ಬೆಂಗಳೂರು:- ಕಳೆದ ತಿಂಗಳ ಏಪ್ರಿಲ್ 16 ಮತ್ತು 17 ರಂದು ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ ಫಲಿತಾಂಶವು ಇಂದು ಪ್ರಕಟವಾಗಲಿದೆ. ಕೆಸಿಇಟಿ 2025 ಫಲಿತಾಂಶವು ಇಂದು ಮಧ್ಯಾಹ್ನ 2:00 ಗಂಟೆಗೆ cetonline.karnataka.gov.in ನಲ್ಲಿ ಲಭ್ಯವಿರುತ್ತದೆ. ಫಲಿತಾಂಶವನ್ನು karresults.nic.in ನಲ್ಲಿಯೂ ಕಾಣಬಹುದು. ಫಲಿತಾಂಶದ ಜೊತೆಗೆ, ಸರಿಯಾದ ಉತ್ತರ ಕೀ, ಫಲಿತಾಂಶವನ್ನು ತಡೆಹಿಡಿಯಲಾದ ಅಭ್ಯರ್ಥಿಗಳ ಪಟ್ಟಿ ಮತ್ತು ಟಾಪರ್‌ಗಳ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಲಿದೆ.
Virat Kohli: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ.. ಏನದು?
ಬೆಳಿಗ್ಗೆ 11:30ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ನಂತರ ಇಲಾಖೆಯ ವೆಬ್ ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಕೆಇಎ ತಿಳಿಸಿದೆ.
ಈ ಲಿಂಕ್ ಮೂಲಕ ರಿಸಲ್ಟ್ ನೋಡಿ
(1) https://t.co/TLplrLc0qv
(2) https://t.co/7q9hak7Y9z
(3) https://x.com/CMofKarnataka
(4) https://x.com/drmcsudhakar
(5) https://x.com/KEA_karnataka
ಈ ಲಿಂಕ್ಗಳಲ್ಲಿ ಮೂಲಕ ವೆಬ್ ಸೈಟ್ಗೆ ಹೋಗಿ ಸಿಇಟಿ ರಿಸಲ್ಟ್ ನೋಡಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಿಸೆಲ್ಟ್ ಚೆಕ್ ಮಾಡಲು ಹೀಗೆ ಮಾಡಿ
1. https://cetonline.karnataka.gov.in/kea ಈ ವೆಬ್ಸೈಟ್ಗೆ ಹೋಗಿ
2. “KCET ಫಲಿತಾಂಶಗಳು 2024” ಎಂದು ಲೇಬಲ್ ಮಾಡಲಾದ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
3. ನಿಮ್ಮ KCET ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
4. “Submit” ಮೇಲೆ ಕ್ಲಿಕ್ ಮಾಡಿ.
5. KCET ಫಲಿತಾಂಶ ಸ್ಕ್ರೀನ್ ಮೇಲೆ ಕಾಣುತ್ತೆ.
6. ಫಲಿತಾಂಶದ ಪ್ರತಿಯನ್ನ ಡೌನ್‌ಲೋಡ್ ಮಾಡಿಕೊಳ್ಳ
ಿ