ಮುಂಬೈ: ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರು ನಿವೃತ್ತಿ ಘೋಷಣೆ ಮಾಡಿದ್ದರು. ಬಳಿಕ ಈ ಮಾದರಿಗೆ ನಾಯಕ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿದ್ದು, ಇದೀಗ ಇದಕ್ಕೆ ಉತ್ತರ ಲಭ್ಯವಾಗಿದೆ.ಈ ಕುರಿತು ಬಿಸಿಸಿಐ ಇಂದು ಹೊಸ ನಾಯಕ, ಉಪನಾಯಕ ಪ್ರಕಟಿಸಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದರಿಂದ, ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಳಿಸದಿರುವುದರಿಂದ ಈ ಇಬ್ಬರು ದಿಗ್ಗಜರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಶುಭ್‌ಮನ್ ಗಿಲ್, ಜಸ್‌ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಹೊಸ ನಾಯಕರಾಗಿ ಮುಂಚೂಣಿಯಲ್ಲಿದ್ದರು. ಇದೀಗ ಬಿಸಿಸಿಐ ಶುಭಮನ್ ಗಿಲ್ ಅವರು ನಾಯಕಾಗಿ, ರಿಷಬ್ ಪಂತ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿದೆ.
Shubman Gill-led #TeamIndia are READY for an action-packed Test series 💪
A look at the squad for India Men’s Tour of England 🙌#ENGvIND | @ShubmanGill pic.twitter.com/y2cnQoWIpq
— BCCI (@BCCI) May 24, 2025
ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಶುಭಮನ್ ಗಿಲ್-ನಾಯಕ
ರಿಷಬ್ ಪಂತ್-ಉಪನಾಯಕ
ಯಶಸ್ವಿ ಜೈಸ್ವಾಲ್
ಕೆಎಲ್ ರಾಹುಲ್
ಅಭಿಮನ್ಯು ಈಶ್ವರನ್
ಕರುಣ್ ನಾಯರ್
ನಿತಿಶ್ ಕುಮಾರ್ ರೆಡ್ಡಿ
ರವೀಂದ್ರ ಜಡೇಜಾ
ಶರ್ದುಲಾ ಠಾಕೂರ್
ಜಸ್ಮೀತ್ ಬೂಮ್ರಾ
ಮೊಹಮ್ಮದ್ ಸಿರಾಜ್
ಸಾಯಿ ಸುದರ್ಶನ್
ಧ್ರುವ್ ಜುರೇಲ್
ವಾಷಿಂಗ್ಟನ್ ಸುಂದರ್
ಪ್ರಸಿದ್ಧ್ ಕೃಷ್ಣ
ಆಕಾಶ್ ದೀಪ್
ಕುಲ್ದೀಪ್ ಯಾದವ್
ಅರ್ಷದೀಪ್ ಸಿಂಗ್
ಮುಂದಿನ ತಿಂಗಳು ಜೂ. 20 ರಿಂದ ಆಗಸ್ಟ್ 4 ರವರೆಗೆ ಭಾರತ ಮತ್ತು ಇಂಗ್ಲೆಂಡ್ (IND vs ENG Test ) ಸರಣಿ ನಡೆಯಲಿದೆ.
ಭಾರತ v/s ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್
ಕನ್ನಡಿಗರಿಗೆ ಚಾನ್ಸ್!
ಕೆಎಲ್ ರಾಹುಲ್, ಕರುಣ್ ನಾಯರ್, ಹಾಗೂ ಪ್ರಸಿದ್ದ್ ಕೃಷ್ಣ ಟೆಸ್ಟ್ ಕ್ರಿಕೆಟ್‌ಗೆನಲ್ಲಿ ಆಡುವ ಅವಕಾಶ ಸಿಕ್ಕಿದೆ. ಮೂವರು ಕನ್ನಡಿಗರು ಬೊಂಬಾಟ್ ಚಾನ್ಸ್ ಸಿಕ್ಕಿದ್ದು, ಕನ್ನಡಿಗರು ಖುಷಿಯಾಗಿದ್ದಾರೆ. ಇತ್ತೀಚೆಗೆ ಐಪಿಎಲ್‌ನಲ್ಲಿ ಜಿಟಿ ಪರ ಪ್ರಸಿದ್ಧ್ ಕೃಷ್ಣ್ ಅದ್ಭುತ ಬೌಲಿಂಗ್ ಪ್ರದರ್ಶನ ನಡೆಸುತ್ತಿದ್ದು, ಕರುಣ್ ನಾಯರ್ ದೆಹಲಿ ಕ್ಯಾಪಿಟಲ್ ಪರ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶನ ನಡೆಸಿದ್ದರು.
View this post on Instagram