ರಾಜಕೀಯಕ್ಕೆ ಸಿನಿಮಾ ತಾರೆಯರ ಎಂಟ್ರಿ ಹೊಸತೇನಲ್ಲ. ಅದರಲ್ಲಿಯೂ ತಮಿಳುನಾಡು ರಾಜಕೀಯ ರಣಕಣದಲ್ಲಿ ಛಾಪೂ ಮೂಡಿಸಿರುವವರೆಲ್ಲರೂ ಸಿನಿಮಾತಾರೆಯರೇ. ಸಿನಿಮಾ ಹಿನ್ನೆಲೆಯಿಂದ ಬಂದು ರಾಜಕೀಯ ಪ್ರವೇಶಿಸಿದ ಎಂಜಿಆರ್, ಕರುಣಾನಿಧಿ, ಜಯಲಲಿತಾ ಸಿಎಂ ಸಹ ಆಗಿದ್ದಾರೆ. ತಮ್ಮದೇ ಪಕ್ಷ ಕಟ್ಟಿ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈಗ ದಳಪತಿ ವಿಜಯ್ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿ ರಾಜಕೀಯದಲ್ಲಿ ಚದುರಂಗದಲ್ಲಿ ದಾಳ ಉರುಳಿಸಲು ಸಜ್ಜಾಗುತ್ತಿದ್ದಾರೆ. ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿವೆ. ಇದೀಗ ದಳಪತಿ ರಾಜಕೀಯ ಪ್ರವೇಶದ ಬಗ್ಗೆ ಗೆಳೆಯ, ಥಲಾ ಅಜಿತ್ ಮೊದಲ ಬಾರಿಗೆ ಮಾತನಾಡಿದ್ದಾರೆ.
ಥಲಾ ಅಜಿತ್ ಹಾಗೂ ವಿಜಯ್ ಆತ್ಮೀಯ ಗೆಳೆಯರು. ಇಬ್ಬರು ಇಂಡಸ್ಟ್ರೀಯಲ್ಲಿ ಅವರದ್ದೇ ಆದ ಹೆಸರು, ಅಭಿಮಾನಿಗಳ ಬಳಗ ಸಂಪಾದಿಸಿದ್ದಾರೆ. ಮೊದಲ ಬಾರಿಗೆ ಅಜಿತ್ ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಥಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳೋದೇ ಕಡಿಮೆ. ನಟನೆ ಬಿಟ್ರೆ ಬೈಕ್ ಕಾರು ರೇಸಿಂಗ್ ಹುಚ್ಚು. ಕುಟುಂಬ ಸಿನಿಮಾ ರೇಸಿಂಗ್ ಇಷ್ಟೇ ಅಜಿತ್ ಲೈಫ್. ಸೂಪರ್ ಸ್ಟಾರ್ ಪಟ್ಟಕ್ಕೇರಿದ್ಮೇಲಂತೂ ಅಜಿತ್ ಸಂದರ್ಶನ ಕೊಡುವುದನ್ನೇ ಬಿಟ್ಟಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದಾರೆ.
ಈ ವೇಳೆ ವಿಜಯ್ ರಾಜಕೀಯ ಎಂಟ್ರಿ ಬಗ್ಗೆಯೂ ಅವರು ಮಾತನಾಡಿದ್ದಾರೆ. ನಾನು ರಾಜಕೀಯ ಆಕಾಂಕ್ಷೆಯಲ್ಲ. ಆದರೆ ನನ್ನ ಗೆಳೆಯರಿಗೆ ಮತ್ತು ಬದಲಾವಣೆ ತರಲು ಇಚ್ಛಿಸುವ ಯಾರಿಗಾದರೂ ನಾನು ಶುಭ ಹಾರೈಸುತ್ತೇನೆ .ಇದು 100% ಧೈರ್ಯಶಾಲಿ ನಡೆ ಎಂದು ಹೇಳಿದ್ದಾರೆ.
https://x.com/i/status/1917854510439096694
ಅಜಿತ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಆದ್ರೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳ ನೂಕುನುಗ್ಗಲು ವೇಳೆ ಅಜಿತ್ ಕುಮಾರ್ ಅವರಿಗೆ ಕಾಲು ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಮೊನ್ನೆಯಷ್ಟೇ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.