು ಬಳಸಿ. ಅದು ಹಾನಿಗೊಳಗಾಗಿದ್ದರೂ ಸಹ, ಪ್ರತಿಷ್ಠಿತ ಮೊಬೈಲ್ ಕಂಪನಿ ಅಥವಾ ಮೊಬೈಲ್​ ಅಂಗಡಿಗೆ ಹೋಗಿ ಮೂಲ ಚಾರ್ಜರ್ ಮತ್ತು ಕೇಬಲ್ ಅನ್ನು ಮಾತ್ರ ಖರೀದಿಸಿ. ಇದರಿಂದ ನಿಮ್ಮ ಸ್ಮಾರ್ಟ್​​ ಫೋನ್​ ಬಹಳ ವರ್ಷ ಬಾಳಿಕೆ ಬರುತ್ತದೆ. ಹ್ಯಾಂಗ್​ ಆಗುವುದು, ಬ್ಯಾಟರಿ ಹಾಳಾಗುವುದು, ಹೀಟ್​​ ಆಗುವುದನ್ನು ತಪ್ಪಿಸುತ್ತದೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    Dark Spot Remedy: ಮುಖದ ಮೇಲಿನ ಕಪ್ಪು ಕಲೆ ಮುಜುಗರ ಉಂಟು ಮಾಡ್ತಿದ್ರೆ ಇಲ್ಲಿದೆ ಸೂಪರ್‌ ಟಿಪ್ಸ್..!‌

    May 16, 2025

    ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಸಿಂಪಲ್ ಮನೆಮದ್ದು ಬಳಸಿ!

    May 16, 2025

    ನಿಮ್ಮ ಮನೆಯಲ್ಲೂ ಇಲಿಗಳ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಹೀಗೆ ಮಾಡಿ ಓಡ್ಸಿ!

    May 16, 2025

    ತುಂಬಾ ದಪ್ಪಗಿದ್ದೀನಿ ಅಂತ ಚಿಂತೆ ಕಾಡ್ತಿದ್ಯಾ!? ಈ ಬಗೆಯ ಹಣ್ಣುಗಳನ್ನು ಜಾಸ್ತಿ ತಿನ್ನಬೇಡಿ!

    May 15, 2025

    ಮದ್ಯಪ್ರಿಯರಿಗೆ ಬಿಗ್ ಶಾಕ್: 3ನೇ ಬಾರಿ ಎಣ್ಣೆ ದರ ಏರಿಕೆ! ಯಾವ ಬ್ರ್ಯಾಂಡ್ ಎಷ್ಟು?

    May 15, 2025

    ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!

    May 15, 2025

    ಬೆಂಗಳೂರಿನಲ್ಲಿ ಮನೆ ಕಟ್ಟುವ ಯೋಚನೆ ಇದ್ಯಾ!? ಹಾಗಿದ್ರೆ BBMP ರೂಲ್ಸ್ ಫಾಲೋ ಮಾಡಿ!

    May 15, 2025

    ಮಾವಿನ ಹಣ್ಣು ತಿಂದು ಸಿಪ್ಪೆ ಎಸೆಯುತ್ತೀರಾ!? ಹಾಗಿದ್ರೆ ಈ ಸ್ಟೋರಿ ನೋಡಿ!

    May 15, 2025

    ಮೊಸರು ತಿಂದಾಕ್ಷಣ ನೀರು ಕುಡಿಯಬಾರದು ಯಾಕೆ!? ಇದು ನಿಮಗಿದು ಗೊತ್ತಾ!?

    May 15, 2025

    ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾರ ಬಾಹ್ಯಾಕಾಶ ಯಾನ ಮುಂದೂಡಿದ ನಾಸಾ..! ಯಾಕೆ ಗೊತ್ತಾ..?

    May 15, 2025

    Microsoft layoff: ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್..! ಯಾಕೆ ಗೊತ್ತಾ..?‌

    May 15, 2025

    ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ: ತಾಯಿಯ ಕಿಡ್ನಿಯಿಂದ ಉಳಿಯಿತು ಮಗಳ ಜೀವ!

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.