ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ‘ಕಿರಾತಕ’ ನಟಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಧೂಮಪಾನ ಮಾಡುತ್ತಾ, ಕಡಲ ಕಿನಾರೆಯಲ್ಲಿ ಸ್ನೇಹಿತೆ ಜೊತೆ ತಿರುಗಾಡುತ್ತಾ ಇರುವ ವಿಡಿಯೋ ಕಂಡು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ.
ನಟಿ ಓವಿಯಾ ಸದ್ಯ ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಸಿಗರೇಟ್ ಸೇದಿದ್ದಾರೆ. ಧಮ್ ಎಳೆದು ಬೀಚ್ನಲ್ಲಿ ಓಡಾಡಿದ್ದಾರೆ. ಮೀನುಗಾರರ ಜೊತೆ ಮಾತನಾಡಿದ್ದಾರೆ. ಕಡಲ ಕಿನಾರೆಯಲ್ಲಿ ತಮ್ಮ ಸ್ನೇಹಿತೆಯ ಜೊತೆ ಸುತ್ತಾಡುತ್ತಾ ಅಲ್ಲಿಯೇ ಇದ್ದ ನಾಯಿಯ ಜೊತೆ ಆಟವನ್ನು ಆಡಿದ್ದಾರೆ. ಸದ್ಯಕ್ಕೆ ಓವಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನಟಿಯಾಗಿ ಸಂದೇಶವನ್ನು ಸಾರಬೇಕಾದ ನೀವೇ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಎಷ್ಟು ಸರಿ ಎಂದೆಲ್ಲಾ ನಟಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.