ರಾಕಿಂಗ್ ಸ್ಟಾರ್ ಯಶ್ ಈ ಹೆಸರಿಗೆ ಇಂಟ್ರೂಡಕ್ಷನ್ ಅವಶ್ಯಕತೆ ಇಲ್ಲ. ಕನ್ನಡ ಚಿತ್ರರಂಗ ಕೀರ್ತಿ ಪತಾಕೆಯನ್ನು ಭಾರತೀಯ ಚಿತ್ರದ ತುಂಬೆಲ್ಲಾ ಹಬ್ಬಿರುವ ಅಣ್ತಮ್ಮಾ ತಮ್ಮದೇ ಮಾಸ್ಟರ್ ಮೈಂಡ್ ಎಂಬ ಪ್ರೊಡಕ್ಷನ್ ಶುರು ಮಾಡಿದ್ದಾರೆ. ಆ ಪ್ರೊಡಕ್ಷನ್ ನಡಿ ತಮ್ಮ ಅಪ್ ಕಮ್ಮಿಂಗ್ ಚಿತ್ರ ಟಾಕ್ಸಿಕ್ ಗೆ ಹಣ ಹಾಕಿದ್ದಾರೆ. ಅಲ್ಲದೇ ಈ ಪ್ರೊಡಕ್ಷನ್ ನಡಿ ರಾಮಾಯಣ ಸಿನಿಮಾ ಕೂಡ ತಯಾರಾಗುತ್ತಿದೆ. ಇದೀಗ ರಾಕಿಭಾಯ್ ರಿಯಲ್ ಮದರ್ ಕೂಡ ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ.
ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಸಿನಿಮಾ ಇಂಡಸ್ಟ್ರೀಗೆ ಹೆಜ್ಜೆ ಇಡುತ್ತಿದ್ದಾರೆ. ಅವರೇ PA ಪ್ರೊಡಕ್ಷನ್ ಶುರು ಮಾಡಿದ್ದು, ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ನಾಳೆ ಘೋಷಣೆಯಾಗುತ್ತಿದೆ ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವಾ ನಾಯಕ-ನಾಯಕಿಯರಾಗಿ ನಟಿಸಲಿರುವ ಚಿತ್ರಕ್ಕೆ ಶ್ರೀ ರಾಜ್ ಆಕ್ಷನ್ ಕಟ್ ಹೇಳಲಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿರಲಿದೆ. ಗೋಪಾಲ ಕೃಷ್ಣ ದೇಶಪಾಂಡೆ ಹಾಗೂ ರಾಜೇಶ್ ನಟರಂಗ ಕೂಡ ತಾರಾಗಣದಲ್ಲಿ ಇದ್ದಾರೆ.
ಪುಷ್ಪ ಅರುಣ್ ಕುಮಾರ್ ಅಣ್ಣಾವ್ರ ದೊಡ್ಡ ಅಭಿಮಾನಿ. ಅವರ ಕುಟುಂಬದ ಮೇಲೆ ಅಪಾರ ಗೌರವ ಪ್ರೀತಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರಿಲ್ಲಿಯೂ ಸಿನಿಮಾಪ್ರೀತಿ ಇದೆ. ಹೇಳಿಕೇಳಿ ಮಗ ಸೂಪರ್ ಸ್ಟಾರ್. ಯಶ್ ಕೂಡ ಕಷ್ಟಪಟ್ಟು ಮೇಲೆ ಬಂದವರು.. ಹೀಗಿದ್ಮೇಲೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಪುಷ್ಪ ಅರುಣ್ ಕುಮಾರ್ PA ಪ್ರೊಡಕ್ಷನ್ ಪ್ರಾರಂಭಿಸಿದ್ದಾರೆ. ನಾಳೆ ಈ ಸಂಸ್ಥೆಯ ಮೊದಲ ಚಿತ್ರದ ಟೈಟಲ್ ಏನೂ ಎಂಬುವುದು ಗೊತ್ತಾಗಲಿದೆ.