ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ರಾಮಾಯಣ ಸಿನಿಮಾ ಮುಂದಿನ ವರ್ಷದ ದೀಪಾವಳಿ 2026 ರಂದು ಬಿಡುಗಡೆಯಾಗಲಿದೆ. ದಂಗಲ್ ಮತ್ತು ಚಿಚೋರೆ ಖ್ಯಾತಿಯ ನಿರ್ದೇಶಕರ ನಿತೇಶ್ ತಿವಾರಿ ಸಾರಥ್ಯದಲ್ಲಿ ಈ ದೃಶ್ಯಕಾವ್ಯ ಮೂಡಿ ಬರುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಟೀಸರ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆದ್ರೆ ಇಲ್ಲಿವರೆಗೂ ರಾಮಾಯಣ ಮೊದಲ ಭಾಗದ ಸಣ್ಣದೊಂದು ಅಪ್ಡೇಟ್ ಕೂಡ ಸಿಕ್ಕಿಲ್ಲ. ಇದೀಗ ಚಿತ್ರತಂಡ ಆ ವೇದಿಕೆಯಲ್ಲಿ ಪೋಸ್ಟರ್ ಅಥವಾ ವಿಡಿಯೋ ಬಿಡುಗಡೆ ಮಾಡಲು ಸಜ್ಜಾಗುತ್ತಿದೆಯಂತೆ.
ಮೇರಿಂದ 1 4,ರವೆರೆಗೆ ನಡೆಯಲಿರುವ “ಮೊದಲ ವಿಶ್ವ ಆಡಿಯೋ ವಿಷುಯಲ್ & ಎಂಟರ್ಟೈನ್ಮೆಂಟ್ ಶೃಂಗಸಭೆ-ವೇವ್ಸ್” ವೇದಿಕೆಯಲ್ಲಿ ರಾಮಾಯಣದ ಮೊದಲ ಝಲಕ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆಯಂತೆ. ಚಿತ್ರರಂಗದ ವಿವಿಧ ತಾರೆಯರು ಈ ವೇದಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಇಲ್ಲಿ ಟೀಸರ್ ಅಥವಾ ಪೋಸ್ಟರ್ ಲಾಂಚ್ ಮಾಡಿದರೆ ಪ್ರೇಕ್ಷಕರಿಗೆ ತಲುಪಲಿದೆ ಎಂಬ ಐಡಿಯಾವನ್ನು ಚಿತ್ರತಂಡ ಹಾಕಿಕೊಂಡಿದೆಯಂತೆ.
ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಮತ್ತು ರಾಕಿಭಾಯ್ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಮುಂಬೈನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಎರಡು ಭಾಗಗಳಾಗಿ ರಾಮಾಯಣ ಕಾವ್ಯವನ್ನು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಮೊದಲ ಭಾಗ ಮುಂದಿನ ವರ್ಷ ತೆರೆಗೆ ಬಂದರೆ ಎರಡನೇ ಭಾಗ 2027ಕ್ಕೆ ಬಿಡುಗಡೆ ಆಗುವುದು ಖಚಿತವಾಗಿದೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.