Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಪಹಲ್ಗಾಮ್’ನ ಉಗ್ರರ ದಾಳಿ: ಸರ್ಕಾರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ – ಸಿಎಂ ಸಿದ್ದರಾಮಯ್ಯ

    By Author AINApril 23, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನ ಉಗ್ರರ ದಾಳಿಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಸಕಲ ವ್ಯವಸ್ಥೆ ಮಾಡಲಾಗಿದೆ ಹಾಗೂ ಉಗ್ರರ ದಾಳಿಯ ಮಾಹಿತಿ ಕೊರತೆ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.

    ಕನ್ನಡಿಗರನ್ನು ಕರೆತರಲು ಕಾರ್ಮಿಕ ಸಚಿವರಿಗೆ ಸೂಚನೆ

    ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿಗಳು, ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ಹಾಗೂ ಭರತ್ ಭೂಷಣ್ ಎಂಬುವರು ಮೃತರಾಗಿರುವ ಬಗ್ಗೆ ಮಾಹಿತಿ ನೀಡಿದರು.. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಅಲ್ಲದೇ, ಕಾಶ್ಮೀರಕ್ಕೆ ತೆರಳಿರುವ 40 ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳಿಸಲಾಗಿದೆ ಎಂದರು.

    Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!

    ಕಾಶ್ಮೀರದ ಪಹಲ್ಗಾಮ್ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ಘಟನೆಯಲ್ಲಿ ಗುಪ್ತಚರ ಮಾಹಿತಿಯ ವೈಫಲ್ಯವಿದೆ ಎಂದರು.

    ದೇಶದ ಜನರಿಗೆ ಕೇಂದ್ರ ಭದ್ರತೆ ಒದಗಿಸಬೇಕು

    ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ, ಸಕಾರಾತ್ಮಕವಾಗಿ ಚಿಂತಿಸಿ ಪರಿಶೀಲಿಸಲಿದೆ. ಪೆಹಲ್ಗಾಮಿನ ಉಗ್ರರ ದಾಳಿ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

    Post Views: 3

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರು ಸೇಫ್‌ ಅಲ್ಲ ಅನ್ನೋವರು ಈ ಸುದ್ದಿ ಓದಲೇಬೇಕು..ರಾಜಧಾನಿ ಅತ್ಯಂತ ಸುರಕ್ಷಿತ ನಗರ ಎಂದ ಸರ್ವೇ

    May 14, 2025

    ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ!

    May 14, 2025

    ಕಾಂಗ್ರೆಸ್ ಅವಧಿಯಲ್ಲಿ ಉಗ್ರರ ವಿರುದ್ಧ ಕ್ರಮ ಯಾಕೆ ಆಗಿಲ್ಲ? – ರವಿಕುಮಾರ್ ಪ್ರಶ್ನೆ!

    May 14, 2025

    ರೌಡಿಶೀಟರ್ ಅಂದ ಮಾತ್ರಕ್ಕೆ ಎಲ್ಲರು ರೌಡಿಗಳಾಗಿರುತ್ತಾರೆ ಅಂತ ಭಾವಿಸಬಾರದು: ಸಿಟಿ ರವಿ

    May 14, 2025

    ಖಾಸಗಿ ಹಿಡಿತದಿಂದ 108 ಅಂಬ್ಯುಲೆನ್ಸ್ ಮುಕ್ತ – ರಾಜ್ಯ ಸರ್ಕಾರದಿಂದಲೇ ಅಂಬ್ಯುಲೆನ್ಸ್ ಸೇವೆ – ಸಚಿವ ದಿನೇಶ್ ಗುಂಡೂರಾವ್

    May 14, 2025

    ವಿರಾಟ್‌ ಕೊಹ್ಲಿಗೆ ವಿಶೇಷವಾಗಿ ಗೌರವ ಸಲ್ಲಿಸಲಿರುವ RCB ಅಭಿಮಾನಿಗಳು..ಆ ದಿನ ಕಾದಿದೆ ಕ್ರಿಕೆಟ್‌ ಪ್ರೇಮಿಗಳಿಗೆ ಅಚ್ಚರಿ!

    May 14, 2025

    ಭದ್ರಾ ಮೇಲ್ದಂಡೆ: 5300 ಕೋಟಿ ಘೋಷಣೆ ಮಾಡಿ ನಯಾಪೈಸೆ ಕೊಟ್ಟಿಲ್ಲ: ನಿರ್ಮಲಾ ಸೀತಾರಾಮನ್ ವಿರುದ್ಧ ಸಿದ್ದು ಕಿಡಿಕಿಡಿ

    May 14, 2025

    ಜೈಲು ಸೇರಿದ್ದವನಿಗೆ ಅಧ್ಯಕ್ಷ ಪಟ್ಟಕ್ಕೆ ಶಿಫಾರಸು ವಿಚಾರ: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು..?

    May 14, 2025

    ಕೆಜಿಎಫ್‌ ನೋಡಿದ್ದೀರಾ ಎಂದ ನಿಖಿಲ್‌ ಕಾಮತ್‌..ಸೆನ್ಸೇಷನ್‌ ಕಮೆಂಟ್‌ ಮಾಡಿದ ಟ್ರಾಫಿಕ್ ಜಾಯಿಂಟ್ ಕಮಿಷನರ್ ಅನುಚೇತ್!

    May 14, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    ಜಾತಿಗಣತಿ ಮರು ಸರ್ವೆ: ಗೃಹಮಂತ್ರಿ ಪರಮೇಶ್ವರ್‌ ಫುಲ್‌ ಮಾರ್ಕ್ಸ್‌ !

    May 14, 2025

    Greater Bengaluru: ನಾಳೆಯಿಂದ BBMP ಔಟ್:‌ ಇನ್ಮುಂದೆ ‘ಗ್ರೇಟರ್’ ಬೆಂಗಳೂರು ಅಸ್ತಿತ್ವಕ್ಕೆ

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.