ಬೆಂಗಳೂರು: ಪಾಕಿಸ್ತಾನ ಒಂದು ಟೆರರ್ ಕಂಪೆನಿ, ಇದಕ್ಕೆ ಬುದ್ಧಿ ಕಲಿಸಬೇಕು ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯುದ್ಧ ಮಾಡಬೇಕು ಅಂದಾಗ ಗಾಂಧಿ ತತ್ವ ಶಾಂತಿ ಪಾಲಿಸಿ ಅಂದ್ರು.
ಈಗ ಯುದ್ಧ ಮಾಡಿ ಅಂತಿದ್ದಾರೆ. ನಾಳೆ ಮಾತುಕತೆ ಇದೆ, ಸಂಪೂರ್ಣ ಕದನ ವಿರಾಮ ಅಲ್ಲ ಇದು, ಈಗ ಇಂದಿರಾ ಗಾಂಧಿ ವಿಚಾರ ತರ್ತಿದ್ದಾರೆ, ಇದನ್ನ ನಕಲಿ ಗಾಂಧಿಗಳು ಮಾಡ್ತಿದ್ದಾರೆ ಎಂದು ಹೇಳಿದರು.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ಅಂತರಾಷ್ಟ್ರೀಯ ಮಟ್ಟದಲ್ಲಿ ನಾವೂ ಕೂಡ ಒಂದು ದೊಡ್ಡ ಶಕ್ತಿ ಎಂದ ಛಲವಾದಿ ನಾರಾಯಣಸ್ವಾಮಿ, ನಾವು ಪಾಕಿಸ್ತಾನದ ಹಾಗೆ ನಡೆದುಕೊಳ್ಳಲು ಆಗಲ್ಲ. ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ಸಾಗಬೇಕು. ಪಾಕಿಸ್ತಾನ ಒಂದು ಟೆರರ್ ಕಂಪೆನಿ, ಇದಕ್ಕೆ ಬುದ್ಧಿ ಕಲಿಸಬೇಕು. ನಮ್ಮ ಸೇನೆ ಪಾಕಿಸ್ತಾನದ ಹೆಡೆಮುರಿ ಕಟ್ಟಿದೆ, ನಾವು ಸೈನಿಕರ ಪರ ಇದ್ದೀವಿ ಎಂದು ಹೇಳಿದರು.