ಅನೇಕರ ಮನೆಯಲ್ಲಿ ಇಲಿಗಳ ಕಾಟವಿರುತ್ತದೆ ಆದರೆ ಅದನ್ನು ಕಡೆಗಣಿಸುತ್ತಾರೆ. ಕೆಲವೊಮ್ಮೆ ಇಲಿಗಳು ಅಡುಗೆ ಮನೆಯ ಸಾಮಗ್ರಿಗಳು, ಬಟ್ಟೆ ಬರೆಗಳನ್ನೆಲ್ಲಾ ತಿಂದು ಹಾಕುತ್ತದೆ. ಇದು ಬರೀ ಅಷ್ಟಕ್ಕೆ ಸೀಮಿತವಾಗಿಲ್ಲ. ಇಲಿಗಳಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.
ಗುಡ್ ನ್ಯೂಸ್: ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಗೌರವ ಧನ ಹೆಚ್ಚಿಸಿದ ಸರ್ಕಾರ!
ಇಲಿಗಳು ಮನೆಗೆ ಬರೋದು ಯಾರಿಗೂ ಇಷ್ಟವಿರೋದಿಲ್ಲ. ಯಾಕಂದ್ರೆ ಅವುಗಳಿಂದ ಆಗೋ ಉಪದ್ರ ಒಂದಾ, ಎರಡಾ? ಬಟ್ಟೆ ಕಟ್ ಮಾಡುತ್ತೆ, ದಿನಸಿ, ತರಕಾರಿಗಳನ್ನು ತಿನ್ನುತ್ತೆ ಹೀಗೆ ನಾನಾ ರೀತಿಯ ತೊಂದರೆಗಳೇ ಹೊರತು, ಒಂದೂ ಉಪಯೋಗವಂತು ಇಲ್ಲ. ಹಾಗಾದ್ರೆ ಹೀಗೆ ಉಪದ್ರ ಕೊಡೋ ಇಲಿ ಮನೆಗೆ ಯಾಕೆ ಬರುತ್ತೆ? ಹಾಗೂ ಅದನ್ನು ಈಸಿಯಾಗಿ ಓಡಿಸೋದು ಹೇಗೆ? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ.
ಮೊದಲಿಗೆ, ನೀವು ಮನೆಯಲ್ಲಿ ತಂಡಿಟ್ಟ ತಿಂಡಿಗಳ ಪರಿಮಳವನ್ನು ಮೂಸಿ ಅಥವಾ ಜಿಡ್ಡಿನಾಂಶ ಇರೋದ್ರಿಂದ ಇಲಿಗಳು ಅಟೋಮ್ಯಾಟಿಕ್ ಆಗಿ ನಿಮ್ಮ ಮನೆಗೆ ಎಂಟ್ರಿ ಕೊಡುತ್ತದೆ. ಹಾಗೆ ಅಲ್ಲಿಯೇ ಜಾಂಡ ಊರುತ್ತವೆ. ಇದನ್ನು ಓಡಿಸಲು ಇಷ್ಟು ಮಾಡಿ ಸಾಕು.
ರಾತ್ರಿ ಮಲಗುವ ಮುನ್ನ ಮನೆಯ ಎಲ್ಲಾ ಕಿಟಕಿಗಳನ್ನು ಸರಿಯಾಗಿ ಮುಚ್ಚಿ ಮತ್ತು ಎಲ್ಲಿಯಾದ್ರೂ ರಂಧ್ರಗಳು ಕಾಣಿಸಿಕೊಂಡ್ರೆ ಅವುಗಳನ್ನೂ ಸರಿಯಾಗಿ ಮುಚ್ಚಿಡಿ. ಇಲಿಗಳಿಗೆ ಸಣ್ಣ ಜಾಗವಿದ್ರೂ ಸಾಕು ನುಸುಳಿ ಬಂದೇ ಬಿಡುತ್ತದೆ.
ಮನೆಯಲ್ಲಿ ಇಲಿ ಕಾಣಿಸಿಕೊಂಡ ದಿನವೇ ಇಲಿ ಬೋನ್ ಇಟ್ಟುಬಿಡಿ. ಅದರೊಳಗೆ ಘಮಘಮ ಪರಿಮಳ ಬರುವ ತಿಂಡಿಯನ್ನು ಇಡಿ. ಮಾರನೇ ದಿನ ಸಿಕ್ಕಿಹಾಕಿಕೊಂಡಿರುತ್ತದೆ. ಅಥವಾ ಅಂಟನ್ನಾದ್ರೂ ನೀವು ಪ್ಲಾಸ್ಟಿಕ್ಗೆ ಹಚ್ಚಿ ಇಡಬಹುದು. ಅಲ್ಲಿಯೇ ಒದ್ದಾಡುತ್ತ ಬಿದ್ದಿರುತ್ತದೆ.
ಇಲಿಗಳಿಗೆ ಬೇಗನೆ ಸಂತಾನೋತ್ಪತ್ತಿ ಆಗುತ್ತದೆ. ಹೀಗಾಗಿ ನೀವು ಒಂದು, ಎರಡು ಇಲಿ ಇದೆ ಎಂದು ನೆಗ್ಲೆಕ್ಟ್ ಮಾಡಬೇಡಿ. ಮನೆಯ ತುಂಬಾ ಮತ್ತೆ ಇಲಿಗಳದ್ದೇ ಸಾಮ್ರಾಜ್ಯವಾಗುತ್ತದೆ.
ಆದಷ್ಟು ಮನೆಯನ್ನು ಸ್ವಚ್ಛವಾಗಿಡಿ. ಹಾಗೆಯೇ ಮನೆಯ ಎಲ್ಲಾ ಪೈಪ್ಗಳನ್ನು, ಬರ್ಡ್ಬಾತ್ಗಳಂತಹ ಕಂಟೇನರ್ಗಳನ್ನು ಪರಿಶೀಲಿಸಿ. ಯಾಕೆಂದರೆ ಅಲ್ಲಿಂದ ಕೂಡ ಇಲಿಗಳು ಬರುವ ಸಾಧ್ಯತೆ ಹೆಚ್ಚಿದೆ.