Close Menu
Ain Live News
    Facebook X (Twitter) Instagram YouTube
    Sunday, May 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Farming Tips: ಕಡಿಮೆ ಬಂಡವಾಳದಲ್ಲಿ ಅಣಬೆ ಕೃಷಿ ಮಾಡಿ ಲಕ್ಷಗಟ್ಟಲೇ ಆದಾಯ ಪಡೆಯಿರಿ! ಹೇಗೆ ಗೊತ್ತಾ..?

    By Author AINMay 7, 2025
    Share
    Facebook Twitter LinkedIn Pinterest Email
    Demo

    ಮನುಷ್ಯನಿಗೆಅಣಬೆಒಂದುಉತ್ತಮ ಆಹಾರವಾಗಿದೆ.ಅಣಬೆಯಲ್ಲಿಪ್ರೋಟಿನ್ಮತ್ತು ಜೀವಸತ್ವಗಳು ಹೇರಳವಾಗಿದ್ದುಶರ್ಕರ ಪಿಷ್ಠ ಕಡಿಮೆ ಇರುವುದರಿಂದಸಕ್ಕರೆ ರೋಗಿಗಳಿಗೆ ಒಳ್ಳೆಯಆಹಾರ. ಅತ್ಯಧಿತ ಪ್ರೊಟೀನ್ ಇರುವ ಆಹಾರ ವರ್ಧಕಇತ್ತೀಚಿನದಿನಗಳಲ್ಲಿಅಣಬೆಗೆ ಬೇಡಿಕೆ ಹೆಚ್ಚುತ್ತಿದೆ.

    ಅಣಬೆಯಲ್ಲಿ ಪ್ರೊಟೀನ್, ಕಬ್ಬಿಣ, ಹಾಗೂ ತುಂಬಾನೇ ಮಿಟಿಮಿನ್ ಡಿ ಇರುತ್ತೆ, ಇದು ಡಯಾಬಿಟಿಸ್ ಇರುವರಿಗೆ ಇದು ತುಂಬಾ ಒಳ್ಳೆಯದು, ಹಾಗಾಗಿ ಮಕ್ಕಳಿಗೆ ಗರ್ಭಿಣಿಯರು ಕೂಡ ಇದು ಒಂದು ಒಳ್ಳೆಯ ಆಹಾರ ಎಂದು ಹೇಳಬಹುದು.

    ಇದನ್ನು ನಾವು ಭಾರತ ದೇಶದಲ್ಲಿ ಬಹಳ ಉಪಯೋಗಿಸುವುದಿಲ್ಲ ಆದರೆ ಬೇರೆ ರಾಷ್ಟ್ರಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಇದರ ಬೇಡಿಕೆ ತುಂಬಾ ಹೆಚ್ಚುತ್ತಿದೆ.

    ಅದಲ್ಲದೆ ನಮ್ಮ ದೇಶದ ರೈತರು ಕೃಷಿಯೊಂದಿಗೆ ಇದನ್ನು ಮಾಡುತ್ತಾ ಹೆಚ್ಚಿನ ಹಣವನ್ನು ಗಳಿಸಬಹುದು. ಅಣಬೆ ಬೇಸಾಯಕ್ಕೆ ತಂಪಾದ ಗಾಳಿ ಹಾಗೂ ಮಂದಬೆಳಕು ಇರುವಂತಹ ಜಾಗ ಬೇಕು, ಹಾಗೆ  ಸ್ವಚ್ಛವಾಗಿ ಇರುವಂತಹ ಗಾಳಿಯ ಪ್ರದೇಶದಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಅಣಬೆ ಬೆಳೆಯಲು ನಮಗೆ ಮುಖ್ಯವಾಗಿ ಬೇಕಾಗಿರೋದು ಒಣಗಿದ ತ್ಯಾಜ್ಯ ಅದು ಭತ್ತದ ಹುಲ್ಲು ಆಗಿರಬಹುದು ಅಥವಾ ಗೋಧಿ ಹುಲ್ಲು  ಆಗಿರಬಹುದು ಅಥವಾ ರಾಗಿಯ ಅಥವಾ ಜೋಳದ ದಂಟು ಕೂಡ ಇರಬಹುದು.

    Operation Sindoor: ಜಸ್ಟ್ 23 ನಿಮಿಷಕ್ಕೆ ಪಾಕ್ ಶೇಕ್… ಭಾರತದ ದಾಳಿ ಹೇಗಿತ್ತು? ಏನಾಯ್ತು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    ರಾತ್ರಿ ಹೊತ್ತು ನಾವು ಹುಲ್ಲನ್ನು ಚೆನ್ನಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ ಎಂಟರಿಂದ ಹತ್ತು ಗಂಟೆ ನೀರಿನಲ್ಲಿ ನೆನೆಸಬೇಕು, ಅದು ನೆನೆದ ನಂತರ ಬೆಳಗ್ಗೆ ಅದನ್ನು ಮತ್ತೊಮ್ಮೆ ಬಿಸಿನೀರಿನಲ್ಲಿ ಕುದಿಸಬೇಕು, ಹೀಗೆ ಮಾಡುವುದರ ಮೂಲಕ ನಾವು ಹುಲ್ಲಿ ನಲ್ಲಿ ಇರುವಂತಹ ಬ್ಯಾಕ್ಟೀರಿಯಾ ಅಥವಾ ಕ್ರಿಮಿಕೀಟಗಳನ್ನು ಕೊಲ್ಲಬಹುದು, ಹಾಗೂ ಹುಲ್ಲು ಕೂಡ ಮೆತ್ತಗೆ ಆಗುತ್ತದೆ.

    ಈಗ ನಮಗೆ ಬೇಸಾಯಕ್ಕೆ ಬೇಕಾದ ಅಂತ ಎಲ್ಲಾ ಸಾಮಗ್ರಿಗಳು ತಯಾರಾಗಿವೆ, ಈಗ ನಾವು ಹುಲ್ಲನ್ನು ಒಂದು ಪ್ಲಾಸ್ಟಿಕ್ ಹಾಳೆಯಲ್ಲಿ ತೆಗೆದುಕೊಳ್ಳಬೇಕು, ಈಗ ನಾವು ಏನು ಮಾಡಬೇಕು ಅಂದರೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಒಂದು ಪದರ ಹುಲ್ಲು ಹಾಗೂ ಅದರ ಮೇಲೆ ಸ್ವಲ್ಪ ಅಣಬೆ ಬೀಜಗಳನ್ನು ಉದುರಿಸಬೇಕು, ಮತ್ತೆ ಒಂದು ಪದರ ಹುಲ್ಲು  ಹಾಕಬೇಕು ಮತ್ತೆ ಅಣಬೆ ಬೀಜವನ್ನು ಹಾಕಬೇಕು, ನಾವು ಅಣಬೆ ಬೀಜಗಳನ್ನು ಸುತ್ತಲು ಕೂಡ ಪ್ಲಾಸ್ಟಿಕ್ ಹಾಳೆಯಲ್ಲಿ ಕಾಣುವಹಾಗೆ ಹಾಕಬೇಕು, ಮಧ್ಯದಲ್ಲಿ ಹಾಕಬಾರದು.

    ಹೀಗೆ ಒಂದೊಂದು ಪದರಗಳನ್ನು ರಚಿಸುತ್ತಾ ಹೋಗಿ ಹಾಳೆ ತುಂಬಿದಾಗ ಮೇಲೆ ಒಂದು ಪದರು ಬೀಜವನ್ನು ಉದುರಿಸಿ ಹಾಳೆಯನ್ನು ಚೆನ್ನಾಗಿ ಕಟ್ಟಬೇಕು, ಹಾಗೂ ಹಾಳೆಯಲ್ಲಿ ಗಾಳಿಯಾಡುವ ಸಲುವಾಗಿ ಕಟ್ಟಿಗೆಯಿಂದ ಸನ್ನ  ತೂತುಗಳನ್ನು ಮಾಡಬೇಕು.

    ಈ ರೀತಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ನಂತರ ಅದನ್ನು ನಿಮ್ಮ ಅಣಬೆ ಶೆಡ್ ನಲ್ಲಿ ಇಡಬೇಕು, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅಂದರೆ ನೀವು ಎಷ್ಟು ಅಣಬೆಯನ್ನು ಉತ್ಪಾದಿಸಬಹುದು ಎಂಬುದರ ಮೇಲೆ ನಿಮ್ಮ ಶೆಡ್ ಪ್ರಮಾಣ ಇರಬೇಕು. 15ರಿಂದ 20 ದಿನಗಳಲ್ಲಿ ಅಣಬೆಗಳಲ್ಲಿ ಮೊಳಕೆ ಒಡೆಯುತ್ತದೆ, ಆಗ ನೀವು ಹುಲ್ಲನ್ನು ಹೊರಗೆ ತೆಗೆದು ಅದಕ್ಕೆ ಪ್ರತಿದಿನ ನೀರನ್ನು ಚಿಮುಕಿಸಬೇಕು.

    ಹೀಗೆ ಮುಂದಿನ 10  ದಿನಗಳಲ್ಲಿ ನಿಮ್ಮ ಅಣಬೆ ತಯಾರಾಗಿರುತ್ತದೆ. ಕಟಾವ ಮಾಡಿಕೊಂಡು ನಿಮ್ಮ ಹತ್ತಿರದಲ್ಲಿರುವ ಮಾರ್ಕೆಟ್ನಲ್ಲಿ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡಬೇಕು. ಅಣಬೆ ಬೀಜಕ್ಕೆ  70ರಿಂದ 80 ರೂಪಾಯಿ ಪ್ರತಿ ಕೆಜಿಗೆ ಬಿದ್ದರೆ, ಅಣಬೆಗೆ ನೂರರಿಂದ ಮುನ್ನೂರು ರೂಪಾಯಿ ವರೆಗೆ ಮಾರುಕಟ್ಟೆಗೆ ಅನುಗುಣವಾಗಿ ನಿಮಗೆ  ಬೆಲೆ ದೊರಕುತ್ತದೆ. ನಿಮ್ಮ ಅಣಬೆಯ ಗುಣಮಟ್ಟದ ಮೇಲೆ ನಿನಗೆ ಬೆಲೆ ಬರುತ್ತದೆ ಹಾಗೂ ನೀವು ಒಂದು ಕೆಜಿ  ಅಣಬೆ ಬೀಜಗಳಿಂದ 20 ರಿಂದ 25 ಕಿಲೊ ಅಣಬೆಯನ್ನ ಬೆಳೆಯಬಹುದು, ಹಾಗಾಗಿ ನಾವು ಕಡಿಮೆ ಕರ್ಚಿನಲ್ಲಿ ಕಡಿಮೆ ಜಾಗದಲ್ಲಿ ಅಣಬೆ ಕೃಷಿ  ಮಾಡಬಹುದು.

    Post Views: 1

    Demo
    Share. Facebook Twitter LinkedIn Email WhatsApp

    Related Posts

    Gold Rate Today: ಅಪರಂಜಿ ಚಿನ್ನದ ಬೆಲೆ ಮತ್ತೆ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಇಲ್ಲಿದೆ

    May 11, 2025

    Mothers Day Special: ಅಮ್ಮಂದಿರ ದಿನಕ್ಕೆ ನಿಮ್ಮ ಪ್ರೀತಿಯ ಅಮ್ಮನಿಗೆ ಹೀಗೆ ಶುಭಾಶಯ ಕೋರಿ!

    May 11, 2025

    ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು: ಇಲ್ಲಿದೆ ಚಾರ್ಜ್ ಮಾಡದೆ 50 ವರ್ಷಗಳ ಕಾಲ ಕೆಲಸ ಮಾಡುವ ಬ್ಯಾಟರಿ!

    May 11, 2025

    Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ

    May 11, 2025

    ಕದನ ವಿರಾಮ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೈಅಲರ್ಟ್‌ ಗೆ ಸಿಎಂ ಸೂಚನೆ

    May 10, 2025

    ಪಹಲ್ಗಾಮ್ ದಾಳಿ ಪೂರ್ವ ನಿಯೋಜಿತ ಕೃತ್ಯ: ಸುಳ್ಳು ಸುದ್ದಿಗೆ ಬಿತ್ತು ಕೇಸ್‌

    May 10, 2025

    India-Pakistan: ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮಕ್ಕೆ 2 ರಾಷ್ಟ್ರಗಳು ಘೋಷಣೆ..!

    May 10, 2025

    Operation sindura-2.0: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಹೈಅಲರ್ಟ್

    May 10, 2025

    ಭಾರತ-ಪಾಕ್‌ ಕದನಕ್ಕೆ ವಿರಾಮ: ಉಭಯ ರಾಷ್ಟ್ರಗಳ ಸಮ್ಮತಿ – ಟ್ರಂಪ್‌ ಘೋಷಣೆ

    May 10, 2025

    ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು: ಸಿಎಂ ಸಿದ್ದರಾಮಯ್ಯ ಸೂಚನೆ

    May 10, 2025

    ಭಾರತ-ಪಾಕಿಸ್ತಾನ ಉದ್ವಿಗ್ನತೆ: ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

    May 10, 2025

    India Pakistan War: ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಅಧಿಕೃತ ವಿಡಿಯೋ ಬಿಡುಗಡೆ ಮಾಡಿದ ಸೇನೆ!

    May 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.