ಚೆನ್ನೈನಲ್ಲಿ ನಿನ್ನೆ ನಡೆದ IPL ಪಂದ್ಯದಲ್ಲಿ CSk ವಿರುದ್ಧ RCB ಭರ್ಜರಿ ಜಯ ದಾಖಲಿಸಿದೆ. ಐಪಿಎಲ್ 2025ರ ಎಂಟನೇ ಪಂದ್ಯದಲ್ಲಿ, ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕ ಮತ್ತು ಶಿಸ್ತಿನ ಬೌಲಿಂಗ್ ಪ್ರದರ್ಶನದ ಬಲದಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್‌ಗಳಿಂದ ಸೋಲಿಸಿತು.
ಇಂದು ವರ್ಷದ ಮೊದಲನೇ ಸೂರ್ಯ ಗ್ರಹಣ: ಯಾವ ಸಮಯದಲ್ಲಿ ಗ್ರಹಣ ಗೋಚರಿಸಲಿದೆ?
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಪಂದ್ಯದ ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಮೈದಾನದಲ್ಲಿ ನಾವು ಕಲೆಹಾಕಿದ್ದು ಉತ್ತಮ ಮೊತ್ತವಾಗಿತ್ತು. ಚೆಂಡು ಸ್ವಲ್ಪ ನಿಂತು ಬರುತ್ತಿತ್ತು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಇದು ಸುಲಭವಾಗಿರಲಿಲ್ಲ ಎಂದು ಹೇಳಿದರು. ಇದೇವೇಳೆ ಇಲ್ಲಿ ಅನೇಕ ಅಭಿಮಾನಿಗಳಿರುವ ಕಾರಣ ಚೆನ್ನೈ ವಿರುದ್ಧ ಚೆಪಾಕ್‌ನಲ್ಲಿ ಆಡುವುದು ಯಾವಾಗಲೂ ವಿಶೇಷವಾಗಿರುತ್ತದೆ ಎಂದು ಟಾಂಗ್ ನೀಡಿದರು. ಬಳಿಕ ಸಿಎಸ್ಕೆ ಮಾತ್ರವಲ್ಲ, ಪ್ರತಿಯೊಂದು ತಂಡದ ವಿರುದ್ಧವೂ ಅವರ ತವರು ಮೈದಾನದಲ್ಲಿ ಆಡುವುದು ವಿಶೇಷ ಎಂದರು.
ಪಿಚ್ನಲ್ಲಿ ಟಾರ್ಗೆಟ್ ಬೆನ್ನಟ್ಟುವುದು ಸುಲಭವಲ್ಲ ಎಂದು ನಮಗೆ ತಿಳಿದಿತ್ತು. ಹೀಗಾಗಿ ನಾವು ಸುಮಾರು 200 ರನ್‌ಗಳ ಗುರಿ ಇಟ್ಟುಕೊಂಡಿದ್ದೆವು. ನಾನು ಆ ಮೊತ್ತ ತಲುಪುವ ವರೆಗೆ ಪ್ರತಿ ಚೆಂಡನ್ನು ಬಿಗ್ ಹಿಟ್ಗೆ ಪ್ರಯತ್ನಿಸುವುದು ನನ್ನ ಗುರಿಯಾಗಿತ್ತು. ನಾವು ಬ್ಯಾಟಿಂಗ್ ಲೈನ್ ಅಪ್ ಅನ್ನು ಬದಲಾಯಿಸಿಲ್ಲ, ಅದು ಕಳೆದ ಪಂದ್ಯದಂತೆಯೇ ಇತ್ತು ಎಂದು ಹೇಳಿದ್ದಾರೆ.
ಸ್ಪಿನ್ನರ್‌ಗಳಿಗೆ ಟ್ರ್ಯಾಕ್ ಸಾಕಷ್ಟು ಸಹಾಯಕವಾಗಿತ್ತು. ನಾವು ಸ್ಪಿನ್ನರ್‌ಗಳನ್ನು ಮೊದಲೇ ಬಳಸಲು ಬಯಸಿದ್ದೆವು ಮತ್ತು ಲಿವಿಂಗ್‌ಸ್ಟೋನ್ ಬಂದು ಬೌಲಿಂಗ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ಹ್ಯಾಜಲ್‌ವುಡ್‌ನ ಮೊದಲ ಓವರ್ ಮತ್ತು ಹೊಸ ಚೆಂಡಿನ ಬೌಲಿಂಗ್ ಇದು ಪಂದ್ಯದ ಗತಿಯನ್ನು ಬದಲಾಯಿಸುವ ಕ್ಷಣವಾಗಿತ್ತು. ಏಕೆಂದರೆ ಪವರ್‌ಪ್ಲೇನಲ್ಲಿ ನಾವು 2-3 ವಿಕೆಟ್‌ಗಳನ್ನು ಪಡೆದಿದ್ದೇವೆ ಎಂದು ನಾನು ಭಾವಿಸುತ್ತೇನೆ, ಅವರು ಹಾರ್ಡ್ ಲೆಂಗ್ತ್ ಅನ್ನು ಸ್ಥಿರವಾಗಿ ಹೇಗೆ ಬೌಲಿಂಗ್ ಮಾಡಿದರು ಎಂಬುದನ್ನು ನೋಡುವುದು ಒಂದು ಅದ್ಭುತ ಎಂದು ರಜತ್ ಪಾಟಿದರ್ ಹೇಳಿದ್ದಾರೆ