ನಾಗಿಣಿ ಸೀರಿಯಲ್ ಮೂಲಕ ಹೆಚ್ಚು ಖ್ಯಾತಿ ಗಳಿಸಿದವರು ನಮ್ರತಾ ಗೌಡ. ಬಾಲ ನಟಿಯಾಗಿ ಬೆಳೆದ ಇವರು ತಮ್ಮ ಪ್ರತಿಭೆ ಮೂಲಕ ಒಳ್ಳೊಳ್ಳೆ ಅವಕಾಶ ಪಡೆದುಕೊಂಡರು. ಬಿಗ್ ಬಾಸ್‌ಗೂ ಹೋಗಿ ಬಂದಿದ್ದ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಸಿಡಿದೆದಿದ್ದಾರೆ.
ನಮ್ರತಾ ಗೌಡ ಸದ್ಯ ‘ಕರ್ಣʼ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಖುಷಿ ನಡುವೆ ಅವರು ಬೇಸರ ಕೂಡ ಹೊರ ಹಾಕಿದ್ದಾರೆ. ರೋಷನ್ ಎಂಬಾತ, ರಾಕಿ ಜಿ43 (Rocky.g43) ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ನಮ್ರತಾಗೆ ಸಂದೇಶಗಳನ್ನು ಕಳಿಸಿದ್ದಾನೆ.
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ಆತ ತೆಗೆಸಿಕೊಂಡಿರುವ ಪ್ರೊಪೈಲ್ ಫೋಟೊ ಹಾಕಿರುವ ಆತ, ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟು ಇದ್ದು, ರಾಜಕಾರಣಿಗಳ ಜೊತೆಗೆ ಡೇಟಿಂಗ್ಗೆ ಬರಲು ಇಚ್ಛೆ ‘ಡೇಟಿಂಗ್’ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ಮೆಸೇಜ್ ಮಾಡಿದ್ದಾನೆ.
ಈ ಬಗ್ಗೆ ಪೋಸ್ಟ್ ಹಾಕಿರುವ ನಮ್ರತಾ ಗೌಡ, ‘ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ, ನಿನ್ನ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಇದೇ ಸಂದೇಶವನ್ನು ಎರಡು ಮೂರು ಬಾರಿ ನಮ್ರತಾ ಹೇಳಿದ್ದಾರೆ.