ಪರಭಾಷೆಗಳಲ್ಲಿ ಹೋಲಿಸಿಕೊಂಡರೆ ಕನ್ನಡದಲ್ಲಿ ವೆಬ್ ಸೀರಿಸ್ ಗಳು ಕಡಿಮೆ ಎಂಬ ಮಾತಿದೆ. . ಹೀಗಾಗಿ ಜನರು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ವೆಬ್ ಸಿರೀಸ್‌ಗಳತ್ತ ಮುಖ ಮಾಡಿದ್ದಾರೆ. ಇದೀಗ ಕನ್ನಡದಲ್ಲಿಯೂ ಮಿನಿ ವೆಬ್ ಸರಣಿ ಬಿಡುಗಡೆಯಾಗಿದ್ದು, ನೋಡಿದವರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ರೋಚಕತೆ ಜೊತೆಗೆ ಭಯ, ನಂಬಿಕೆ ಹಾಗೂ ಫ್ಯಾಮಿಲಿಯ ಕಥೆಯನ್ನು ಒಳಗೊಂಡಿರುವ ‘ಅಯ್ಯನ ಮನೆ’ ವೆಬ್ ಸೀರಿಸ್ ಜೀ5ನಲ್ಲಿ ಬಿಡುಗಡೆಯಾಗಿದೆ. ಈ ವೆಬ್ ಸರಣಿಗೆ ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ. ಈ ಸೀರಿಸ್‌ನಲ್ಲಿ ಖುಷಿ ರವಿ, ಮಾನಸಿ ಸುಧೀರ್, ಅಕ್ಷಯ್ ನಾಯಕ್, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ, ಅರ್ಚನಾ ಕೊಟ್ಟಿಗೆ, ಶೋಭರಾಜ್ ಪಾವೂರ್ ಮುಂತಾದವರು ನಟಿಸಿದ್ದಾರೆ.
ಎಲ್.ವಿ ಮುತ್ತು ಗಣೇಶ್ ಸಂಗೀತ, ರಾಹುಲ್ ರಾಯ್ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್ ಸಂಕಲನ ಈ ವೆಬ್ ಸೀರಿಸ್‌ಗೆ ಇದೆ. ಅಯ್ಯನ ಮನೆಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಅಯ್ಯನ ಮನೆ ವೆಬ್ ಸೀರಿಸ್‌ನಲ್ಲಿ ಏಳು ಎಪಿಸೋಡ್‌ಗಳು ಇವೆ.
ವೆಬ್‌ಸಿರೀಸ್ ಪ್ರೇಮಿಗಳಿಗೆ ಈ ಸರಣಿ ಒಂದೊಳ್ಳೆ ಅನುಭವ ನೀಡುತ್ತಿದೆ. ‘ಅಯ್ಯನ ಮನೆ’ ಚಿತ್ರಂಗದಲ್ಲಿ ಹೊಸ ಪ್ರಯೋಗಕ್ಕೆ ಕನ್ನಡಿಗರು ಸಾಕ್ಷಿ ಎನ್ನಬಹುದು. ವಾರಾಂತ್ಯದಲ್ಲಿ ಕೂತು ನೋಡಬಹುದಾದ ಕನ್ನಡ ವೆಬ್ ಸರಣಿ ಇದಾಗಿದೆ.