ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಎರಡೇ 2 ರನ್ಗಳಿಂದ ರೋಚಕ ಗೆಲುವು ಪಡೆದಿದೆ.
Crime News: ಪ್ರೀತ್ಸೋದು ತಪ್ಪಾ.. ತನಗಿಂತ 2 ವರ್ಷ ದೊಡ್ಡವಳನ್ನು ಲವ್ ಮಾಡಿದ್ದ ಯುವಕನ ಕೊಲೆ!
ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಅವರು, ಇದೊಂದು ತುಂಬಾ ಕಷ್ಟವಾದ, ರೋಮಾಂಚನವಾದ ಪಂದ್ಯವಾಗಿತ್ತು. ಬಲಿಷ್ಠ ಬ್ಯಾಟಿಂಗ್ ಮೂಡಿ ಬಂದಿದ್ದರಿಂದ ಧೈರ್ಯದಿಂದ ಬೌಲಿಂಗ್ ಮಾಡಿದ ಡೆತ್ ಓವರ್ ಸ್ಪೆಷಲಿಸ್ಟ್ಗೆ ಈ ಅಮೂಲ್ಯವಾದ ಕ್ರೆಡಿಟ್ ಸಲ್ಲಬೇಕು. ಆರ್ಸಿಬಿಯ ಮುಖ್ಯವಾದ ಬೌಲರ್ ಆಗಿರುವ ಡೆತ್ ಓವರ್ ಸ್ಪೆಷಲಿಸ್ಟ್ ಕೊನೆ ಓವರ್ನಲ್ಲಿ ನಮ್ಮ ಪರ ಕ್ಲಿಯರ್ ಕಟ್ ಫಲಿತಾಂಶ ಬರುವಂತೆ ಮಾಡಿದರು. ಹೀಗಾಗಿ ಈ ಎಲ್ಲ ಕ್ರೆಡಿಟ್ ಯಶ್ ದಯಾಳ್ಗೆ ಸಲ್ಲಬೇಕು ಎಂದು ರಜತ್ ಹೇಳಿದ್ದಾರೆ.
ಕಳೆದ ವರ್ಷವೂ ಯಶ್ ದಯಾಳ್ ಇದೇ ತಂಡದ ವಿರುದ್ಧ ರೋಚಕವಾಗಿ ಬೌಲಿಂಗ್ ಮಾಡಿ ಆರ್ಸಿಬಿಗೆ ನೆರವಾಗಿದ್ದರು. ಅದರಂತೆ ಈ ಬಾರಿಯು ನಮಗೆ ದೊಡ್ಡ ಗೆಲುವು ತಂದುಕೊಟ್ಟಿದ್ದಾರೆ. ಕೊನೆಯಲ್ಲಿ ಬೌಲಿಂಗ್ ಕೊಡುವಾಗ ಸುಯಾಶ್ ಮೇಲೂ ನಮಗೆ ವಿಶ್ವಾಸವಿತ್ತು. ಪಂದ್ಯ ಯಾರು ಗೆಲ್ಲುತ್ತಾರೆ ಹೇಳುವುದು ಕಷ್ಟವಾಗಿತ್ತು. ಫಲಿತಾಂಶ ಫಿಫ್ಟಿ ಫಿಫ್ಟಿ ಇತ್ತು. ಆದರೆ ಇಲ್ಲಿವರೆಗೆ ತಂಡದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿರುವ ಯಶ್ ದಯಾಳ್ಗೆ ಬೆಂಬಲ ನೀಡಿದೆ. ಅದರಲ್ಲಿ ಯಶ್ ಗೆಲುವು ಪಡೆದಿದ್ದಾರೆ ಎಂದು ಹೇಳಿದರು.